/newsfirstlive-kannada/media/media_files/2025/08/17/cloudburst-2025-08-17-12-48-07.jpg)
ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿ ದುರಂತ ನಡೆದಿದೆ. ಕಳೆದ ವಾರ ಕಿಶ್ಟ್ವರ್ನಲ್ಲಿ ಸಂಭವಿಸಿದ ಮೇಘಸ್ಫೋಟಕ್ಕೆ 60 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಕಟುವಾ ಜಿಲ್ಲೆಯಲ್ಲಿ (Kathua district) ಮೇಘಸ್ಫೋಟದಿಂದ ಭೂಕುಸಿತ ಉಂಟಾಗಿ ಕನಿಷ್ಠ 7 ಮಂದಿ ಪ್ರಾಣಬಿಟ್ಟಿದ್ದು, 6 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಜೋಧ್ ಘಾಟಿ ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದಾಗಿ ಹಲವಾರು ಮನೆಗಳು ನೆಲಸಮಗೊಂಡಿವೆ. ಮಾತ್ರವಲ್ಲ, ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಡ್ಯಾಮೇಜ್ ಆಗಿದೆ. ಇನ್ನು ಅಪಾಯದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಬೆಂಗಳೂರಿಂದ ತೆರಳಿದ್ದ ಏರ್ ಇಂಡಿಯಾ ಜಸ್ಟ್ ಮಿಸ್
ಜೋಧ್ ಘಾಟ್ನಲ್ಲಿ ಇಲ್ಲಿಯವರೆಗೆ ಐವರು ಪ್ರಾಣಬಿಟ್ಟಿದ್ದಾರೆ. ಇನ್ನಿಬ್ಬರು ಜಂಗ್ಲೋಟ್ ಎಂಬ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ದುರಂತ ಅಂತ್ಯಕಂಡಿದ್ದಾರೆ. ಇಲ್ಲಿರುವ ಮನೆಗಳಿಗೂ ಭಾರೀ ಹಾನಿಯಾಗಿದೆ. ರಕ್ಷಣಾ ಸಿಬ್ಬಂದು ದುರ್ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣೆ ಮಾಡ್ತಿದ್ದಾರೆ. ರಕ್ಷಣಾಕಾರ್ಯಾಚರಣೆಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ದೆಹಲಿಗೆ ಬಂದಿಳಿದ ಗಗನಯಾತ್ರಿ ಶುಕ್ಲಾಗೆ ಅದ್ದೂರಿ ಸ್ವಾಗತ.. ಬರಮಾಡಿಕೊಂಡ ಕ್ಷಣ ಹೇಗಿತ್ತು..? Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ