Advertisment

ಗೆಳತಿಯ ಬರ್ಬರ ಹತ್ಯೆ, ಶವದ ಜೊತೆ ಸೆಕ್ಸ್​​.. ಬಳಿಕ ಆತ್ಮದ ಜೊತೆ ಮಾತುಕತೆಗೆ ಯತ್ನ.. ಹಾರರ್ ಸಿನಿಮಾವನ್ನೂ ಮೀರಿಸುವಂತಿದೆ..!

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯೋರ್ವಳ ಭೀಕರ ಹತ್ಯೆ ಪ್ರಕರಣವು ಇಡೀ ಮನು ಕುಲವನ್ನೇ ತಲ್ಲಣಗೊಳಿಸಿದೆ. ಸ್ಟೋರಿಗೆ ಸಂಬಂಧಿಸಿದ ಕಂಪ್ಲೀಟ್ ವಿವರ ಇಲ್ಲಿದೆ.

author-image
Ganesh Kerekuli
indore MBA Student case
Advertisment
  • ಯೂಟ್ಯೂಬ್ ನೋಡಿ ಪ್ರೇಮಿಯ 'ಆತ್ಮ'ದ ಜೊತೆ ಮಾತು!
  • ರಾತ್ರೆಯೆಲ್ಲ ಶವದ ಪಕ್ಕವೇ ಕುಳಿತು ಮದ್ಯಪಾನ
  • ಎಂಬಿಎ ವಿದ್ಯಾರ್ಥಿನಿ ಕೊಲೆ ಕೇಸ್‌ನಲ್ಲಿ ಪೈಶಾಚಿಕ ಕೃತ್ಯ

ಪ್ರೇಮಿಯನ್ನೇ ಬರ್ಬರವಾಗಿ ಕೊ*ಗೈದು, ಆಕೆಯ ಶವದ ಪಕ್ಕವೇ ಕುಳಿತು ಮದ್ಯಪಾನ ಮಾಡಿ ನಂತರ ಮುಂಬೈಗೆ ಪರಾರಿಯಾಗಿ ಅಲ್ಲಿ ‘ಆತ್ಮ’ದ ಜೊತೆ ಮಾತನಾಡಲು ಯತ್ನಿಸಿದ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯ ಪ್ರಕರಣದ (Indore MBA Student Murder Case) ವಿವರಗಳು ಇದೀಗ ದೇಶವನ್ನೇ ಬೆಚ್ಚಿಬೀಳಿಸಿದೆ.

Advertisment

ಆರೋಪಿ ಪಿಯೂಷ್ ಧಮನೋಟಿಯಾ (Piyush Dhamnotiya) ಎಂಬಾತನ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತ ಬಾಯಿಬಿಟ್ಟ ಸತ್ಯಗಳು ಹಾರರ್ ಸಿನಿಮಾಗಳನ್ನೂ ಮೀರಿಸುವಂತಿದೆ.

ನಡೆದಿದ್ದೇನು? ಆ ರಾತ್ರಿ ಆಗಿದ್ದೇನು?

ಫೆಬ್ರವರಿ 10 ರಂದು ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ಪಿಯೂಷ್ ವಿದ್ಯಾರ್ಥಿನಿಯೊಂದಿಗೆ ಕೊಠಡಿಗೆ ಬಂದಿದ್ದ. ಸುಮಾರು ಎರಡೂವರೆ ಗಂಟೆಗಳ ನಂತರ ಆತ ಒಬ್ಬನೇ ಬ್ಯಾಗ್ ಹಿಡಿದುಕೊಂಡು ಹೊರಹೋಗಿರುವುದು ಕಂಡುಬಂದಿದೆ.

ಇದನ್ನೂ ಓದಿ: ಕಿಶನ್ ಕಂ​ಬ್ಯಾಕ್ ಜರ್ನಿ ಸಖತ್ ಥ್ರಿಲ್ಲಿಂಗ್.. ಅಂದು ಯಾರಿಗೂ ಬೇಡವಾಗಿದ್ದ ಬ್ಯಾಟರ್..!

Advertisment

ಪೊಲೀಸ್ ಮೂಲಗಳ ಪ್ರಕಾರ, ಕೋಣೆಯೊಳಗೆ ಹೋದ ಪಿಯೂಷ್ ಯುವತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆಕೆ ಅನಾರೋಗ್ಯದ ಕಾರಣ ಹೇಳಿ ನಿರಾಕರಿಸಿದಾಗ, ಬಲವಂತವಾಗಿ ಅತ್ಯಾ*ರ ಎಸಗಿದ್ದಾನೆ. ನಂತರ ‘ನಿನಗೊಂದು ಗಿಫ್ಟ್ ಕೊಡುತ್ತೇನೆ’ ಎಂದು ಹೇಳಿ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ, ಹಗ್ಗದಿಂದ ಕೈಕಾಲುಗಳನ್ನು ಕಟ್ಟಿದ್ದಾನೆ. ಬಳಿಕ ಆಕೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿದ್ದಾನೆ. ಪ್ರಜ್ಞೆ ತಪ್ಪಿದ ಬಳಿಕ ಎದೆಗೆ ಚಾಕುವಿನಿಂದ ಇರಿದು ಕೊ* ಮಾಡಿದ್ದಾನೆ. ಇರಿತದ ರಭಸಕ್ಕೆ ಚಾಕುವೇ ಮುರಿದು ಹೋಗಿದೆ ಎನ್ನಲಾಗಿದೆ.

ಶವದ ಜೊತೆ ವಿಕೃತ ಕಾಮ, ಮದ್ಯಪಾನ:

ಮಾನವೀಯ ಸಂಗತಿ ಎಂದರೆ, ಕೊಲೆ ಮಾಡಿದ ನಂತರ ಪಿಯೂಷ್ ಕೋಣೆಯಿಂದ ಹೊರಬಂದು ಮದ್ಯ (Beer) ಖರೀದಿಸಿ ತಂದಿದ್ದಾನೆ. ಪ್ರೇಮಿಯ ಶವದ ಪಕ್ಕವೇ ಕುಳಿತು ಮದ್ಯಪಾನ ಮಾಡಿದ್ದಾನೆ. ಅಲ್ಲದೆ, ತಾನು ಮೃತದೇಹದ ಜೊತೆಯೂ ಲೈಂಗಿಕ ಕ್ರಿಯೆ (Necrophilia) ನಡೆಸಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ನಂತರ ಬಟ್ಟೆ ಬದಲಿಸಿ, ಯುವತಿಯ ಶ*ವವನ್ನು ಬೆತ್ತಲೆ ಸ್ಥಿತಿಯಲ್ಲೇ ಬಿಟ್ಟು ಪರಾರಿಯಾಗಿದ್ದ.

ಪನ್ವೇಲ್‌ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಡ್ರಾಮಾ!

ಇಂದೋರ್‌ನಿಂದ ಮುಂಬೈಗೆ ಪರಾರಿಯಾದ ಪಿಯೂಷ್, ಪನ್ವೇಲ್ ತಲುಪಿದ್ದ. ಅಲ್ಲಿ ನಿರ್ಜನ ಪ್ರದೇಶವೊಂದಕ್ಕೆ ತೆರಳಿ ಊದಿನ ಕಡ್ಡಿಗಳನ್ನು ಹಚ್ಚಿ ವಿಚಿತ್ರವಾಗಿ ವರ್ತಿಸಿದ್ದಾನೆ. ಆತ್ಮಗಳನ್ನು ಕರೆಯುವುದು ಹೇಗೆ?" (How to summon spirits) ಎಂದು ಯೂಟ್ಯೂಬ್‌ನಲ್ಲಿ (YouTube) ವಿಡಿಯೋಗಳನ್ನು ನೋಡಿದ್ದಾನೆ. ತಾನು ಕೊಂದ ಪ್ರೇಮಿಯ ‘ಆತ್ಮ’ದ ಜೊತೆ ಮಾತನಾಡಬೇಕು ಎಂದು ಕತ್ತಲಲ್ಲಿ ಕ್ಷಮೆ ಯಾಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisment

ಇದನ್ನೂ ಓದಿ: 6 ಕೋಟಿ ಆಸ್ತಿಗಾಗಿ ಹೆತ್ತ ತಂದೆಯನ್ನೇ ಮುಗಿಸಿದ ಪಾಪಿ ಮಕ್ಕಳು..! ವಿಲ್ ಬರೆದಿದ್ದೇ ತಪ್ಪಾಯ್ತಾ?

ತಂದೆಗೆ ಕಳಿಸಿದ ಆ ಮೆಸೇಜ್

ಘಟನೆ ನಡೆದ ರಾತ್ರಿ 11 ಗಂಟೆಗೆ ಯುವತಿಯ ಫೋನ್‌ನಿಂದ ಆಕೆಯ ಕುಟುಂಬಕ್ಕೆ ಒಂದು ಮೆಸೇಜ್ ಬಂದಿತ್ತು. ‘ಅಪ್ಪಂಗೆ ಹೇಳು, ಅವಳು ಇನ್ಮುಂದೆ ಮನೆಗೆ ಬರುವುದಿಲ್ಲ’ (Tell Papa she won't be returning home) ಎಂದು ಬರೆಯಲಾಗಿತ್ತು. ಇದಾದ ಬಳಿಕ ಫೋನ್ ಸ್ವಿಚ್ ಆಫ್ ಆಗಿತ್ತು. ಅಷ್ಟೇ ಅಲ್ಲದೆ, ಆರೋಪಿ ಯುವತಿಯ ಫೋನ್‌ನಲ್ಲಿದ್ದ ಇಬ್ಬರ ಖಾಸಗಿ ವಿಡಿಯೋಗಳನ್ನು ಕಾಲೇಜು ಗ್ರೂಪ್‌ಗಳಿಗೆ ಮತ್ತು ವಾಟ್ಸಾಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ್ದ.

ಪೊಲೀಸರು ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಡಿಸಿಪಿ ಕೃಷ್ಣಲಾಲ್ ಚಾಂದನಿ, ‘ಆರೋಪಿ ಪಿಯೂಷ್ ಮತ್ತು ಯುವತಿ ರಿಲೇಷನ್‌ಶಿಪ್‌ನಲ್ಲಿದ್ದರು. ಮದುವೆಗೆ ಮನೆಯವರ ವಿರೋಧವಿತ್ತು. ಅಂದು ಆಕೆಯ ಫೋನ್‌ನಲ್ಲಿ ಡೇಟಿಂಗ್ ಆಪ್ (Dating App) ನೋಡಿದ ಪಿಯೂಷ್, ಆಕೆ ಬೇರೆ ಯಾರೊಂದಿಗೋ ಮಾತನಾಡುತ್ತಿದ್ದಾಳೆ ಎಂದು ಅನುಮಾನಗೊಂಡು ಈ ಕೃತ್ಯ ಎಸಗಿದ್ದಾನೆ. ಮುಂಬೈನಲ್ಲಿ ಈತನನ್ನು ಬಂಧಿಸಲಾಗಿದ್ದು, ಸೈಕೋ ತರಹ ವರ್ತಿಸುತ್ತಿದ್ದ ಎಂದು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು 3 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ.

Advertisment

ಇದನ್ನೂ ಓದಿ: ನಾಯಕತ್ವ ಬದಲಾವಣೆ ಗದ್ದಲ; ರಾತ್ರೋರಾತ್ರಿ ಆಸ್ಟ್ರೇಲಿಯಾ ವಿಮಾನ ಏರಲು ಸಜ್ಜಾದ 20 ಶಾಸಕರು! ಲಿಸ್ಟ್ ಇಲ್ಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Piyush Dhamnotiya, Indore MBA Student Murder
Advertisment
Advertisment
Advertisment