/newsfirstlive-kannada/media/media_files/2025/11/13/umar-nabi-2025-11-13-08-13-05.jpg)
ನವೆಂಬರ್ 10 ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಬೃಹತ್ ಕಾರ್ ಬಾಂಬ್ ಸ್ಫೋಟದ ಹಿಂದಿನ ನಿಗೂಢತೆ DNA ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಸ್ಫೋಟದಲ್ಲಿ ಮೃತಪಟ್ಟ ಉಲ್ವಾಮಾದ ಡಾ. ಉಮರ್ ಉನ್ ನಬಿಯಿಂದಲೇ (Dr Umar Mohammad) ಕೃತ್ಯ ನಡೆದಿರೋದು ಅಧಿಕೃತ ಎಂದು ತನಿಖಾ ಸಂಸ್ಥೆಗಳು ದೃಢಪಡಿಸಿವೆ.
ಕೆಂಪುಕೋಟೆ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಹತ್ತಿರದ ಅಂಗಡಿಗಳ ಗಾಜಿನ ಕಿಟಕಿಗಳು ಪುಡಿಪುಡಿಯಾಗಿವೆ. ಘಟನಾ ಸ್ಥಳದ ಸುತ್ತಮುತ್ತ ತೀವ್ರ ಹಾನಿಯಾಗಿದೆ.
DNA ಸತ್ಯ
ಸ್ಫೋಟಕ್ಕೆ ಬಳಸಲಾದ ಬಿಳಿ ಬಣ್ಣದ ಹುಂಡೈ i20 ಕಾರನ್ನು 10 ದಿನಗಳ ಹಿಂದಷ್ಟೇ ಡಾ.ಉಮರ್ ಖರೀದಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಅದರಂತೆ ಆರಂಭದಲ್ಲಿ ಕಾರಿನ ಸುತ್ತವೇ ತನಿಖೆ ನಡೆದಿತ್ತು. ಸ್ಫೋಟದ ನಂತರ ಕಾರಿನ ಬಳಿ ಆತನ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದರೂ, ಗುರುತಿಸುವಿಕೆ ಸಾಧ್ಯವಾಗಿರಲಿಲ್ಲ. ಈಗ ಪುಲ್ವಾಮಾದಲ್ಲಿ ಆತನ ಕುಟುಂಬದಿಂದ ಸಂಗ್ರಹಿಸಲಾದ ಡಿಎನ್‌ಎ ಹಾಗೂ ಸ್ಫೋಟದ ಸ್ಥಳದಲ್ಲಿ ಸಿಕ್ಕ ಮೃತದೇಹದ DNA ಮ್ಯಾಚ್ ಆಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಸ್ಫೋಟಗೊಂಡ ಕಾರಿನಲ್ಲಿ ಉಮರ್ ಇದ್ದಿದ್ದು ದೃಢವಾಗಿದೆ.
ಇದನ್ನೂ ಓದಿ: ಡೆಲ್ಲಿ ಬಾಂಬ್ ಬ್ಲಾಸ್ಟ್ ಕೇಸ್​​.. ಶಂಕಿತರ ಟಾರ್ಗೆಟ್ ಏನಾಗಿತ್ತು?
/filters:format(webp)/newsfirstlive-kannada/media/media_files/2025/11/12/delhi-incident-8-2025-11-12-09-10-41.jpg)
ಜೈಶ್-ಎ-ಮೊಹಮ್ಮದ್ (ಜೆಇಎಂ) ಲಾಜಿಸ್ಟಿಕ್ಸ್ ಮಾಡ್ಯೂಲ್‌ನೊಂದಿಗೆ ಉಮರ್ ಸಂಬಂಧ ಹೊಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಮಾಡ್ಯೂಲ್‌ನಲ್ಲಿ 5 ರಿಂದ 6 ವೈದ್ಯರು ಸೇರಿದಂತೆ ಸುಮಾರು 9 ರಿಂದ 10 ಸದಸ್ಯರಿದ್ದರು. ಈ ಸೈತಾನರು ರಾಸಾಯನಿಕ ವಸ್ತುಗಳು ಮತ್ತು ಸ್ಫೋಟಕ ವಸ್ತುಗಳನ್ನು ಪಡೆಯಲು ತಮ್ಮ ವೈದ್ಯಕೀಯ ವೃತ್ತಿಯ ಹೆಸರು ಬಳಸಿಕೊಂಡಿದ್ದರು.
ಉಮರ್ ಕುಟುಂಬ ಹೇಳಿದ್ದೇನು?
ಕಾಶ್ಮೀರದ ಪುಲ್ವಾಮಾದ ಕೊಯಿಲ್ ಗ್ರಾಮದಲ್ಲಿರುವ ಉಮರ್ ಕುಟುಂಬ ಸದ್ಯ ಆಘಾತದಲ್ಲಿದೆ ಎಂದು ವರದಿಯಾಗಿದೆ. ಸಂಬಂಧಿಕರೊಬ್ಬರು ಮಾತನ್ನಾಡಿ.. ಉಮರ್ ನಮ್ಮ ಕಣ್ಣಿಗೆ ಶಾಂತ ಸ್ವಭಾವದವನಾಗಿ ಕಂಡಿದ್ದ. ಅಂತರ್ಮುಖಿಯೂ ಆಗಿದ್ದ. ಹೆಚ್ಚಿನ ಸಮಯವನ್ನು ಪುಸ್ತಕ ಓದುವುದರಲ್ಲಿ ಕಳೆದಿದ್ದ. ಆದರೆ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಎಂದಿದ್ದಾರೆ.
ಆದರೆ ಕಳೆದ ಕೆಲವು ತಿಂಗಳುಗಳಿಂದ ಆತನ ನಡವಳಿಕೆ ಬದಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫರಿದಾಬಾದ್ ಮತ್ತು ದೆಹಲಿ ನಡುವೆ ಆಗಾಗ ಪ್ರಯಾಣಿಸುತ್ತಿದ್ದ. ರಾಮಲೀಲಾ ಮೈದಾನ ಮತ್ತು ಸುನೇಹ್ರಿ ಮಸೀದಿ ಬಳಿಯ ಮಸೀದಿಗಳಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿದೆ. ಸ್ಫೋಟ ಸಂಭವಿಸುವ ಮೊದಲು ಮಧ್ಯಾಹ್ನ 3 ಗಂಟೆಗೆ ಮಸೀದಿಯ ಬಳಿ ತನ್ನ ಕಾರನ್ನು ನಿಲ್ಲಿಸಿದ್ದ. ನಂತರ ಸಂಜೆ ಕೆಂಪು ಕೋಟೆಗೆ ತೆರಳಿದ್ದಾಗಿ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ.
ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದಂದು ಸ್ಫೋಟಿಸಲು ಸಂಚು ಹಾಕಿದ್ದ ಶಂಕಿತ ಉಮರ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us