/newsfirstlive-kannada/media/media_files/2025/11/11/dr-umar-mohammad-delhi-incident-2025-11-11-09-15-10.jpg)
ಉಮರ್ ಮಹ್ಮದ್ Photograph: (ಶಂಕಿತ ದಾಳಿಕೋರ)
ಕೆಂಪು ಕೋಟೆಯ ಬಳಿ ನಡೆದಿದ್ದ ಕಾರು ಬಾಂಬ್ ಸ್ಫೋಟವನ್ನ ಕೇಂದ್ರ ಸರ್ಕಾರ ಅಧಿಕೃತವಾಗಿ ಭಯೋತ್ಪಾದಕ ಕೃತ್ಯ ಅಂತ ಕರೆದಿದೆ..
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಉಗ್ರ ಕೃತ್ಯ ಅಂತ ನಿರ್ಣಯ ಕೈಗೊಂಡು ಖಂಡಿಸಿದೆ.. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​, ಮಾತನಾಡಿ, ಕಾರು ಸ್ಫೋಟವು ದೇಶ ವಿರೋಧಿ ಶಕ್ತಿಗಳು ನಡೆಸಿದ ಹೇಯ ಭಯೋತ್ಪಾದಕ ಕೃತ್ಯವಾಗಿದೆ.. ಅಪರಾಧಿಗಳು, ಅವರ ಸಹಚರರು ಮತ್ತು ಬೆಂಬಲಿಗರನ್ನು ತಕ್ಷಣವೇ ಪತ್ತೆ ಹಚ್ಚಿ ನ್ಯಾಯಕ್ಕೆ ಒಪ್ಪಿಸಬೇಕು ಎಂದು ಕ್ಯಾಬಿನೆಟ್ ನಿರ್ದೇಶಿಸಿದೆ ಎಂದರು.
ಇದನ್ನೂ ಓದಿ: ಡೆಲ್ಲಿ ಬಾಂಬ್ ಬ್ಲಾಸ್ಟ್ ಕೇಸ್​​.. ಶಂಕಿತರ ಟಾರ್ಗೆಟ್ ಏನಾಗಿತ್ತು?
ಭಯೋತ್ಪಾದಕ ಘಟನೆಯಲ್ಲಿನ ಜೀವಹಾನಿಗೆ ಸಂಪುಟ ಸಭೆ ತೀವ್ರ ದುಃಖ ವ್ಯಕ್ತಪಡಿಸಿತು. ಅಮಾಯಕ ಜೀವಗಳನ್ನ ಕಳೆದುಕೊಂಡವರಿಗೆ ಗೌರವ ಸಲ್ಲಿಸಲು ಸಂಪುಟವು ಎರಡು ನಿಮಿಷಗಳ ಮೌನಾಚರಣೆ ನಡೆಸಿತು. ಕಾರು ಸ್ಫೋಟದ ಮೂಲಕ ಭಯೋತ್ಪಾದಕ ಘಟನೆಗೆ ದೇಶ ಸಾಕ್ಷಿಯಾಗಿದೆ. ಸಚಿವ ಸಂಪುಟವು ಈ ನಿರ್ಣಯವನ್ನ ಅಂಗೀಕರಿಸಿದೆ.
ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದಂದು ಸಂಚು
ಈ ರಾಕ್ಷಸ ಪಡೆ, ಮುಂಬೈನಲ್ಲಿ ನಡೆದಿದ್ದ ಎರಡು ಘಟನೆಗಳ ಪ್ಲಾನ್​​​ನ್ನ ಕ್ಲಬ್​ ಮಾಡಿ ದಾಳಿಗೆ ಸಂಚು ರೂಪಿಸಿತ್ತು ಅನ್ನೋದು ಬೆಳಕಿಗೆ ಬಂದಿದೆ.. 2008ರ 26/11 ಮಾದರಿ ಮತ್ತು 1993ರ ರೀತಿ ಸರಣಿ ದಾಳಿ ಸಂಚು ರೂಪಿಸಿದ್ದು ಬಯಲಾಗಿದೆ. ಕೆಂಪುಕೋಟೆ ಸ್ಫೋಟದ ಪ್ರಮುಖ ಶಂಕಿತ ಡಾ.ಉಮರ್ ನಬಿ, ಡಿಸೆಂಬರ್ 6 ರಂದು ಬೃಹತ್​​​ ಯೋಜನೆ ಹೆಣೆದಿದ್ದ. ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವದಂದು ದೊಡ್ಡ ಸ್ಫೋಟಕ್ಕೆ ಪ್ಲಾನ್​​ ರಚಿಸಿದ್ನಂತೆ..
ಅಕ್ಟೋಬರ್ 26 ರಂದು ಕಾಶ್ಮೀರಕ್ಕೆ ತೆರಳಿದ್ದ ಡಾಕ್ಟರ್​​​ ಟೆರರ್​​​​ ಉಮರ್​​​, ಕುಟುಂಬ ಮತ್ತು ಸ್ನೇಹಿತರನ್ನ ಭೇಟಿಯಾಗಿ ಫರಿದಾಬಾದ್‌ಗೆ ಮರಳಿದ್ದ. ಮುಂದಿನ 3 ತಿಂಗಳು ತಾನು ಲಭ್ಯವಿರುವುದಿಲ್ಲ ಆಪ್ತರ ಬಳಿ ಹೇಳಿಕೊಂಡಿದ್ದ.. ಡಿಸೆಂಬರ್​​​ರ 6ರ ಪ್ರತೀಕಾರದ ಬಳಿಕ ಭೂಗತವಾಗಲು ಯೋಜಿಸಿದ್ನಂತೆ..
ದಾಳಿಗೆ ಹಲವು ಕಾರುಗಳ ಬಳಕೆಗೆ ಯೋಜನೆ
ಆಗ್ಲೇ ಹೇಳಿದಂತೆ ಬೃಹತ್​​ ದಾಳಿಗೆ ಪ್ಲಾನ್​​ ಮಾಡಿದ್ದ ಈ ತಂಡ, ಎರಡು ಕಾರುಗಳನ್ನ ಬಳಕೆಗೆ ಯೋಜಿಸಿತ್ತು.. ಅದರಲ್ಲಿ ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರು ಒಂದು.. ಐ20 ಕಾರು ಸ್ಫೋಟದ ಬಳಿಕ ರೆಡ್​ ಕಾರ್​​ಗಾಗಿ ತೀವ್ರ ಕಾರ್ಯಾಚರಣೆ ಶುರುವಾಗಿತ್ತು.. ಇದೀಗ ಹರಿಯಾಣದ ಖಂಡಾವಳಿ ಗ್ರಾಮದ ಬಳಿ DL 10 CK 0458 ನೋಂದಣಿ ಕಾರು ಪತ್ತೆಯಾಗಿದೆ.. ಸದ್ಯ ಕಾರನ್ನು ಫರಿದಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.. ಅಲ್ಲದೆ, ನಕಲಿ ವಿಳಾಸ ಕೊಟ್ಟು ಈ ಕಾರನ್ನ ಖರೀದಿಸಿರೋದು ಬೆಳಕಿಗೆ ಬಂದಿದೆ..
ಇದನ್ನೂ ಓದಿ: ಮೇಘನಾ ಜಾಲಿ ಜಾಲಿ.. ಜೋಡಿ ಹಕ್ಕಿಗಳು ಹನಿಮೂನ್​​ಗೆ ಹೋಗಿದ್ದೆಲ್ಲಿಗೆ?
ಕೆಂಪುಕೋಟೆ ಬಳಿ ನಡೆದ ಸ್ಫೋಟದ ಮತ್ತೊಂದು ಘೋರ ದೃಶ್ಯ ಸಿಕ್ಕಿದೆ. ಸಂಜೆ 6:52.. ಸಂಜೆ ಕರಗಿ ಕತ್ತಲಿಗೆ ಜಾರುತ್ತಿದ್ದ ಸಮಯ.. ಕೆಂಪುಕೋಟೆ ಬಳಿ ಜನದಟ್ಟಣೆಯಿಂದ ರಸ್ತೆ ಜಾಮ್​ ಆಗಿತ್ತು.. ಈ ವೇಳೆ ನಟ್ಟ ನಡುವಲ್ಲಿದ್ದ ಶ್ವೇತವರ್ಣದ ಹುಂಡೈ ಐ20 ಕಾರು ಸ್ಫೋಟಗೊಂಡಿದೆ.. ಹೊತ್ತಿ ಉರಿಯುತ್ತಿರುವ ಮತ್ತೊಂದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಅತಿಯಾದ ಆತ್ಮವಿಶ್ವಾಸ ಬೇಡ; ಹಣದ ನಷ್ಟ ಸಾಧ್ಯತೆ; ಸ್ತ್ರೀಯರಿಗೆ ಶುಭಸುದ್ದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us