/newsfirstlive-kannada/media/media_files/2025/11/14/modi-nitish-kumar-2025-11-14-14-24-21.jpg)
ಬಿಹಾರ ವಿಧಾನಸಭೆ ಚುನಾವಣೆಯ ಸ್ಪಷ್ಟ ಫಲಿತಾಂಶ ಬಹುತೇಕ ಪ್ರಕಟವಾದಂತಿದೆ. ಎನ್​ಡಿಎ ಒಕ್ಕೂಟ ಬರೋಬ್ಬರಿ 199 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್​ಗೆ ಭಾರೀ ಮುಖಭಂಗ ಆಗಿದೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿಯಲ್ಲಿ ಎಂಜಿಬಿ ಕೇವಲ 38 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 122. ಈಗಾಗಲೇ ಎನ್​ಡಿಎಗೆ ಅಭೂತಪೂರ್ವ ಗೆಲುವು ಸಿಕ್ಕಿರೋದ್ರಿಂದ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ.
ಇದನ್ನೂ ಓದಿ:ದರ್ಶನ್​ಗೆ ರಾಜಾತಿಥ್ಯ.. ವರ್ಷ ಕಳೆದರೂ ಇನ್ನೂ ಚಾರ್ಜ್​ಶೀಟ್ ಸಲ್ಲಿಕೆ ಆಗಿಲ್ಲ..!
ಬಿಹಾರದಲ್ಲಿ ಎನ್.ಡಿ.ಎ. ಗೆಲುವಿಗೆ ಪ್ರಮುಖ ಹತ್ತು ಕಾರಣಗಳು
- ಚಿರಾಗ್ ಪಾಸ್ವಾನ್ ಈ ಭಾರಿ ಎನ್‌ಡಿಎ ನಿಂದ ಹೊರ ಹೋಗದಂತೆ ನೋಡಿಕೊಂಡಿದ್ದು, ಇದರಿಂದ ಜೆಡಿಯು ಹೆಚ್ಚಿನ ಕ್ಷೇತ್ರ ಗೆಲ್ಲಲು ಕಾರಣವಾಯಿತು
- ಮಹಿಳೆಯರು ಎನ್‌ಡಿಎ ಕಡೆಗೆ ಒಲವು ತೋರಿದ್ದು, ಎನ್‌ಡಿಎ ಭರ್ಜರಿ ಗೆಲುವಿಗೆ ಕಾರಣವಾಗಿದೆ
- 2010 ರಲ್ಲೇ ನಿತೀಶ್ ಕುಮಾರ್ ಮದ್ಯಪಾನ ನಿಷೇಧಿಸಿದ್ದರು. ಆದರೆ ಮದ್ಯಪಾನ ನಿಷೇಧ ವಾಪಸ್ ಪಡೆಯುವುದಾಗಿ ಹೇಳಿದ್ದ
- ಪ್ರಶಾಂತ್ ಕಿಶೋರ್. ಮಹಿಳೆಯರಿಗೆ ಮದ್ಯಪಾನ ನಿಷೇಧ ವಾಪಸ್ ಪಡೆಯುವುದು ಇಷ್ಟ ಇರಲಿಲ್ಲ
ಮಹಿಳೆಯರಿಗೆ 10 ಸಾವಿರ ರೂಪಾಯಿ ಹಣವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ನೀಡಿದ್ದು ಎನ್‌ಡಿಎಗೆ ವರವಾಯಿತು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಎನ್‌ಡಿಎ ಪರ ಮತ್ತೆ ಮತ ಚಲಾಯಿಸಿದ್ದಾರೆ. - ಕಟ್ಟಾ ಸರ್ಕಾರ್ ಬರುತ್ತೆ ಎಂದು ಮೋದಿ, ನಿತೀಶ್ ಜನರಲ್ಲಿ ಜಂಗಲ್ ರಾಜ್ ಸರ್ಕಾರ ಬರದಂತೆ ತಡೆಯಬೇಕೆಂದು ಪ್ರಚಾರ ಮಾಡಿದ್ದು ವರ್ಕೌಟ್ ಆಗಿದೆ.
- ಜನರಿಗೆ ಪ್ರತಿ ತಿಂಗಳು 125 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ನಿತೀಶ್ ಕುಮಾರ್ ಭರವಸೆಯಿಂದ ಎನ್‌ಡಿಎ ಕಡೆಗೆ ವಾಲಿದ ಮತದಾರರು.
- ಯಾದವ್ ಯೇತರ ಜನಾಂಗಗಳು ಜೆಡಿಯು ಕಡೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಎನ್‌ಡಿಎ ಗೆಲುವಿಗೆ ಕಾರಣ
- ಮುಸ್ಲಿಂ ಸಮುದಾಯದ ಮತಗಳು ಪೂರ್ತಿಯಾಗಿ ಆರ್‌ಜೆಡಿ ಬೆಂಬಲಿಸದೇ ನಿತೀಶ್ ಕುಮಾರ್ ಕಡೆ ಒಲವು ತೋರಿವೆ.
- ನಿತೀಶ್ ಕುಮಾರ್ ನಾಯಕತ್ವ, ಅನುಭವ, ಈ ಹಿಂದಿನ ಅಡಳಿತದ ಟ್ರ್ಯಾಕ್ ರೆಕಾರ್ಡ್ ಎನ್‌ಡಿಎ ಗೆಲುವಿಗೆ ಕಾರಣವಾಗಿದೆ.
- ನಿತೀಶ್ ಕುಮಾರ್ ಆಳ್ವಿಕೆಯಲ್ಲಿ ಇದ್ದ ಮಹಿಳೆಯರ ಸುರಕ್ಷತೆ, ಮೂಲಸೌಕರ್ಯ ವೃದ್ದಿ ಎಲ್ಲವೂ ಎನ್‌ಡಿಎ ನತ್ತ ಜನರು ಮತ್ತೆ ಒಲವು ತೋರಲು ಕಾರಣವಾದವು.
ಇದನ್ನೂ ಓದಿ: Bihar Election Result LIVE.. ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಸಿಎಂ ಆಗೋದು ಪಕ್ಕಾ ಎಂದ ಫಲಿತಾಂಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us