/newsfirstlive-kannada/media/media_files/2025/09/28/vijay-rally-2-2025-09-28-07-06-57.jpg)
ನಟ, ರಾಜಕಾರಣಿ ವಿಜಯ್​ ಱಲಿಯಲ್ಲಿ ಕಾಲ್ತುಳಿತ ದುರಂತದಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿಕೆ ಆಗಿದೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇಲ್ಲಿಯವರೆಗೆ 28 ಮಂದಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ದುರಂತ ಸಂಭವಿಸಿದ್ದರೂ ತಮಿಳಿಗ ವೆಟ್ರಿ ಕಳಗಮ್ ಪಕ್ಷದ ಸಂಸ್ಥಾಪಕ ವಿಜಯ್ ವಿರುದ್ಧ ಇನ್ನೂ ಎಫ್​​ಐಆರ್ ದಾಖಲಾಗಿಲ್ಲ. ಪ್ರಕರಣದಲ್ಲಿ ಪಕ್ಷದ ಮೂವರು ಮುಖಂಡರ ಮೇಲೆ ಮಾತ್ರ ಎಫ್​ಐಆರ್ ದಾಖಲಾಗಿದೆ. ಇನ್ನು ಕರೂರು ಟಿವಿಕೆ ಕಾರ್ಯದರ್ಶಿ ವಿ.ಪಿ. ಮಥಿಯಾಳಗನ್​​ನನ್ನು ವಶಕ್ಕೆ ಪಡೆದಿದ್ದಾರೆ. ಮಾಹಿತಿಗಳ ಪ್ರಕಾರ, ವಿಜಯ್ ವಿರುದ್ಧ ಎಫ್​ಐಆರ್​​ ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕರೂರು ಕಾಲ್ತುಳಿತಕ್ಕೆ 12 ಕಾರಣಗಳು.. ನಟ ವಿಜಯ್ ಬಂದಾಗ ಅಸಲಿಗೆ ಆಗಿದ್ದೇನು?
ಕಾಲ್ತುಳಿತ ಕೇಸಲ್ಲಿ ಎಫ್​ಐಆರ್
- A1 ಮಥಿಯಾಳಗನ್
- A2 ಪುಸಿ ಆನಂದ್
- A3 ನಿರ್ಮಲ್ ಕುಮಾರ್
ಪ್ರಕರಣದಲ್ಲಿ ಈ ಮೂವರ ವಿರುದ್ಧ ಯಾವೆಲ್ಲ ಆ್ಯಕ್ಟ್​ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಅಂತಾ ನೋಡೋದಾದ್ರೆ BNS 105, BNS 110, BNS 125 , BNS 223, TNPPDL Act Sec 3 ಅಡಿಯಲ್ಲಿ ಕೇಸ್ ಆಗಿದೆ.
ಶಿಕ್ಷೆ ಏನು?
- BNS 105: ಹತ್ಯೆ ಮಾಡೋ ಉದ್ದೇಶವಿಲ್ಲದೇ ನಡೆದ ಸಾವುಗಳು, ಗರಿಷ್ಠ 10 ವರ್ಷ ಶಿಕ್ಷೆ
- BNS 110: ಪರಿಣಾಮದ ಅರಿವಿದ್ದರೂ ಕೃತ್ಯದಲ್ಲಿ ಭಾಗಿ, ಗರಿಷ್ಠ 7 ವರ್ಷ ಶಿಕ್ಷೆ
- BNS 125: ಜೀವಕ್ಕೆ ಅಪಾಯ ಸೃಷ್ಟಿಸುವಂತ ನಿರ್ಲಕ್ಷ್ಯದ ಕೃತ್ಯ, ಗರಿಷ್ಠ 5 ವರ್ಷ ಶಿಕ್ಷೆ
- BNS 223 : ಸರ್ಕಾರದ ಆದೇಶದ ಉಲ್ಲಂಘನೆ , ದಂಡ & ಗರಿಷ್ಠ 1 ವರ್ಷ ಶಿಕ್ಷೆ
- TNPPDL Act Sec 3: ಸಾರ್ವಜನಿಕ ಆಸ್ತಿಗೆ ಹಾನಿ, ದಂಡ & ಗರಿಷ್ಠ 1 ವರ್ಷ ಶಿಕ್ಷೆ
ವಿಜಯ್​ ಮೇಲಿಲ್ಲ FIR, ಯಾಕೆ?
ಕಾರಣ - 1: ತಮಿಳುನಾಡಲ್ಲಿ ನಟ ವಿಜಯ್​ಗೆ ಅಭಿಮಾನಿಗಳ ದೊಡ್ಡ ಬಳಗ ಇದೆ
ಕಾರಣ - 2 : ಎಫ್​ಐಆರ್​ ದಾಖಲಾದ್ರೆ ಅಭಿಮಾನಿಗಳು ರೊಚ್ಚಿಗೇಳೋ ಸಾಧ್ಯತೆ
ಕಾರಣ - 3 : ಫ್ಯಾನ್ಸ್​ ವಿರೋಧ, ರಾಜಕೀಯವಾಗಿ ಸರ್ಕಾರಕ್ಕೆ ಮುಳುವಾಗೋ ಸಾಧ್ಯತೆ
ಕಾರಣ - 4 : ಡಿಎಂಕೆ ಪಕ್ಷದ ವಿರುದ್ಧ ಪವರ್​ ಕಟ್ ಮಾಡಿಸಿರೋ ಆರೋಪ ಕೇಳಿ ಬಂದಿದೆ
ಕಾರಣ - 5 : ತನಿಖೆ ಮುಗಿಯೋವರೆಗೂ ವಿಜಯ್​ ವಿರುದ್ಧ ಕೇಸ್​ ದಾಖಲಿಸೋದು ಸರಿಯಲ್ಲ
ಕಾರಣ - 6 : ಹಾಗೇ ಮಾಡಿದ್ರೆ ಒಬ್ಬ ವ್ಯಕ್ತಿಯನ್ನ ಟಾರ್ಗೆಟ್​ ಮಾಡಿದ್ದಂತೆ ಆಗುತ್ತೆ ಎಂಬ ಆಲೋಚನೆ
ಕಾರಣ - 7 : ವಿಜಯ್​ನ ಟಾರ್ಗೆಟ್​ ಮಾಡಿದ್ರೆ, ತಮಿಳುನಾಡಿನಾದ್ಯಂತ ಫ್ಯಾನ್ಸ್​ ಸಿಟ್ಟು ಸ್ಫೋಟ
ಕಾರಣ - 8 : ಟಿವಿಕೆ ಮುಖಂಡರ ಮೇಲೆ ಎಫ್​ಐಆರ್​ ದಾಖಲು ಮಾಡಿ, ಎಚ್ಚರಿಕೆ ಹೆಜ್ಜೆ
ಇದನ್ನೂ ಓದಿ:ನಟ ಮಾತಾಡ್ತಿದ್ದಾಗಲೇ ಕಾಲ್ತುಳಿತ.. ಕರೂರ್‌ನಲ್ಲಿ ವಿಜಯ್ ಭಾಷಣ ಹೇಗಿತ್ತು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ