/newsfirstlive-kannada/media/media_files/2025/12/31/toll-free-2025-12-31-07-36-51.jpg)
ತೆಲಂಗಾಣ ಸರ್ಕಾರ ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯದ ಜನರಿಗೆ ವಿಶೇಷ ವಿನಾಯತಿ ನೀಡಲು ಮುಂದಾಗಿದೆ. ಹಬ್ಬದ ಸಂದರ್ಭದಲ್ಲಿ ಹೈದರಾಬಾದ್‌ನಿಂದ ಆಂಧ್ರಕ್ಕೆ ಹೋಗುವ ಪ್ರಯಾಣಿಕರಿಗೆ ದೊಡ್ಡ ಪರಿಹಾರ ನೀಡಲು ನಿರ್ಧರಿಸಿದೆ. ತುಂಬಾ ಜನದಟ್ಟಣೆ ಇರುವ ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರರಿಂದ ನಾಲ್ಕು ದಿನಗಳವರೆಗೆ ಟೋಲ್ ಸಂಗ್ರಹವನ್ನು ನಿಲ್ಲಿಸುವ ಪ್ರಸ್ತಾಪ ಮಾಡಿದೆ.
ಜನವರಿ 9 ರಿಂದ 14 ರವರೆಗೆ ಹೈದರಾಬಾದ್‌ನಿಂದ ವಿಜಯವಾಡಕ್ಕೆ ಹೋಗುವ ವಾಹನಗಳು ಮತ್ತು ಜನವರಿ 16 ರಿಂದ ಜನವರಿ 18 ರವರೆಗೆ ವಿಜಯವಾಡದಿಂದ ಹೈದರಾಬಾದ್‌ಗೆ ಹಿಂತಿರುಗುವ ವಾಹನಗಳಿಗೆ ವಿನಾಯಿತಿ ನೀಡುವಂತೆ ಅಲ್ಲಿನ ಸಚಿವ ಕೋಮತಿರೆಡ್ಡಿ ವೆಂಕಟ್ ರೆಡ್ಡಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು NHAI ಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಯುವ ಆಟಗಾರರಿಗೆ ಬಂಪರ್ ಗಿಫ್ಟ್.. ರೋಹಿತ್-ಕೊಹ್ಲಿಗೆ ಹೊಸ ವರ್ಷದಲ್ಲಿ ಶಾಕಿಂಗ್ ನ್ಯೂಸ್..!
ಪ್ರತಿ ವರ್ಷ, ಸಂಕ್ರಾಂತಿಯ ಸಮಯದಲ್ಲಿ, ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಂತಂಗಿ, ಕೊರ್ಲಪಹಾಡ್ ಮತ್ತು ಚಿಲ್ಲಕಲ್ಲು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತವೆ. ಫಾಸ್ಟ್‌ಟ್ಯಾಗ್‌ಗಳಿದ್ದರೂ, ಲಕ್ಷಾಂತರ ವಾಹನಗಳು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ಹೆದ್ದಾರಿಯಲ್ಲಿ ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು ಮತ್ತು ವಿಸ್ತರಣಾ ಕಾರ್ಯಗಳು ನಡೆಯುತ್ತಿರುವುದರಿಂದ ಸಂಚಾರ ಸಮಸ್ಯೆ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ.
ಟೋಲ್ ಸಂಗ್ರಹಕ್ಕಾಗಿ ವಾಹನಗಳನ್ನು ನಿಲ್ಲಿಸಿದರೆ ಇಡೀ ಹೆದ್ದಾರಿಯೇ ಸ್ಥಗಿತಗೊಳ್ಳುವ ಅಪಾಯವಿರುವುದರಿಂದ ಸಂಕ್ರಾಂತಿಯ ಸಮಯದಲ್ಲಿ ಟೋಲ್-ಮುಕ್ತ ಪ್ರಯಾಣಕ್ಕೆ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದಾಗ್ಯೂ, ಟೋಲ್ ಶುಲ್ಕವನ್ನು ಮನ್ನಾ ಮಾಡುವ ತೆಲಂಗಾಣ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಮತ್ತು NHAI ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಚರ್ಚೆಯ ವಿಷಯ.
ಇದನ್ನೂ ಓದಿ:2025ರಲ್ಲೂ ಭಾರತೀಯರೇ ಕಿಂಗ್; ಕೊಹ್ಲಿ, ರೋಹಿತ್, ಪಂತ್ ಗಳಿಸಿದ ಹಣವೆಷ್ಟು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us