ಬಂಗಾರ ಪ್ರಿಯರಿಗೆ ಬಂಪರ್ ನ್ಯೂಸ್! ಚಿನ್ನದ ದರದಲ್ಲಿ ಭಾರೀ ಕುಸಿತ..!

ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಇದು ನಿಜಕ್ಕೂ ಸಿಹಿ ಸುದ್ದಿ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ದರದಲ್ಲಿ ಇಂದು ಭಾರಿ ಕುಸಿತ ಕಂಡುಬಂದಿದ್ದು, ಚಿನ್ನ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ.

author-image
Ganesh Kerekuli
Gold
Advertisment

ಬೆಂಗಳೂರು: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಇದು ನಿಜಕ್ಕೂ ಸಿಹಿ ಸುದ್ದಿ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ದರದಲ್ಲಿ ಇಂದು ಭಾರಿ ಕುಸಿತ ಕಂಡುಬಂದಿದ್ದು, ಚಿನ್ನ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ.

ಒಂದೇ ದಿನದಲ್ಲಿ ಚಿನ್ನದ ದರ ಶೇ. 6ರಷ್ಟು ಇಳಿಕೆ

ಇಂದು ಗೋಲ್ಡ್ ಮಾರ್ಕೆಟ್‌ನಲ್ಲಿ ಕಂಡುಬಂದ ಬದಲಾವಣೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 9,140 ರೂಪಾಯಿ ಕುಸಿದಿದೆ. ಈ ಮೂಲಕ ಒಂದೇ ದಿನದಲ್ಲಿ ಬಂಗಾರದ ಬೆಲೆ ಶೇಕಡಾ 6 ರಷ್ಟು ಇಳಿಕೆಯಾದಂತಾಗಿದೆ. ಇದು ಇತಿಹಾಸದಲ್ಲೇ ಒಂದೇ ದಿನದಲ್ಲಿ ದಾಖಲಾದ ಅತಿ ದೊಡ್ಡ ಕುಸಿತ ಎನ್ನಲಾಗುತ್ತಿದೆ.

ಇದನ್ನೂ ಓದಿ:400 ಕೋಟಿ ದರೋಡೆ ಕೇಸ್​ಗೆ ಬಿಗ್​ ಟ್ವಿಸ್ಟ್.. ಪ್ರಮುಖ ಆರೋಪಿ ಕಿಶೋರ್ ಸಾವಳಾ ಸರೆಂಡರ್..!

ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಅಂಶಗಳು

  • ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬದಲಾವಣೆ
  • ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಹಿಂಪಡೆಯುತ್ತಿರುವುದು
  • ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ಪ್ರಭಾವ
  • ಬೆಳ್ಳಿ ಬೆಲೆಯಲ್ಲೂ ದಾಖಲೆ ಮಟ್ಟದ ಕುಸಿತ!

ಕೇವಲ ಬಂಗಾರ ಮಾತ್ರವಲ್ಲದೆ, ಬೆಳ್ಳಿಯ ದರದಲ್ಲೂ ಭಾರಿ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 27,000 ರೂಪಾಯಿಗಳಷ್ಟು ಕುಸಿತ ಉಂಟಾಗಿದ್ದು, ಬೆಳ್ಳಿ ವಸ್ತುಗಳನ್ನು ಖರೀದಿಸುವವರಿಗೂ ಇದು ಸುವರ್ಣಾವಕಾಶವಾಗಿದೆ.

ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ

ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿರುವುದು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಕಳೆದ ಕೆಲವು ತಿಂಗಳಿಂದ ಲಕ್ಷದ ಗಡಿ ತಲುಪಿದ್ದ ಚಿನ್ನ ಈಗ ಸಾಮಾನ್ಯ ಜನರ ಕೈಗೆಟುಕುವ ದರಕ್ಕೆ ಇಳಿಯುವ ಮುನ್ಸೂಚನೆ ನೀಡಿದೆ. ನೀವು ಚಿನ್ನ ಅಥವಾ ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಮಾರುಕಟ್ಟೆಯ ಈ ಭಾರಿ ಇಳಿಕೆಯ ಲಾಭವನ್ನು ಪಡೆದುಕೊಳ್ಳಲು ಇದು ಸರಿಯಾದ ಸಮಯ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಇದನ್ನೂ ಓದಿ: Union Budget: ಕೇಂದ್ರ ಸಚಿವ ಸಂಪುಟ ಬಜೆಟ್‌ಗೆ ಅನುಮೋದನೆ; ಯಾರಿಗೆ ಗುಡ್​ನ್ಯೂಸ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

gold rate Gold silver rate today Silver
Advertisment