/newsfirstlive-kannada/media/media_files/2026/01/26/belagavi-400-crore-robbery-2-2026-01-26-13-38-45.jpg)
ಬೆಳಗಾವಿ: ಇಡೀ ದೇಶದ ಗಮನ ಸೆಳೆದಿದ್ದ ಚೋರ್ಲಾ ಘಾಟ್‌ನ 400 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಈಗ ಭಾರಿ ಬೆಳವಣಿಗೆ ನಡೆದಿದೆ. ಹಣದ ಮಾಲೀಕ ಎನ್ನಲಾದ ಪ್ರಮುಖ ಆರೋಪಿ, ಬಿಲ್ಡರ್ ಕಿಶೋರ್ ಸಾವಳಾ ಕೊನೆಗೂ ಪೊಲೀಸರಿಗೆ ಶರಣಾಗಿದ್ದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮಹಾರಾಷ್ಟ್ರದಲ್ಲಿ ಶರಣಾದ ಕಿಶೋರ್ ಸಾವಳಾ
ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಬಿಲ್ಡರ್ ಕಿಶೋರ್ ಸಾವಳಾ, ನಾಸಿಕ್ ತಾಲೂಕಿನ ಘೋಷಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಶನಿವಾರ ಸಂಜೆಯೇ ಕಿಶೋರ್‌ನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ (SIT) ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತನ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಇಶಾನ್ ಕಿಶನ್ ಆರ್ಭಟಕ್ಕೆ ಬೆಚ್ಚಿಬಿದ್ದ ನ್ಯೂಜಿಲೆಂಡ್; 4-1 ಅಂತರದಲ್ಲಿ T20 ಸರಣಿ ಗೆದ್ದ ಸೂರ್ಯ..!
/filters:format(webp)/newsfirstlive-kannada/media/media_files/2026/01/25/belagavi-400-crore-robbery-1-2026-01-25-13-18-03.jpg)
ವಿರಾಟ್ ಗಾಂಧಿಗೆ ಜೈಲು, ಮಚ್ಛೇಂದ್ರನಿಗೆ ಪೊಲೀಸ್ ಕಸ್ಟಡಿ
ಪ್ರಕರಣದ ಮತ್ತೊಬ್ಬ ಕಿಂಗ್‌ಪಿನ್ ವಿರಾಟ್ ಗಾಂಧಿಯ ಎಸ್‌ಐಟಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಆರೋಪಿಗಳ ಪೈಕಿ ಮಚ್ಛೇಂದ್ರ ಮಡವಿಯನ್ನು ಹೆಚ್ಚಿನ ವಿಚಾರಣೆಗಾಗಿ ಫೆಬ್ರವರಿ 2ರವರೆಗೆ ಪುನಃ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ವೈರಲ್ ಆಗಿರುವ ಆಡಿಯೋ ಸಂಭಾಷಣೆ ಹಾಗೂ ಹಣದ ಮೂಲದ ಕುರಿತು ಎಸ್‌ಐಟಿ ಈ ಇಬ್ಬರಿಂದ ಮಹತ್ವದ ಮಾಹಿತಿ ಕಲೆಹಾಕುತ್ತಿದೆ.
400 ಕೋಟಿ ಹಣ 35 ಕೋಟಿಗೆ ಇಳಿಕೆಯಾಯ್ತಾ?
ಒಂದೆಡೆ ತನಿಖೆ ಚುರುಕುಗೊಂಡಿದ್ದರೆ, ಇನ್ನೊಂದೆಡೆ ದೂರುದಾರ ಸಂದೀಪ್ ಪಾಟೀಲ್ ಎಸ್‌ಐಟಿ ಪೊಲೀಸರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಸಂಚು ರೂಪಿಸುತ್ತಿದ್ದಾರೆ ಎಂದು ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಕಿಮ್ಸ್‌ನಲ್ಲಿ ಅಮಾನವೀಯತೆ; ರೋಗಿಗಳನ್ನು ಕೈಯಲ್ಲೇ ಹೊತ್ತೊಯ್ಯುವ ದೌರ್ಭಾಗ್ಯ..!
/filters:format(webp)/newsfirstlive-kannada/media/media_files/2026/01/25/belagavi-robbery-2026-01-25-10-35-40.jpg)
ಸಂದೀಪ್ ಪಾಟೀಲ್ ಅವರ ಪ್ರಮುಖ ಆರೋಪಗಳು
400 ಕೋಟಿ ರೂಪಾಯಿ ದರೋಡೆಯಾಗಿದ್ದರೂ, ಕೇವಲ 35 ಕೋಟಿ ರೂ. ದರೋಡೆ ಎಂದು ತೋರಿಸಲು ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ತೀವ್ರತೆಯನ್ನು ಕಡಿಮೆ ಮಾಡಲು ಎಸ್‌ಐಟಿ ಪ್ಲ್ಯಾನ್ ಮಾಡುತ್ತಿದೆ. ಸತ್ಯಾಂಶವನ್ನು ಮರೆಮಾಚಿ ಪ್ರಭಾವಿಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ.
3 ರಾಜ್ಯಗಳಲ್ಲಿ ಸಂಚಲನ ಮೂಡಿಸಿದ ಹೈಜಾಕ್ ಪ್ರಕರಣ
ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದ ಈ 400 ಕೋಟಿ ರೂಪಾಯಿ ದರೋಡೆ ಪ್ರಕರಣ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಹಣದ ಮೂಲ ಯಾವುದು? ಈ ದರೋಡೆಯ ಹಿಂದೆ ಯಾರಿದ್ದಾರೆ? ಎಂಬ ಪ್ರಶ್ನೆಗಳಿಗೆ ಕಿಶೋರ್ ಸಾವಳಾ ವಿಚಾರಣೆಯ ನಂತರ ಸ್ಪಷ್ಟ ಉತ್ತರ ಸಿಗುವ ಸಾಧ್ಯತೆಯಿದೆ. ಮಹಾರಾಷ್ಟ್ರ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮುಂಬರುವ ದಿನಗಳಲ್ಲಿ ಹಲವು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ:Union Budget: ಬಜೆಟ್ ಮಂಡನೆಗೆ ಕ್ಷಣಗಣನೆ.. ಕೇಂದ್ರದಿಂದ ಯಾರಿಗೆ ಗುಡ್​ನ್ಯೂಸ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us