/newsfirstlive-kannada/media/media_files/2026/02/01/team-india-18-2026-02-01-09-18-22.jpg)
ತಿರುವನಂತಪುರಂನಲ್ಲಿ ಟಾಸ್​ ಗೆದ್ದ ಕ್ಯಾಪ್ಟನ್ ಸೂರ್ಯಕುಮಾರ್​ ಯಾದವ್​ ಕಾನ್ಪಿಡೆಂಟ್​ ಆಗಿ ಬ್ಯಾಟಿಂಗ್​ ಆಯ್ದುಕೊಂಡ್ರು. ಓಪನರ್​ ಅಭಿಷೇಕ್​ ಶರ್ಮಾ ಅಬ್ಬರದ ಆರಂಭ ಒದಗಿಸಿದ್ರು. ಆರಂಭಿಕ 2 ಓವರ್​ ಅಂತ್ಯಕ್ಕೆ ಟೀಮ್ ಇಂಡಿಯಾ 29 ರನ್​ಗಳಿಸಿತು. ಹೋಮ್​​ಗ್ರೌಂಡ್​ನಲ್ಲೂ ಸ್ಟ್ರಗಲ್​ ಮಾಡಿದ ಸಂಜು ಸ್ಯಾಮ್ಸನ್​ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದ್ರು. 6 ರನ್​ಗಳಿಸಿ ಸಂಜು ಔಟಾದ್ರು. ಸಾಲಿಡ್​ ಓಪನಿಂಗ್​ ಪಡೆದುಕೊಂಡಿದ್ದ ಅಭಿಷೇಕ್​ ಶರ್ಮಾ ಆಟವೂ 30 ರನ್​ಗಳಿಗೆ ಅಂತ್ಯವಾಯ್ತು.
3ನೇ ವಿಕೆಟ್​ಗೆ ಕ್ರಿಸ್​ನಲ್ಲಿ ಜೊತೆಯಾದ ಇಶಾನ್​ ಕಿಶನ್​, ಸೂರ್ಯಕುಮಾರ್​ ಯಾದವ್​ ಸಾಲಿಡ್​ ಪಾರ್ಟ್​ನರ್​ಶಿಪ್​ ಕಟ್ಟಿದ್ರು. ಸೂರ್ಯಕುಮಾರ್ ಯಾದವ್ ತಾಳ್ಮೆಯ ಆಟವಾಡಿದ್ರೆ, ಇಶಾನ್​ ಕಿಶನ್​ ಬೌಂಡರಿ, ಸಿಕ್ಸರ್​ ಸಿಡಿಸಿ ಘರ್ಜಿಸಿದ್ರು. ಬೌಂಡರಿ, ಸಿಕ್ಸರ್​​ಗಳಲ್ಲೇ ರನ್​ ಡೀಲ್​ ಮಾಡಿದ ಇಶಾನ್ ಕಿಶನ್​ 28 ಎಸೆತಕ್ಕೆ ಹಾಫ್​ ಸೆಂಚುರಿ ಸಿಡಿಸಿದ್ರು. ಅರ್ಧಶತಕದ ಬಳಿಕ ಮತ್ತಷ್ಟು ವೈಲೆಂಟ್​ ಆದ ಬಿಹಾರ ಬಾಯ್​, ಇಶ್​ ಸೌದಿ ಹಾಕಿದ 12ನೇ ಓವರ್​​ವೊಂದರಲ್ಲೇ 29 ರನ್​ ಚಚ್ಚಿದ್ರು.
ಇದನ್ನೂ ಓದಿ: Union Budget: ಇವತ್ತು ಕೇಂದ್ರದ ಬಜೆಟ್ ಮಂಡನೆ.. ಜನ ಸಾಮಾನ್ಯರ ನಿರೀಕ್ಷೆಗಳೇನು..?
ಕೂಲ್​ ಅಂಡ್ ಕಾಮ್​ ಇನ್ನಿಂಗ್ಸ್​ ಕಟ್ಟಿದ ಸೂರ್ಯಕುಮಾರ್​ ಯಾದವ್​ ಟಿ20 ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ 3 ಸಾವಿರ ರನ್​ ಪೂರೈಸಿದ ಸಾಧನೆ ಮಾಡಿದ್ರು. 33 ಎಸೆತಗಳಲ್ಲಿ ಹಾಫ್​​ ಸೆಂಚುರಿ ಪೂರೈಸಿ ಸಂಭ್ರಮಿಸಿದ್ರು. 63 ರನ್​ಗಳಿಸಿ ಸೂರ್ಯಕುಮಾರ್​ ಔಟಾದ್ರೆ, ಇಶಾನ್​ ಕಿಶನ್​ ಅಬ್ಬರ ಮುಂದುವರೆಯಿತು. ಬಿಗ್​ಶಾಟ್​ಗಳನ್ನ ಪ್ಲೇ ಮಾಡಿ ಫ್ಯಾನ್ಸ್​ಗೆ ಜಬರ್ದಸ್ತ್​ ಎಂಟರ್​​ಟೈನ್​ಮೆಂಟ್ ನೀಡಿದ ಕಿಶನ್, ಕೇವಲ 42 ಎಸೆತಕ್ಕೆ ಸೆಂಚುರಿ ಚಚ್ಚಿದ್ರು.
/filters:format(webp)/newsfirstlive-kannada/media/media_files/2026/02/01/team-india-19-2026-02-01-09-18-37.jpg)
ಇಶಾನ್​ ಕಿಶನ್ 103 ರನ್​ಗಳಿಸಿ ನಿರ್ಗಮಿಸಿದ್ರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ರನ್​ ಬೇಟೆ ಮುಂದುವರೆಸಿದ್ರು. ಕಿವೀಸ್​ ಬೌಲರ್ಸ್​ ಕಿವಿ ಹಿಂಡಿದ ಹಾರ್ದಿಕ್, ತಿರುವನಂತಪುರಂ ಸ್ಟೇಡಿಯಂನ ಉದ್ದಗಲಕ್ಕೂ ಚೆಂಡಿನ ದರ್ಶನ ಮಾಡಿಸಿದ್ರು. 16 ಎಸೆತಗಳಲ್ಲಿ 42 ರನ್​ಗಳಿಸಿದ್ರು. ಅಂತಿಮವಾಗಿ ರಿಂಕು ಸಿಂಗ್ 8, ಶಿವಂ ದುಬೆ 7 ರನ್​ಗಳ ಕಾಣಿಕೆ ನೀಡಿದ್ರು. 20 ಓವರ್​ಗಳ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 271 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕಿತು.
ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ನ್ಯೂಜಿಲೆಂಡ್​ ಕೂಡ ಭರ್ಜರಿ ಫೈಟ್​ ಬ್ಯಾಕ್​ ನಡೆಸ್ತು. ಇಂಡಿಯನ್ ಬೌಲಿಂಗ್ ದಾಳಿಯನ್ನ ಕಿವೀಸ್​ ಬ್ಯಾಟರ್ಸ್​ ದಿಟ್ಟವಾಗಿ ಎದುರಿಸಿದ್ರು. ಕೊನೆಯ ಓವರ್​​ನವರೆಗೂ ಬ್ಲ್ಯಾಕ್​​ಕ್ಯಾಪ್ಸ್​ ಪಡೆ ಹೋರಾಟ ನಡೆಸ್ತು. ಮೊದಲ ಓವರ್​ನ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಟೀಮ್​ ಸೀಫರ್ಟ್​ ನ್ಯೂಜಿಲೆಂಡ್​​ ಚೇಸಿಂಗ್​ಗೆ ಕಿಕ್​ ಸ್ಟಾರ್ಟ್​ ನೀಡಿದ್ರು. ಆದ್ರೆ ಅಬ್ಬರ ಹೆಚ್ಚು ಹೊತ್ತು ನಡೀಲಿಲ್ಲ. ​ ಅದೇ ಓವರ್​ನ ಕೊನೆಯ ಎಸೆತದಲ್ಲಿ ಸೀಫರ್ಟ್​ಗೆ ಆರ್ಷ್​​ದೀಪ್​ ಪೆವಿಲಿಯನ್​ ದಾರಿ ತೋರಿಸಿದ್ರು.
ಇದನ್ನೂ ಓದಿ: Union Budget -2026: ಕರ್ನಾಟಕದ ಐದು ದೊಡ್ಡ ನಿರೀಕ್ಷೆಗಳು..!
ಮತ್ತೋರ್ವ ಆರಂಭಿಕ ಫಿನ್ ಅಲೆನ್ ಅಬ್ಬರದ ಆಟವಾಡಿದ್ರು. ಅಲೆನ್​ಗೆ ರಚಿನ್​ ರವೀಂದ್ರ ಸಾಥ್​ ನೀಡಿದ್ರು. ಆರ್ಷ್​​ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಬೂಮ್ರಾ ಬೌಲಿಂಗ್​ ದಾಳಿಯನ್ನ ದಿಟ್ಟವಾಗಿ ಎದುರಿಸಿದ ಫಿನ್ ಅಲೆನ್​ ಜಸ್ಟ್​ 22 ಎಸೆತಕ್ಕೆ ಹಾಫ್​​ ಸೆಂಚುರಿ ಬಾರಿಸಿದ್ರು. ಅರ್ಧಶತಕದ ಬಳಿಕ ಮತ್ತಷ್ಟು ಆರ್ಭಟ ನಡೆಸಿದ ಫಿನ್ ಅಲೆನ್​ ಜಸ್ಟ್​ 38 ಎಸೆತಗಳಲ್ಲಿ 80 ರನ್​ಗಳಿಸಿದ್ರು. 8 ಬೌಂಡರಿ, 6 ಸಿಕ್ಸರ್​ ಸಿಡಿಸಿದ್ದ ಫಿನ್​ ಅಲೆನ್ ಆಟಕ್ಕೆ ಅಂತಿಮವಾಗಿ ಅಕ್ಷರ್​ ಪಟೇಲ್ ಅಂತ್ಯ ಹಾಡಿದ್ರು.
ಫಿನ್​ ಅಲೆನ್​ ಪೆವಿಲಿಯನ್​ ಸೇರಿದ ಬೆನ್ನಲ್ಲೇ ಗ್ಲೇನ್​ ಫಿಲಿಪ್ಸ್​ ಔಟಾದ್ರು. 7 ರನ್​ಗಳಿಗೆ ಫಿಲಿಪ್ಸ್​ ಆಟ ಅಂತ್ಯವಾಯ್ತು. 12ನೇ ಓವರ್​​ನಲ್ಲಿ ಆರ್ಷ್​​ದೀಪ್​ ಸಿಂಗ್​ 2 ಬಿಗ್​ ವಿಕೆಟ್​ ಬೇಟೆಯಾಡಿದ್ರು. ರಚಿನ್ ರವೀಂದ್ರ 30 ರನ್​ಗಳಿಸಿ ನಿರ್ಗಮಿಸಿದ್ರೆ, ಮಿಚೆಲ್​ ಸ್ನಾಂಟ್ನೆರ್​​ ಸೊನ್ನೆ ಸುತ್ತಿದ್ರು. 14ನೇ ಓವರ್​​ನಲ್ಲಿ ಡೇರಿಲ್ ಮಿಚೆಲ್​, ಜಸ್​ಪ್ರಿತ್​​ ಬೂಮ್ರಾ ಮೇಲೆ ಸವಾರಿ ಮಾಡಿದ್ರು. ಒಂದೇ ಓವರ್​​ನಲ್ಲಿ ಬೂಮ್ರಾ, 22 ರನ್​ ಹೊಡೆಸಿಕೊಂಡ್ರು.
ಬೆವೊನ್ ಜೇಕಬ್ಸ್​ 7 ರನ್​ಗಳಿಸಿ ಔಟಾದ್ರು. 16ನೇ ಓವರ್​ನಲ್ಲಿ ಆರ್ಷ್​​ದೀಪ್ ಸಿಂಗ್ ಕೈಲ್​ ಜೆಮಿಸನ್​, ಡೇರಿಲ್ ಮಿಚೆಲ್​ ವಿಕೆಟ್​ ಉರುಳಿಸಿದ್ರು. ಈ ಮೂಲಕ ಪಂದ್ಯದಲ್ಲಿ 5 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ರು. ಲಾಕಿ ಫರ್ಗ್ಯೂಸನ್​ 3 ರನ್​ಗಳಿಸಿ ನಿರ್ಗಮಿಸಿದ್ರೆ, ಹೋರಾಟ ನಡೆಸಿದ ಇಶ್​ ಸೋಧಿ 33 ರನ್​ಗಳಿಸಿ ಔಟಾದ್ರು. 225 ರನ್​ಗಳಿಗೆ ನ್ಯೂಜಿಲೆಂಡ್​ ಆಲೌಟ್​ ಆಯ್ತು. 46 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ಟೀಮ್​ ಇಂಡಿಯಾ 4-1 ಅಂತರದಲ್ಲಿ ಸರಣಿ ಜಯಿಸಿತು.
ಇದನ್ನೂ ಓದಿ: ದೇಶದ ಮೊದಲ ಬಜೆಟ್ ಮಂಡನೆ ಆಗಿದ್ದು ಯಾವಾಗ? ‘ಬಜೆಟ್’​ ಎಂಬ ಪದ ಹುಟ್ಟಿಕೊಂಡ ಕತೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us