ಕುಡಿದು ಕಾರು ಚಲಾಯಿಸಿ ಯುವತಿಯ ಜೀವ ತೆಗೆದ ಪೊಲೀಸ್.. ರಕ್ಷಕ ಹಂತಕನಾದ ಕತೆ..!

ಜನಸಾಮಾನ್ಯರ ರಕ್ಷಣೆ ಮಾಡಬೇಕಾದ ಪೊಲೀಸರೇ ಮದ್ಯದ ಅಮಲಿನಲ್ಲಿ ಅಟ್ಟಹಾಸ ಮೆರೆದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಚಲಾಯಿಸುತ್ತಿದ್ದ ಕಾರು ಇ-ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ, 24 ವರ್ಷದ ನಿಕಿತಾ ಎಂಬ ಯುವತಿ ದಾರುಣವಾಗಿ ಮೃತಪಟ್ಟಿದ್ದಾರೆ.

author-image
Ganesh Kerekuli
ambala police
Advertisment

ಜನಸಾಮಾನ್ಯರ ರಕ್ಷಣೆ ಮಾಡಬೇಕಾದ ಪೊಲೀಸರೇ ಮದ್ಯದ ಅಮಲಿನಲ್ಲಿ ಅಟ್ಟಹಾಸ ಮೆರೆದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಚಲಾಯಿಸುತ್ತಿದ್ದ ಕಾರು ಇ-ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ, 24 ವರ್ಷದ ನಿಕಿತಾ ಎಂಬ ಯುವತಿ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮೃತಳ ಕುಟುಂಬಸ್ಥರು ಅಂಬಾಲಾ ಸಿವಿಲ್ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದ್ದಾರೆ.

ಘಟನೆಯ ವಿವರ

ಮೃತ ನಿಕಿತಾ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ತಡರಾತ್ರಿ ದೆಹಲಿಯಿಂದ ಅಂಬಾಲಾದಲ್ಲಿರುವ ತಮ್ಮ ಮನೆಗೆ ಮರಳುತ್ತಿದ್ದರು. ಅವರು ಇ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ, ಅಂಬಾಲಾದ ಕಾಳಿ ಪಲ್ಟನ್ ಸೇತುವೆಯ (Kali Paltan Bridge) ಬಳಿ ವೇಗವಾಗಿ ಬಂದ ಕಾರೊಂದು ರಿಕ್ಷಾಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ‘ರಾಜಕಾರಣ ಮಾಡೋಕೆ ಬಂದಿದ್ದೀನಿ, ಗಾಳಿ ಕುಡಿಯೋಕಲ್ಲ : ಸೋನಿಯಾ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ!

ambala police (1)

ಡಿಕ್ಕಿಯ ರಭಸಕ್ಕೆ ನಿಕಿತಾ ರಿಕ್ಷಾದಿಂದ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ದಯೆಯಿಲ್ಲದ ಚಾಲಕ, ಕೆಳಗೆ ಬಿದ್ದ ಯುವತಿಯ ಮೇಲೆಯೇ ಕಾರು ಹರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ನಿಕಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಘಟನೆ ಕುರಿತು ಮಾಹಿತಿ ನೀಡಿರುವ ಇ-ರಿಕ್ಷಾ ಚಾಲಕ ರವೀಂದರ್ ಸಿಂಗ್, ‘ನಾನು ನಾಲ್ವರು ಪ್ರಯಾಣಿಕರನ್ನು ಕರೆದುಕೊಂಡು ಅಂಬಾಲಾ ಕಂಟೋನ್ಮೆಂಟ್ ಕಡೆಯಿಂದ ಬರುತ್ತಿದ್ದೆ. ಆಗ ವೇಗವಾಗಿ ಬಂದ ಪೊಲೀಸ್ ಅಧಿಕಾರಿಯ ಕಾರು ನಮ್ಮ ರಿಕ್ಷಾಗೆ ಗುದ್ದಿತು. ಆಘಾತದಿಂದ ಯುವತಿ ಕೆಳಗೆ ಬಿದ್ದಳು. ಆದರೆ ಆ ಪೊಲೀಸ್ ಅಧಿಕಾರಿ ವಾಹನ ನಿಲ್ಲಿಸುವ ಬದಲು ಆಕೆಯ ಮೇಲೆಯೇ ಹರಿಸಿದ. ಆತನನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಳು. ಕಾರು ಓಡಿಸುತ್ತಿದ್ದ ಪೊಲೀಸ್ ಕುಡಿದಿದ್ದ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಫೈರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆಗೆ ಹೈಕಮಾಂಡ್ ಬುಲಾವ್? ದೆಹಲಿ ನಾಯಕರಿಂದ ಕರೆ ಬಂದಿದ್ಯಾಕೆ?

ಅಪಘಾತ ನಡೆದ ತಕ್ಷಣ ಸ್ಥಳೀಯರು ಕಾರು ಚಾಲಕನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆ ವೇಳೆ ಆರೋಪಿ ಬಲ್ದೇವ್ ನಗರ ಔಟ್‌ಪೋಸ್ಟ್‌ನಲ್ಲಿ ಪಿಎಸ್‌ಐ (PSI) ಆಗಿರುವ ಅಮಿತ್ ಎಂದು ತಿಳಿದುಬಂದಿದೆ. ಠಾಣಾಧಿಕಾರಿ ಧರಮ್‌ವೀರ್ ಮಾತನಾಡಿ, ಆರೋಪಿ ಪೊಲೀಸ್ ಅಧಿಕಾರಿ ಮದ್ಯಪಾನ ಮಾಡಿದ್ದರಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ. ವಾಹನ ಯುವತಿಯ ಮೇಲೆ ಹರಿದು, ಹೆದ್ದಾರಿಯ ಗ್ರಿಲ್‌ಗೆ ಡಿಕ್ಕಿ ಹೊಡೆದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಿಕಿತಾ ಸಹೋದರ ಮಯಾಂಕ್ ಮಾತನಾಡಿ, ನನ್ನ ಅಕ್ಕ ದೆಹಲಿಯಿಂದ ಬರುತ್ತಿದ್ದಳು. ಕುಡಿದು ವಾಹನ ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿಯೇ ನನ್ನ ಅಕ್ಕನ ಸಾವಿಗೆ ಕಾರಣ ಎಂದು ಕಣ್ಣೀರು ಹಾಕಿದ್ದಾರೆ. ರಕ್ಷಣೆ ನೀಡಬೇಕಾದವನೇ ಪ್ರಾಣ ತೆಗೆದಿದ್ದಕ್ಕೆ ಇಡೀ ಅಂಬಾಲಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಮ್ಯಾನೇಜ್​ಮೆಂಟ್​ಗೆ ಸೆಲೆಕ್ಷನ್​ ಟೆನ್ಶನ್.. ಬೂಮ್ರಾ vs ಸಿರಾಜ್​ ಫೈಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Haryana Accident,
Advertisment