/newsfirstlive-kannada/media/media_files/2026/02/12/anantakumar-hegade-1-2026-02-12-10-07-01.jpg)
ಕಳೆದ ಲೋಕಸಭಾ ಚುನಾವಣೆಯ ನಂತರ ಸಂಪೂರ್ಣವಾಗಿ ಮೌನಕ್ಕೆ ಜಾರಿದ್ದ, ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಬಿಜೆಪಿ ಫೈರ್ ಬ್ರ್ಯಾಂಡ್ ನಾಯಕ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಲಕ್ಷಣಗಳು ಗೋಚರಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿರುವ ಸುದ್ದಿಯೆಂದರೆ, ಸ್ವತಃ ಬಿಜೆಪಿ ಹೈಕಮಾಂಡ್ ನಾಯಕರೇ ಹೆಗಡೆ ಅವರಿಗೆ ‘ಬುಲಾವ್’ ನೀಡಿದ್ದಾರೆ ಎನ್ನಲಾಗಿದೆ. ಸಂವಿಧಾನದ ಕುರಿತಾದ ಹೇಳಿಕೆ ಹಾಗೂ 2024ರ ಟಿಕೆಟ್ ಕೈತಪ್ಪಿದ ನಂತರ ಅಂತರ ಕಾಯ್ದುಕೊಂಡಿದ್ದ ಹೆಗಡೆಯವರನ್ನು ಮತ್ತೆ ಮುನ್ನೆಲೆಗೆ ತರಲು ಹೈಕಮಾಂಡ್ ಪ್ಲಾನ್ ಮಾಡಿದೆ ಎಂಬ ಚರ್ಚೆ ಜೋರಾಗಿದೆ.
ಇದನ್ನೂ ಓದಿ: ಡೆಲ್ಲಿಯಲ್ಲಿ ಇವತ್ತು ಭಾರತಕ್ಕೆ ನಮೀಬಿಯಾ ಸವಾಲ್.. ಟೀಂ ಇಂಡಿಯಾ ಪ್ಲಾನ್ ಏನು..?
/filters:format(webp)/newsfirstlive-kannada/media/media_files/2026/02/12/anantakumar-hegade-2026-02-12-10-07-19.jpg)
ಅನಂತಕುಮಾರ್ ಹೆಗಡೆ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಸಿಕ್ಕ ನಂತರ ಪಕ್ಷದ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದರು. ಈಗ ದೆಹಲಿ ಮಟ್ಟದ ನಾಯಕರು ಹೆಗಡೆ ಅವರನ್ನು ಸಂಪರ್ಕಿಸಿದ್ದು, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೈಕಮಾಂಡ್ ಹೆಗಡೆಯವರನ್ನೇ ಮತ್ತೆ ನೆನಪಿಸಿಕೊಳ್ಳಲು ಕಾರಣವೇನು?
ಟಿಕೆಟ್ ನೀಡದಿದ್ದರೂ, ಹೆಗಡೆಯಂತಹ ಪ್ರಭಾವಿ ನಾಯಕ ರಾಜಕೀಯದಿಂದ ನಿವೃತ್ತರಾಗಬಾರದು ಅಥವಾ ಮೂಲೆಗುಂಪಾಗಬಾರದು ಎಂದು ಬಿಜೆಪಿ ವರಿಷ್ಠರು ಭಾವಿಸಿದ್ದಾರೆ. ಅದಕ್ಕೆ ಪ್ರಮುಖ 10 ಕಾರಣಗಳು ಇಲ್ಲಿವೆ.
ಟಿಕೆಟ್ ಕೈತಪ್ಪಿದ್ದೇ ಕಾರಣ: 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಅವರು ರಾಜಕೀಯದಿಂದ ದೂರ ಸರಿದಿದ್ದಾರೆ. ಅವರನ್ನು ಮತ್ತೆ ಸಕ್ರಿಯಗೊಳಿಸುವುದು ಪಕ್ಷದ ಉದ್ದೇಶ.
ಫೈರ್ ಬ್ರ್ಯಾಂಡ್ ಇಮೇಜ್: ಬಿಜೆಪಿಯಲ್ಲಿ ಹಿಂದೂತ್ವದ ವಿಚಾರದಲ್ಲಿ ರಾಜಿ ಇಲ್ಲದ 'ಫೈರ್ ಬ್ರ್ಯಾಂಡ್' ನಾಯಕನಾಗಿ ಹೆಗಡೆ ಗುರುತಿಸಿಕೊಂಡಿದ್ದಾರೆ. ಇಂತಹ ನಾಯಕನ ಮೌನ ಪಕ್ಷಕ್ಕೆ ನಷ್ಟವುಂಟು ಮಾಡಬಹುದು.
ಸಚಿವ ಸ್ಥಾನದ ಅನುಭವ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಮತ್ತು ಆಡಳಿತಾತ್ಮಕ ಹಿಡಿತ ಅವರಿಗಿದೆ.
ಸಂಘದ ಹಿನ್ನೆಲೆ: ಆರ್‌ಎಸ್‌ಎಸ್ (RSS) ಗರಡಿಯಲ್ಲಿ ಪಳಗಿದ ನಾಯಕ ಇವರು. ಸಂಘದ ಸಿದ್ಧಾಂತಗಳಿಗೆ ಬದ್ಧರಾಗಿರುವ ವ್ಯಕ್ತಿ.
ವಾಗ್ಮಿ ಮತ್ತು ಸಂಘಟಕ: ತಮ್ಮ ಖಡಕ್ ಭಾಷಣಗಳ ಮೂಲಕ ಕಾರ್ಯಕರ್ತರಲ್ಲಿ ಕಿಚ್ಚು ಹಚ್ಚಬಲ್ಲ ಮತ್ತು ಸಂಘಟನೆಗೆ ಒತ್ತು ಕೊಡುವ ಸಾಮರ್ಥ್ಯ ಹೆಗಡೆಗಿದೆ.
ಕ್ಷೇತ್ರದ ಮೇಲಿನ ಹಿಡಿತ: ದೀರ್ಘಕಾಲ ಸಂಸದರಾಗಿ ಕೆಲಸ ಮಾಡಿರುವ ಇವರು, ಉತ್ತರ ಕನ್ನಡ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಬಲ ಹಿಡಿತ ಸಾಧಿಸಿದ್ದಾರೆ.
ಹೋರಾಟದ ಹಿನ್ನೆಲೆ: ರಾಮಮಂದಿರ ಹೋರಾಟ, ರಥಯಾತ್ರೆ ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷಕ್ಕೆ ಟೊಂಕ ಕಟ್ಟಿ ದುಡಿದ ನಿಪುಣ ಇವರು.
ಭಟ್ಕಳ ಗಲಭೆ ಮತ್ತು ನಿಲುವು:ಹಿಂದೆ ಭಟ್ಕಳದಲ್ಲಿ ನಡೆದ ಗಲಭೆಗಳ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಇವರು ತೆಗೆದುಕೊಂಡ ಗಟ್ಟಿ ನಿಲುವು ಮತ್ತು ಕಿಡಿಕಾರಿದ ಮಾತುಗಳು ಒಂದು ವರ್ಗದ ಮತಬ್ಯಾಂಕ್ ಅನ್ನು ಭದ್ರಪಡಿಸಿತ್ತು.
ನಾಯಕರ ಜೊತೆ ಒಡನಾಟ: ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹಿಡಿದು ನರೇಂದ್ರ ಮೋದಿ, ಅಮಿತ್ ಶಾ ಅವರವರೆಗೂ ಹಿರಿಯ ನಾಯಕರ ಜೊತೆ ನೇರ ಸಂಪರ್ಕ ಮತ್ತು ಒಡನಾಟ ಹೊಂದಿದ್ದಾರೆ.
ನೈಪಥ್ಯಕ್ಕೆ ಸರಿಯಬಾರದು: ಇಷ್ಟೆಲ್ಲಾ ಸಾಮರ್ಥ್ಯವಿರುವ ನಾಯಕ ಕೇವಲ ಒಂದು ಎಲೆಕ್ಷನ್ ಟಿಕೆಟ್ ಸಿಗಲಿಲ್ಲವೆಂದು ರಾಜಕೀಯ ನೈಪಥ್ಯಕ್ಕೆ ಸರಿಯಬಾರದು ಎಂಬುದು ಹೈಕಮಾಂಡ್ ಆಶಯ.
ಮೂಲಗಳ ಪ್ರಕಾರ, ಹೈಕಮಾಂಡ್ ಬುಲಾವ್ ನೀಡಿರುವುದು ಅವರಿಗೆ ಮತ್ತೆ ಯಾವುದಾದರೂ ಚುನಾವಣೆಗೆ ಟಿಕೆಟ್ ನೀಡಲು ಅಲ್ಲ. ಬದಲಾಗಿ, ಸಕ್ರಿಯ ರಾಜಕಾರಣದಲ್ಲಿರಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಸೂಚಿಸಲು ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷವು ಅವರಿಗೆ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಮಹತ್ವದ ಜವಾಬ್ದಾರಿ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ:3 ಮಹಾ ಕನಸುಗಳ ಬೆನ್ನತ್ತಿದ ಅಭಿಷೇಕ್ ಶರ್ಮಾ.. ಟ್ಯಾಟೂ ಹೇಳಿದ ಸ್ಪೆಷಲ್​ ಕಥೆ ಏನು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us