/newsfirstlive-kannada/media/media_files/2025/08/27/jammu_kashmira_rains-2025-08-27-09-14-18.jpg)
ಜಮ್ಮುವಿನಲ್ಲಿ ಭಾರೀ ಮಳೆಯಿಂದಾಗಿ ವೈಷ್ಣೋ ದೇವಿ ಮಾರ್ಗದಲ್ಲಿ (Vaishno Devi Yatra track) ಭೂಕುಸಿತ ಉಂಟಾಗಿದೆ. ಅನೇಕ ಯಾತ್ರಿಕರು ಸೇರಿದಂತೆ ಮೃತರ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. ಇನ್ನು ವೈಷ್ಣೋ ದೇವಿ ಯಾತ್ರೆ ಸ್ಥಗಿತಗೊಂಡಿದೆ. ಜೊತೆಗೆ ದೂರಸಂಪರ್ಕ ಸೇವೆಗಳು ಅಸ್ತವ್ಯಸ್ತವಾಗಿವೆ.
ಎಲ್ಲೆಲ್ಲಿ ಭಾರೀ ಹಾನಿ..?
ಸಾಂಬಾ, ಕಥುವಾ, ಜಮ್ಮು, ಉಧಂಪುರ, ದೋಡಾ ಮುಂತಾದ ತಗ್ಗು ಪ್ರದೇಶಗಳಿಗೆ ಭಾರೀ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ. ನದಿ ಪಾತ್ರಗಳಲ್ಲಿ ವಾಸಿಸೋರ ಸುರಕ್ಷತೆಗಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಳೆ ಬಹುತೇಕ ನಿಂತಿರೋದ್ರಿಂದ ಸ್ವಲ್ಪ ಸಮಾಧಾನವಾಗಿದೆ. ತಗ್ಗು ಪ್ರದೇಶಗಳಿಂದ ನೀರು ಕಡಿಮೆಯಾಗಲು ಪ್ರಾರಂಭಿಸಿದೆ. ವಿಪತ್ತಿನಿಂದ ಉಂಟಾದ ಹಾನಿ ನಿಮ್ಮ ಮುಂದೆಯೇ ಇದೆ. 2014 ರಲ್ಲಿಯೂ ಹೀಗೆಯೇ ಆಗಿತ್ತು ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ‘ದೊಡ್ಡಣ್ಣ’ನಿಗೆ ತೆರಿಗೆ ಮೋಹ.. ಇಂದಿನಿಂದ ಭಾರತದ ಉತ್ಪನ್ನಗಳಿಗೆ ಶೇ.50ರಷ್ಟು ತೆರಿಗೆ..!
ಮಾತಾ ವೈಷ್ಣೋ ದೇವಿ ಕತ್ರಾ, ಜಮ್ಮು ತಾವಿ ಮತ್ತು ಪಠಾಣ್‌ಕೋಟ್ ರೈಲು ನಿಲ್ದಾಣಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಬಗ್ಗೆ ಮಾಹಿತಿಗಾಗಿ ಸಹಾಯ ಪಡೆಯಬಹುದು.
ಸಹಾಯವಾಣಿ ಸಂಖ್ಯೆಗಳು
ಜಮ್ಮು- 7888839911
ದೆಹಲಿ- 9717638775
ಇನ್ನು ಲಡಾಖ್‌ನಲ್ಲಿ ಭಾರೀ ಮಳೆಯಿಂದಾಗಿ ಹಲವಾರು ರಸ್ತೆಗಳು, ರೈಲು ಸೇವೆಗಳು ಮತ್ತು ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ರಂಬನ್ ಜಿಲ್ಲೆಯ ಮರೋಗ್, ದಿಗ್ಡೋಲ್, ಬ್ಯಾಟರಿ ಚಶ್ಮಾ ಮತ್ತು ಕೇಲಾ ಮೋರ್ಹ್‌ಗಳಲ್ಲಿ ಹಲವಾರು ಭೂಕುಸಿತಗಳು, ಮಣ್ಣು ಕುಸಿತ ಮತ್ತು ಗುಂಡಿನ ಕಲ್ಲುಗಳಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಮಳೆ ನರ್ತನ ಕೊಚ್ಚಿ ಹೋಗ್ತಿದೆ ಜೀವನ.. ಭೂಕುಸಿತದಿಂದ ಜೀವ ಬಿಟ್ಟ 13 ಜನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ