/newsfirstlive-kannada/media/post_attachments/wp-content/uploads/2024/11/BEER-INTAKE-3.jpg)
ಮದ್ಯವು ಜಿಎಸ್‌ಟಿಗೆ ಒಳಪಡುವುದಿಲ್ಲ. ಆದರೂ ಅದರ ಬೆಲೆಗಳು ಗಗನಕ್ಕೇರುತ್ತಿವೆ? ಪ್ರತಿಯೊಂದು ರಾಜ್ಯವು ತನ್ನದೇ ಆದ ತೆರಿಗೆಯನ್ನು ವಿಧಿಸುತ್ತದೆ. ಆ ಮೂಲಕ ಸರ್ಕಾರ ತನ್ನ ಖಜಾನೆಯನ್ನ ಅಲ್ಲಿಂದ ತುಂಬಿಸಿಕೊಳ್ಳುತ್ತದೆ. ಬಾರ್​ನ ಕೌಂಟರ್‌ನಲ್ಲಿ ನಿಮಗೆ 150 ರೂಪಾಯಿ ಬೆಲೆಯ ಬಿಯರ್ ಬಾಟಲಿ ಕಾಣಿಸಬಹುದು. ಅದರ ಬೆಲೆಯ ಹಿಂದೆ ಸಂಕೀರ್ಣ ತೆರಿಗೆ ರಚನೆಯೇ ಇದೆ.
ದೇಶದಲ್ಲಿ ಮದ್ಯವು GST ಯಿಂದ ವಿನಾಯಿತಿ ಪಡೆದಿದೆ. ಅಂದರೆ ಕೇಂದ್ರ ಸರ್ಕಾರವು ಅದರ ಮೇಲೆ ನೇರವಾಗಿ ತೆರಿಗೆ ವಿಧಿಸಲ್ಲ. ಅದು ರಾಜ್ಯಗಳ ನಿಯಂತ್ರಣದಲ್ಲಿರೋದ್ರಿಂದ ಒಂದೇ ಬ್ರಾಂಡ್‌ನ ಬಿಯರ್ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಬೆಲೆಗಳಿಗೆ ಸಿಗುತ್ತವೆ.
ಇದನ್ನೂ ಓದಿ: ಲಂಕೆಯಲ್ಲಿ ರಶ್ಮಿಕಾ ಮಂದಣ್ಣ.. ಗೆಳತಿಯರ ಜೊತೆ ‘ಬ್ಯಾಚುಲರ್ ಪಾರ್ಟಿ’ ಎಂದ ಫ್ಯಾನ್ಸ್..! Photos
/filters:format(webp)/newsfirstlive-kannada/media/post_attachments/wp-content/uploads/2024/05/beer-1.jpg)
ಬಿಯರ್ ವೆಚ್ಚದ ಅತಿದೊಡ್ಡ ಪಾಲನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಇದರಲ್ಲಿ ಅಬಕಾರಿ ಸುಂಕ, ವ್ಯಾಟ್ ಮತ್ತು ಹಲವು ಸಂದರ್ಭಗಳಲ್ಲಿ ಹೆಚ್ಚುವರಿ ಸೆಸ್ ಸೇರಿವೆ. ಹಲವು ರಾಜ್ಯಗಳಲ್ಲಿ ಈ ತೆರಿಗೆಯು ಒಟ್ಟು ಬೆಲೆಯ ಶೇಕಡಾ 50 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.
ಉದಾಹರಣೆಗೆ ಕರ್ನಾಟಕದಲ್ಲಿ ಬಿಯರ್ ಮೇಲಿನ ತೆರಿಗೆ ಶೇಕಡಾ 52 ಕ್ಕಿಂತ ಹೆಚ್ಚು. ಮಹಾರಾಷ್ಟ್ರದಲ್ಲಿಯೂ ಸಹ ಅಬಕಾರಿ ಸುಂಕಗಳು ಹೆಚ್ಚಾಗುತ್ತಿದ್ದು, ಬಿಯರ್ ಬೆಲೆಗಳು ನೇರವಾಗಿ ಗ್ರಾಹಕರ ಜೇಬಿನ ಮೇಲೆ ಬೀಳುತ್ತಿವೆ.
/filters:format(webp)/newsfirstlive-kannada/media/post_attachments/wp-content/uploads/2023/07/BEER_WINE_RARE_HIKE.jpg)
ಒಂದು ರಾಜ್ಯದಲ್ಲಿ ಬಿಯರ್‌ನ MRP 150 ರೂ.ಗಳಾಗಿದ್ದರೆ ಮತ್ತು ಅಲ್ಲಿನ ಒಟ್ಟು ತೆರಿಗೆ ಸುಮಾರು ಶೇ. 50 ರಷ್ಟಿದ್ದರೆ ಸುಮಾರು 75 ರೂ.ಗಳು ನೇರವಾಗಿ ಸರ್ಕಾರದ ಖಾತೆಗೆ ತೆರಿಗೆಯಾಗಿ ಹೋಗುತ್ತವೆ. ಉಳಿದ ಮೊತ್ತವು ಬಿಯರ್ ತಯಾರಿಕೆಯ ವೆಚ್ಚ, ಬಾಟಲಿಂಗ್, ಪ್ಯಾಕೇಜಿಂಗ್, ಸಾರಿಗೆ, ವಿತರಕರು ಮತ್ತು ಮಾರಾಟಗಾರರ ಲಾಭಾಂಶ ಒಳಗೊಂಡಿದೆ. ಇದರರ್ಥ ನೀವು ಕುಡಿಯುವ ಬಿಯರ್‌ನ ನಿಜವಾದ ಬೆಲೆ 60 ರಿಂದ 70 ರೂಪಾಯಿಗಳ ನಡುವೆ ಇರುತ್ತದೆ.
ಮದ್ಯವನ್ನು ಜಿಎಸ್‌ಟಿಯಿಂದ ಹೊರಗಿಡಲು ಪ್ರಮುಖ ಕಾರಣ ರಾಜ್ಯ ಆದಾಯ. ಮದ್ಯದ ಆದಾಯವು ರಾಜ್ಯಗಳಿಗೆ ಆದಾಯದ ಪ್ರಮುಖ ಮೂಲ. ಇದನ್ನು ಜಿಎಸ್‌ಟಿ ಅಡಿಯಲ್ಲಿ ತರುವುದರಿಂದ ತೆರಿಗೆ ವಿತರಣೆಯಲ್ಲಿ ಬದಲಾವಣೆ ಉಂಟಾಗುತ್ತದೆ.
ಇದನ್ನೂ ಓದಿ: ಕ್ರೇಜಿಸ್ಟಾರ್ ಮುಂದೆ ಒನ್​ ವೇ ಲವ್ ಸ್ಟೋರಿ ಹೇಳಿದ ಗಿಲ್ಲಿ.. ಕುತೂಹಲದಿಂದ ಕೇಳಿದ ಕಾವ್ಯ VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us