/newsfirstlive-kannada/media/media_files/2025/11/14/rahul-gandhi-1-2025-11-14-16-10-34.jpg)
ಬಿಹಾರದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಹಾರ ಯಾತ್ರೆ ಮಾಡಿದ್ದರು. ಬಿಹಾರದ 25 ಜಿಲ್ಲೆಗಳಲ್ಲಿ 110 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಯಾತ್ರೆ ಮಾಡಿದ್ದರು.
ರಾಹುಲ್ ಗಾಂಧಿ ಬರೋಬ್ಬರಿ 1,300 ಕಿ.ಮೀ. ಯಾತ್ರೆ ಮಾಡಿದ್ದರು. ಆದರೆ ರಾಹುಲ್ ಯಾತ್ರೆ ಮಾಡಿದ್ದ 110 ಕ್ಷೇತ್ರಗಳ ಪೈಕಿ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ. ಕಾಂಗ್ರೆಸ್ ಪಕ್ಷ ಬಿಹಾರದಲ್ಲಿ ಈ ಭಾರಿ 61 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.
ಇದನ್ನೂ ಓದಿ: ಸಾಲುಮರದ ತಿಮ್ಮಕ್ಕ ಇನ್ನು ನೆನಪು ಮಾತ್ರ.. ಅನಾಥವಾದ 8000ಕ್ಕೂ ಹೆಚ್ಚು ಮರಗಳು..
ಈ ಪೈಕಿ ಬರೀ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ರಾಹುಲ್ ಗಾಂಧಿ ಬಿಹಾರದಲ್ಲಿ ವೋಟರ್ ಅಧಿಕಾರ ಯಾತ್ರೆ ನಡೆಸಿದ್ದರು. ರಾಹುಲ್ ಗಾಂಧಿ ಯಾತ್ರೆ ಮಾಡಿದ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ನಿರೀಕ್ಷೆಯಲ್ಲಿ ನಾಯಕರು, ಕಾರ್ಯಕರ್ತರು ಇಟ್ಟುಕೊಂಡಿದ್ದರು. ಆದರೆ ಅದೆಲ್ಲವೂ ಈಗ ಎನ್‌ಡಿಎ ಸುನಾಮಿ ಗೆಲುವಿನಿಂದಾಗಿ ಹುಸಿಯಾಗಿದೆ. ಹೀಗಾಗಿ ಬಿಹಾರದಲ್ಲಿ ರಾಹುಲ್ ಗಾಂಧಿ ಮ್ಯಾಜಿಕ್ ನಡೆದಿಲ್ಲ.
2010ರ ಸಾಧನೆ ದಾಟಿದ ಎನ್‌ಡಿಎ!
ಬಿಹಾರದಲ್ಲಿ ಎನ್‌ಡಿಎ ಬರೋಬ್ಬರಿ 208 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇದು 2010 ವಿಧಾನಸಭಾ ಚುನಾವಣೆಯ ಸಾಧನೆಯನ್ನು ಮೀರಿಸಿದಂತೆ. 2010 ರಲ್ಲಿ ಬಿಹಾರದಲ್ಲಿ ಎನ್‌ಡಿಎ 206 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು . ಆದರೆ 2025 ರಲ್ಲಿ 208 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವಿನ ಮುನ್ಸೂಚನೆಯನ್ನು ಈ ಮುನ್ನಡೆಯ ಮೂಲಕ ನೀಡಿದೆ. 2010 ರಲ್ಲಿ ಜೆಡಿಯು 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 91 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಭಾರಿ ಬಿಜೆಪಿ 95, ಜೆಡಿಯು 84 ಕ್ಷೇತ್ರಗಳಲ್ಲಿ ಮುನ್ನಡೆ, ಗೆಲುವು ಸಾಧಿಸುತ್ತಿವೆ.
ಇದನ್ನೂ ಓದಿ:Bihar Election Result LIVE.. ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಸಿಎಂ ಆಗೋದು ಪಕ್ಕಾ ಎಂದ ಫಲಿತಾಂಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us