/newsfirstlive-kannada/media/media_files/2025/08/04/shibu-soren-2025-08-04-11-34-16.jpg)
ಶಿಬು ಸೊರೇನ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ
ಜಾರ್ಖಂಡ್ ಮುಕ್ತಿ ಮೋರ್ಚಾ ಸ್ಥಾಪಕ (JMM) ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ (Shibu Soren) ಇಂದು ಬೆಳಗ್ಗೆ ನವದೆಹಲಿಯಲ್ಲಿ ನಿಧನರಾದರು. 81 ವರ್ಷದ ಶಿಬು ಸೊರೆನ್ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು.
ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬೆಳಗ್ಗೆ 8.48ಕ್ಕೆ ಕೊನೆಯುಸಿರೆಳೆದರು. ಶಿಬು ಸೊರೆನ್ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಜಾರ್ಖಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡಿದ ಶಿಬು ಸೊರೆನ್ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ತನ್ನ ಗೋರಿಯನ್ನ ತಾನೇ ತೋಡಿಕೊಂಡು ಕಣ್ಣೀರಿಟ್ಟ ವ್ಯಕ್ತಿ.. ಉಗ್ರರಿಂದ ಇದೆಂಥ ಶಿಕ್ಷೆ..? VIDEO
ಶಿಬು ಸೊರೆನ್ ನಿಧನಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಅವರ ಪುತ್ರ ಹೇಮಂತ್ ಸೊರೆನ್ (Hemant Soren) ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗುರೂಜಿ ನಮ್ಮೆಲ್ಲರನ್ನೂ ಅಗಲಿದ್ದಾರೆ ಎಂದು ಕಂಬನಿ ಮಿಡಿದಿದ್ದಾರೆ. ಗೌರವಾನ್ವಿತ ಡಿಶೋಮ್ ಗುರೂಜಿ ನಮ್ಮೆಲ್ಲರನ್ನೂ ಅಗಲಿದ್ದಾರೆ. ಇಂದು ನಾನು ತುಂಬಾ ದುಃಖದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಶಿಬು ಸೊರೆನ್ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವನ್ನು ಸ್ಥಾಪಿಸಿದರು. ಮತ್ತು ಜಾರ್ಖಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಅನೇಕ ಚಳವಳಿಗಳು ಮತ್ತು ಹೋರಾಟಗಳನ್ನು ಮುನ್ನಡೆಸಿದರು. ಅವರ ಹೋರಾಟವು ಫಲ ನೀಡಿತು. ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ನಂತರ ಮೂರು ಬಾರಿ ಮುಖ್ಯಮಂತ್ರಿಯಾದರು.
ಇದನ್ನೂ ಓದಿ: ಅನ್ನದಾತರಿಗೆ ಶಾಕಿಂಗ್ ನ್ಯೂಸ್.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ