/newsfirstlive-kannada/media/media_files/2025/11/15/maithili-thaku-1-2025-11-15-16-32-50.jpg)
ಮೈಥಿಲಿ ಠಾಕೂರ್. ವಯಸ್ಸು 25. ಜಾನಪದ ಗಾಯಕಿಯಾಗಿ ಜನಪ್ರಿಯತೆ ಪಡೆದಿದ್ದ, ಇವರು ಇಂದು ದೇಶದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ! ಬಿಹಾರ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಮೈಥಿಲಿ ಠಾಕೂರ್​​ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ.
ಅಲಿನಗರ ವಿಧಾನಸಭಾ ಕ್ಷೆತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೈಥಿಲಿ ಠಾಕೂರ್​, ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಆರ್​ಜೆಡಿ ಪಕ್ಷದ ಬಿನೋದ್ ಮಿಶ್ರಾ ಅವರನ್ನು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಬಿಹಾರ್ ರಾಜ್ಯದ ಅಂತ್ಯರ ಕಿರಿಯ ವಯಸ್ಸಿನ ಶಾಸಕಿ ಹೊಗಳಿಕೆಗೆ ಕಾರಣರಾಗಿದ್ದಾರೆ.
ಯಾರು ಮೈಥಿಲಿ..?
ಮೈಥಿಲಿ ಜುಲೈ 25, 2000 ರಂದು ಬಿಹಾರದ ಮಧುಬನಿ ಜಿಲ್ಲೆಯ ಬೇಣಿಪಟ್ಟಿ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ರಮೇಶ್ ಠಾಕೂರ್ ಆ ಪ್ರದೇಶದಲ್ಲಿ ಜನಪ್ರಿಯ ಸಂಗೀತಗಾರರು. ತಾಯಿ ಭಾರತಿ ಠಾಕೂರ್ ಗೃಹಿಣಿ. ಮೈಥಿಲಿಗೆ ಇಬ್ಬರು ಸಹೋದರರು. ಮೈಥಿಲಿಗೆ ಬಾಲ್ಯದಿಂದಲೂ ಸಂಗೀತದ ಕಡೆಗೆ ಹೆಚ್ಚು ಒಲವು ಹೊಂದಿರೋದ್ರಿಂದ ಸಂಗೀತವನ್ನೇ ಪ್ರಮುಖ ಆಯ್ಕೆಯನ್ನಾಗಿ ಮಾಡಿಕೊಂಡರು.
/filters:format(webp)/newsfirstlive-kannada/media/media_files/2025/11/15/maithili-thaku-2-2025-11-15-16-34-34.jpg)
ತಂದೆಯಿಂದ ಸಂಗೀತ ಕಲಿತುಕೊಂಡ ಇವರು, ಅವಕಾಶ ಹುಡುಕುತ್ತ ಹೋಗುತ್ತಾರೆ. ಅಂತೆಯೇ, ಕುಟುಂಬದ ಜೊತೆಗೆ ದೆಹಲಿಯ ದ್ವಾರಕಕ್ಕೆ ಬಂದು ನೆಲೆಸುತ್ತಾರೆ. ಇಲ್ಲಿ ರಮೇಶ್ ಠಾಕೂರ್ ಅವರ ಮೂವರು ಮಕ್ಕಳು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ ಮತ್ತು ತಬಲಾದಲ್ಲಿ ತರಬೇತಿ ಪಡೆದುಕೊಳ್ಳುತ್ತಾರೆ.
ಬದುಕಿಗೆ ತಿರುವು ಕೊಟ್ಟ ಜೀ ವಾಹಿನಿ..
2011ರಲ್ಲಿ ಮೈಥಿಲಿ ಬದುಕಿಗೆ ಜೀ ವಾಹಿನಿ ಹೊಸ ತಿರುವು ನೀಡಿತು. ‘ಲಿಟಲ್ ಚಾಂಪ್ಸ್’ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದುಕೊಂಡರು. ಅದೇ ರಿಯಾಲಿಟಿ ಶೋ ಮೂಲಕವೇ ಹೆಚ್ಚು ಜನ ಮನ್ನಣೆ ಪಡೆದುಕೊಂಡರು. 4 ವರ್ಷಗಳ ನಂತರ ಸೋನಿ ಟಿವಿಯಲ್ಲಿ ಪ್ರಸಾರವಾದ ರಿಯಾಲಿಟಿ ಶೋ ‘Indian Idol Junior season’ನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ‘ರೈಸಿಂಗ್ ಸ್ಟಾರ್’ ಎಂಬ ರಿಯಾಲಿಟಿ ಶೋ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದರು. ಇದರಲ್ಲಿ ಅವರು ರನ್ನರ್-ಅಪ್ ಆಗಿ ಜರ್ನಿ ಮುಗಿಸಿದರು.
ಇದನ್ನೂ ಓದಿ:ಡಾಕ್ಟರ್ ಡ್ರೆಸ್ ನಲ್ಲಿರುವ ಉಗ್ರ ಉಮರ್ ನಬಿಯ ಪೋಟೋ ಬಿಡುಗಡೆ : ಫರೀದಾಬಾದ್ ಅಂಗಡಿಗೆ ಭೇಟಿ ನೀಡಿದ್ದ ಉಮರ್
/filters:format(webp)/newsfirstlive-kannada/media/media_files/2025/11/15/maithili-thaku-2025-11-15-16-34-46.jpg)
2017ರಲ್ಲಿ ರೈಸಿಂಗ್ ಸ್ಟಾರ್​ ಸೀಸನ್-1 ಮತ್ತಷ್ಟು ಹೆಚ್ಚು ಖ್ಯಾತಿ ತಂದುಕೊಟ್ಟಿತು. ಮೈಥಿಲಿ ಕಾರ್ಯಕ್ರಮದ ಮೊದಲ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ‘ಓಂ ನಮಃ ಶಿವಾಯ’ ಹಾಡುವ ಮೂಲಕ ಫೈನಲ್​ಗೆ ನೇರವಾಗಿ ಪ್ರವೇಶ ಪಡೆದರು. ಫೈನಲ್​​ನಲ್ಲಿ ಕೇವಲ 2 ವೋಟ್​ಗಳಿಂದ ಸೋತರು. ಈ ಕಾರ್ಯಕ್ರಮದ ನಂತರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದರು. ಅವರ ಒಂದೊಂದು ವೀಡಿಯೊಗಳು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ 70 ಸಾವಿರದಿಂದ 7 ಮಿಲಿಯನ್​ ವರೆಗೆ ವೀಕ್ಷಣೆಗಳನ್ನು ಪಡೆಯುತ್ತವೆ.
ಮೈಥಿಲಿ ಠಾಕೂರ್ ಗಳಿಕೆ ಎಷ್ಟು..?
ಮೈಥಿಲಿ ಠಾಕೂರ್ ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವು ವರದಿಗಳ ಪ್ರಕಾರ, ತಿಂಗಳಿಗೆ 12 ರಿಂದ 15 ಲೈವ್ ಪ್ರದರ್ಶನ ನೀಡುತ್ತಾರೆ. ಒಂದು ಪ್ರದರ್ಶನಕ್ಕೆ 500,000 ರಿಂದ 700,000 ವರೆಗೆ ಚಾರ್ಜ್​ ಮಾಡುತ್ತಾರೆ. ಸರಾಸರಿ ಅವರು ತಿಂಗಳಿಗೆ 600,000 ರಿಂದ 800,000 ಗಳಿಸುತ್ತಾರೆ.
ಶಾಸಕರಾದ ಮೇಲೆ ಎಷ್ಟು ಸಂಪಾದಿಸಬಹುದು..?
ಬಿಹಾರದಲ್ಲಿ ಶಾಸಕರ ಮೂಲ ವೇತನ 50,000 ರೂಪಾಯಿ. ಜೊತೆಗೆ 55,000 ರೂಪಾಯಿ ಪ್ರಾದೇಶಿಕ ಭತ್ಯೆ, 3,000 ದೈನಂದಿನ ಸಭೆ ಭತ್ಯೆ, 40,000 ವೈಯಕ್ತಿಕ ಸಹಾಯಕ ಭತ್ಯೆ ಮತ್ತು 15,000 ಲೇಖನ ಸಾಮಗ್ರಿ ಭತ್ಯೆ ಸೇರಿದಂತೆ ವಿವಿಧ ಭತ್ಯೆಗಳನ್ನು ಪಡೆಯುತ್ತಾರೆ. ಇವುಗಳನ್ನು ಸೇರಿಸಿದರೆ, ಶಾಸಕರ ಮಾಸಿಕ ಆದಾಯ ₹1.43,000 ಮೀರುತ್ತದೆ. ಆದರೆ ನಿಜವಾದ ಆದಾಯ ಇದರಿಂದ ಮಾತ್ರ ಬರುವುದಿಲ್ಲ, ಬದಲಿಗೆ ಶಾಸಕರ ಹುದ್ದೆಯೊಂದಿಗೆ ಬರುವ ಸವಲತ್ತುಗಳಿಂದ ಬರುತ್ತದೆ.
ಶಾಸಕರಿಗೆ ಇರುವ ಸೌಲಭ್ಯಗಳು
ಬಿಹಾರ ಶಾಸಕರು ಆರ್ಥಿಕ ನೆರವಿಗಿಂತ ಹೆಚ್ಚು ಪ್ರಭಾವಶಾಲಿಯಾದ ಅನೇಕ ಸವಲತ್ತುಗಳನ್ನು ಪಡೆಯುತ್ತಾರೆ. ವಾರ್ಷಿಕವಾಗಿ 4 ಲಕ್ಷದವರೆಗಿನ ರೈಲು/ವಿಮಾನ ಪ್ರಯಾಣ ಕೂಪನ್‌ಗಳು, 25 ಲಕ್ಷದವರೆಗಿನ ವಾಹನ ಸಾಲ, ಮಾಜಿ ಶಾಸಕರಿಗೆ 45,000 ರೂಪಾಯಿ ಮಾಸಿಕ ಪಿಂಚಣಿ, 29,000 ಆತಿಥ್ಯ ಭತ್ಯೆ, ಭದ್ರತೆ, ಸರ್ಕಾರಿ ವಸತಿ, ಸಬ್ಸಿಡಿ ವಿದ್ಯುತ್, ನೀರು ಮತ್ತು ಫೋನ್ ಬಿಲ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆ ಕೂಡ ಸಿಗುತ್ತದೆ.
ಇದನ್ನೂ ಓದಿ: ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಸಿಎಂ ಸಿದ್ದರಾಮಯ್ಯ : ಸಿಎಂ ಬದಲಾವಣೆಯೋ, ಸಂಪುಟ ಪುನರ್ ರಚನೆಯೋ ಎಂಬ ತೀರ್ಮಾನ ಸಾಧ್ಯತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us