ಕರ್ನಾಟಕದ ಮೇಲೂ ಮೊಂತಾ ಎಫೆಕ್ಟ್.. ಎಲ್ಲೆಲ್ಲಿ ಭಯಂಕರ ಮಳೆಯ ಎಚ್ಚರಿಕೆ..?

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮೊಂತಾ ಚಂಡಮಾರುತ ಸೃಷ್ಟಿಯಾಗಿದೆ.. ಇಂದು ಆಂಧ್ರ ಕರಾವಳಿಗೆ ಚಂಡಮಾರುತ ಅಪ್ಪಳಿಸಿದೆ.. ಭಾರತದ ಪೂರ್ವ ತೀರದ ಕರಾವಳಿ ಭಾಗಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ ನೀಡಲಾಗಿದೆ.

author-image
Ganesh Kerekuli
ಪ.ಬಂಗಾಳ ಹಾಗೂ ಒಡಿಶಾಗೆ ‘ಡಾನಾ‘ಚಂಡಮಾರುತದ ಭೀತಿ: ಹವಾಮಾನ ಇಲಾಖೆ ಹೇಳಿದ್ದೇನು ?
Advertisment

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮೊಂತಾ ಚಂಡಮಾರುತ ಸೃಷ್ಟಿಯಾಗಿದೆ.. ಇಂದು ಆಂಧ್ರ ಕರಾವಳಿಗೆ ಚಂಡಮಾರುತ ಅಪ್ಪಳಿಸಿದೆ.. ಭಾರತದ ಪೂರ್ವ ತೀರದ ಕರಾವಳಿ ಭಾಗಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದ್ದು ವಿಪತ್ತು ನಿರ್ವಹಣೆಗೆ ರಕ್ಷಣಾ ಪಡೆಗಳನ್ನು ಸರ್ವಸನ್ನದ್ಧವಾಗಿ ಇರಿಸಲಾಗಿದೆ.

ಬಂಗಾಳಕೊಲ್ಲಿ ತೀರದಲ್ಲಿ ಮೊಂತಾ ಚಂಡಮಾರುತದ ಭೀತಿ!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮೊಂತಾ ಚಂಡಮಾರುತದ ಭೀತಿ ಎದುರಾಗಿದೆ.. 110 ಕಿ.ಮೀ ವೇಗದಲ್ಲಿ ಸಾಗುತ್ತಿರುವ ಚಂಡಮಾರುತ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ.. ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ನೆಲೆಗೊಂಡಿರುವ ಚಂಡಮಾರುತ ಕ್ಷಣಕ್ಷಣಕ್ಕೂ ರಭಸ ಪಡೆದುಕೊಳ್ತಿದೆ. ಇಂದು ರಾತ್ರಿ ಚಂಡಿ ರೂಪಕ್ಕೆ ತಿರುಗಲಿರುವ ಮೊಂತಾ ಆಂಧ್ರದ ಮಚಲೀಪಟ್ಟಣ, ಕಳಿಂಗಪಟ್ಟಣ ಹಾಗೂ ಕಾಕಿನಾಡ ತೀರಕ್ಕೆ ಅಪ್ಪಳಿಸಲಿದೆ. ಸದ್ಯ ಆಂಧ್ರ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗ್ತಿದೆ.. ಪಶ್ಚಿಮ ಗೋದಾವರಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿರುಗಾಳಿ ಮಳೆಯಾಗ್ತಿದೆ.. ಕೋನಾಸೀನಾ ಜಿಲ್ಲೆಯ ಅಂತರ್ವೇದಿ ಬೀಚ್ ಬಳಿ ಕಗ್ಗತ್ತಲು ಆವರಿಸಿದೆ.. ಮೋಡ ಕವಿದ ವಾತಾವರಣಕ್ಕೆ ಜನ ಥಂಡಾ ಹೊಡೆದಿದ್ದಾರೆ.. ಚಂಡಮಾರುತ ಎದುರಿಸಲು ಸಕಲ ರೀತಿಯಲ್ಲಿ ಸನ್ನದ್ಧರಾಗಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಅಲರ್ಟ್ ಘೋಷಿಸಲಾಗಿದ್ದು ವಿಶಾಖಪಟ್ಟಣಂ ಕರಾವಳಿ ತೀರದಲ್ಲಿ ಮೀನುಗಾರಿಕಾ ಬೋಟ್​​ಗಳು ಲಂಗರು ಹಾಕಿವೆ..

9 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಣೆ

ಅತ್ತ ಒಡಿಶಾ ಕರಾವಳಿ ಭಾಗದಲ್ಲೂ ಧಾರಾಕಾರ ವರ್ಷಧಾರೆಯಾಗ್ತಿದೆ.. ರಾಜಧಾನಿ ಭುವನೇಶ್ವರ, ಗಜಪತಿ ಜಿಲ್ಲೆ ಸೇರಿ ದಕ್ಷಿಣ ಒಡಿಶಾದಲ್ಲಿ ಭಾರಿ ಮಳೆ ಸುರಿಯುತ್ತಿದೆ..  ಒಡಿಶಾದ 9 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಸರ್ವಸನ್ನದ್ಧರಾಗಿರುವಂತೆ ಒಡಿಶಾ ಸಿಎಂ ಸೂಚನೆ ಬೆನ್ನಲ್ಲೇ ರಕ್ಷಣಾ ಸಾಮಗ್ರಿಗಳೊಂದಿಗೆ NDRF, SDRF ಸಜ್ಜಾಗಿವೆ. ಇನ್ನು ಒಡಿಶಾದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು, ಸೂಕ್ಷ್ಮ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ..

ಇದನ್ನೂ ಓದಿ: ಲೋಕಾಯುಕ್ತ ಹೆಸರಲ್ಲಿ ಲಕ್ಷ ಲಕ್ಷ ವಸೂಲಿ ದಂಧೆ.. ಗುತ್ತಿಗೆದಾರ ಲಾಕ್ ಆಗಿದ್ದೇ ರೋಚಕ..!

ಬಂಗಾಳಕೊಲ್ಲಿ ತೀರದ ಉತ್ತರದಲ್ಲಿರುವ ಪಶ್ಚಿಮ ಬಂಗಾಳಕ್ಕೂ ಮೊಂತಾ ಚಂಡಮಾರುತದ ಎಫೆಕ್ಟ್ ತಟ್ಟಿದೆ. ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೋಲ್ಕತ್ತಾ, ಹೌರಾ, ಹೂಗ್ಲಿ, ಪಶ್ಚಿಮ ಮಿಡ್ನಾಪುರ ಭಾಗದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕಡಲ ತೀರದಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ತಮಿಳುನಾಡಿನ ಉತ್ತರ ಭಾಗದ ಕರಾವಳಿ ತೀರ ಪ್ರದೇಶಗಳು ಹಾಗೂ ಪುದುಚೇರಿ ಸುತ್ತಮುತ್ತ ಭಾರಿ ಮೋಡ ಕವಿದ ವಾತಾರಣ ಇದ್ದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.. ಕರಾವಳಿಯ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕಕ್ಕೂ ಚಂಡಮಾರುತದ ಎಫೆಕ್ಟ್ ತಟ್ಟಿದೆ. ಬೆಂಗಳೂರು ಸೇರಿ ಹಲವೆಡೆ ಇವತ್ತು ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ಇದ್ದು ಥಂಡಿ ವಾತಾವರಣ ನಿರ್ಮಾಣ ಆಗಿದೆ. ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ಬೆಳಗಾವಿ, ಗದಗ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಬೆಂಗಳೂರು, ಶಿವಮೊಗ್ಗ, ಹಾಸನ, ತುಮಕೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಇದು ಆಮೆ ಮೊಲದ ಕತೆ.. ಜಾಹ್ನವಿ ಬಗ್ಗೆ ಇಂಚಿಂಚು ಮಾಹಿತಿ ಹೊರಹಾಕಿದ ಅಶ್ವಿನಿ ಗೌಡ..! VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Heavy Rain Montha Cyclone
Advertisment