/newsfirstlive-kannada/media/media_files/2025/12/12/snake-bite-man-2025-12-12-15-07-55.jpg)
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಚಿರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಿ ಕುಮರ್ರಾ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ 75 ವರ್ಷದ ಸೀತಾರಾಮ್ ಅಹಿರ್ವಾರ್ ಎಂಬ ವೃದ್ಧ ಇದ್ದಾನೆ. ಈತನ ಜೀವನ ತುಂಬಾನೇ ನಿಗೂಢವಾಗಿದೆ.
14 ಬಾರಿ ಹಾವು ಕಚ್ಚಿದ್ದರೂ ಬದುಕುಳಿದ!
ಕಳೆದ 42 ವರ್ಷಗಳಲ್ಲಿ 14 ಬಾರಿ ಬ್ಲಾಕ್ ಕೋಬ್ರಾ ಜಾತಿಗೆ ಸೇರಿದ ವಿಷಕಾರಿ ಕಪ್ಪು ಹಾವು ಕಚ್ಚಿದೆ. ಅಚ್ಚರಿ ಅಂದರೆ ಪ್ರತಿ ಬಾರಿ ಹಾವು ಕಚ್ಚಿದಾಗಲೂ ಅವರ ಜೀವಕ್ಕೆ ಯಾವುದೇ ಅಪಾಯ ಆಗಿಲ್ಲ. ಅಂದ್ಹಾಗೆ ಸೀತಾರಾಮ್, ಕೃಷಿಕ ಕುಟುಂಬದವರು. ಕೃಷಿ ಮಾಡಿ ಜೀವನ ನಡೆಸುತ್ತಿದ್ದಾರೆ.
ಅವರೇ ಹೇಳುವಂತೆ.. 25 ವರ್ಷವಿದ್ದಾಗ ಮೊದಲ ಬಾರಿ ಹಾವು ಕಚ್ಚಿದ ಅನುಭವ ಹಂಚಿಕೊಂಡಿದ್ದಾರೆ. ನನಗೆ ಮೊದಲು ಹಾವು ಕಚ್ಚಿದಾಗ ಊರಿನಲ್ಲಿರುವ ಖೈರಪತಿ ದೇಗುಲಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿನ ಮಂತ್ರವಾದಿ ಮಾಟ-ಮಂತ್ರದ ಮೂಲಕ ನನ್ನನ್ನು ಉಳಿಸಿದ. ಅಂದಿನಿಂದ ನನಗೆ ಹಾವು ಕಚ್ಚುತ್ತಲೇ ಇದೆ. ನಾನು ಬದುಕುತ್ತಲೇ ಇದ್ದೇನೆ ಎಂದಿದ್ದಾರೆ.
ಪತ್ನಿಗೆ ಕನಸು ಬೀಳುತ್ತೆ..
ಪ್ರತಿ ಬಾರಿಯೂ ಹಾವು ಕಚ್ಚುವ ಮೊದಲು ವೃದ್ಧ ಸೀತಾರಾಮ್ ಅಥವಾ ಆತನ ಹೆಂಡತಿ ಕನಸ್ಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತಂತೆ. ಎರಡು ದಿನಗಳ ಮುಂಚೆಯೇ ಕನಸು ಬೀಳುತ್ತದೆ. ಕನಸು ಬಿದ್ದ ನಂತರ ಹಾವು ಕಚ್ಚುತ್ತಿದೆ. ಕನಸು ಬೀಳುತ್ತಿದ್ದಂತೆಯೇ ಇವರ ಕುಟುಂಬ ಆತಂಕಕ್ಕೆ ಒಳಗಾಗುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘ಈ ಕ್ಷೇತ್ರ ಬೆಳಗಬಾರದು ಅಂತಾ ಇಷ್ಟೆಲ್ಲ ನಡೆದಿದೆ..’ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದಕ್ಕೆ ಟ್ವಿಸ್ಟ್..!
ಹಾವು ಕಚ್ಚಿದಾಗ ಏನು ಆಗುತ್ತದೆ..?
ಸೀತಾರಾಮ್​​ಗೆ ಹಾವು ಕಚ್ಚುತ್ತಿದ್ದಂತೆಯೇ ಸೀತಾರಾಮ್ ಪ್ರಜ್ಞೆ ಕಳೆದುಕೊಳ್ತಾರೆ. ನಂತರ ಊರಿನವರೆಲ್ಲ ಸೇರಿ ದೇಗುಲಕ್ಕೆ ಕರೆದುಕೊಂಡು ಹೋಗ್ತಾರೆ. ಅಲ್ಲಿರುವ ತಂತ್ರಿ, ಬೇವಿನ ಎಲೆಗಳ ಸಹಾಯದಿಂದ ವಿಷ ತೆಗೆದು ಮಂತ್ರಗಳನ್ನು ಪಠಿಸುತ್ತಾನೆ. ನಂತರ ಗುಣಪಡಿಸುತ್ತಾನೆ ಎಂದು ಹೇಳಲಾಗಿದೆ.
ತಂತ್ರಿಗಳಾದ ಶಿರೋಮನ್, ಸೀತಾರಾಮನ್​​ ಕೈಗೆ ಉದ್ದಿನ ಬೆಳೆಯ ಕಾಳುಗಳನ್ನು ಕಟ್ಟುತ್ತಾರೆ. ಈ ಕಾಳುಗಳು ಸೀತಾರಾಮನ್ ಕೈಗೆ ಶ್ರೀರಕ್ಷೆ ಆಗಿರುತ್ತದೆ. ಕಾಳುಗಳು ಉದುರಿ ಕಣ್ಮರೆಯಾದಾಗ ಮಾತ್ರ ಹಾವು ಕಚ್ಚುತ್ತಿದೆ. ಇದನ್ನು ಅಲ್ಲಿನ ಗ್ರಾಮಸ್ಥರು ದೈವಿಕ ಆಟ ಎಂದು ಕರೆಯುತ್ತಿದ್ದು, ನಿಗೂಢತೆಯನ್ನು ನೋಡುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ ಬಳಿಕ ಬೆಂಗಳೂರಿನಲ್ಲಿ ಹೆಚ್ಚಾದ ವಾಯು ಮಾಲಿನ್ಯ ! : ಬೆಂಗಳೂರು ಗಾಳಿ ಕೂಡ ಅನಾರೋಗ್ಯಕರ !
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us