‘ದೇಶದ ಹಿತಕ್ಕಾಗಿ 3 ಮಕ್ಕಳು ಮಾಡಿಕೊಳ್ಳಿ..’ 75ನೇ ವಯಸ್ಸಿಗೆ ರಾಜಕೀಯ ನಿವೃತ್ತಿ ಬಗ್ಗೆ ಭಾಗವತ್ ಹೇಳಿದ್ದೇನು?

ದೇಶದ ಹಿತಕ್ಕಾಗಿ ಮೂವರು ಮಕ್ಕಳನ್ನು ಮಾಡಿಕೊಳ್ಳಿ. 3 ಮಕ್ಕಳಿದ್ರೆ ಪೋಷಕರು, ಮಕ್ಕಳ ಆರೋಗ್ಯವೂ ಉತ್ತಮ. ಪ್ರತಿ ನಾಗರಿಕ 3 ಮಕ್ಕಳು ಹೊಂದುವುದನ್ನು ಖಚಿತಪಡಿಸಿ ಅಂತಾ RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

author-image
Ganesh Kerekuli
mohan bhagwat

ಮೋಹನ್ ಭಾಗವತ್

Advertisment

ಬೆಂಗಳೂರು: 75ನೇ ವಯಸ್ಸಿನಲ್ಲಿ ನಿವೃತ್ತಿ ಅಂತ ಎಂದೂ ಹೇಳಿಲ್ಲ. ನಿವೃತ್ತಿ ಹೊಂದುವೆ ಅಂತ ಎಂದೂ ಹೇಳಿಲ್ಲ ಅಥವಾ ಯಾರಾದರೂ ನಿವೃತ್ತರಾಗಬೇಕು ಅಂತ ಹೇಳಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಶಿಕ್ಷಣ ನೀತಿ ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆ

ಆರ್​ಎಸ್​ಎಸ್​ 100 ವರ್ಷ ಸಂಭ್ರಮದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು.. ನಮಗೆ ಇಷ್ಟವಿರಲಿ, ಇಲ್ಲದಿರಲಿ ಕೆಲಸ ನೀಡಲಾಗುತ್ತೆ. ಸಂಘವು ಏನು ಹೇಳುತ್ತದೆಯೋ ಅದನ್ನು ಮಾಡಬೇಕು. ಸಂಘ ಬಯಸುವವರೆಗೂ ಕೆಲಸ ಮಾಡುತ್ತೇವೆ. ನನಗೆ 80 ವರ್ಷವಾಗಿ ಸಂಘ ಕೆಲಸ ಮಾಡಿ ಅಂದ್ರೆ ಮಾಡಬೇಕು. ‘ಸಂಘ’ ಬಯಸುವವರೆಗೂ ಕೆಲಸ ಮಾಡಲು ಸಿದ್ಧರಿದ್ದೇವೆ. 

ಇದನ್ನೂ ಓದಿ: ಅನುಶ್ರೀ ಕಲ್ಯಾಣ -ಲೇಟೆಸ್ಟ್ ಫೋಟೋಗಳು

ಇಂದು ಆರ್​ಎಸ್​ಎಸ್​ ಮುಖ್ಯ ಕಚೇರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ.. ಹೆಡ್ಗೆವಾರ್​, ಗೋಳವಲ್ಕರ್​ ಅವರಿಗೆ ಶ್ರದ್ಧಾಂಜಲಿ

ರಾಷ್ಟ್ರೀಯ ಶಿಕ್ಷಣ ನೀತಿ ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆ. ಭಾರತದ ಮೇಲೆ ಬ್ರಿಟಿಷರು ತಮ್ಮ ಶಿಕ್ಷಣ ವ್ಯವಸ್ಥೆ ಹೇರಿದ್ದರು. ಇದರಿಂದಾಗಿ ಭಾರತೀಯ ಶಿಕ್ಷಣ ವ್ಯವಸ್ಥೆ ನಾಶವಾಯ್ತು. ತಂತ್ರಜ್ಞಾನ, ಆಧುನಿಕತೆ ಶಿಕ್ಷಣಕ್ಕೆ ವಿರುದ್ಧವಲ್ಲ. ಶಿಕ್ಷಣ ಎಂದರೆ ವ್ಯಕ್ತಿಯನ್ನು ವಿದ್ಯಾವಂತರನ್ನಾಗಿ ಮಾಡುವುದು. NEP ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆಯಾಗಿದೆ. ಇಂಗ್ಲಿಷ್ ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ‘ಇಂಗ್ಲಿಷ್’ ಆಗಲು ನಾವು ಪ್ರಯತ್ನಿಸಬಾರದು​. 

ಇದನ್ನೂ ಓದಿ: ದೇಶದಲ್ಲಿ ಈಗ ಲೋಕಸಭಾ ಚುನಾವಣೆ ನಡೆದರೇ, ಯಾರಿಗೆಷ್ಟು ಸೀಟು ಸಿಕ್ತಾವೆ? ಸರ್ವೇ ಹೇಳಿದ್ದೇನು?

ದೇಶ ವಿಭಜನೆ ತಡೆಯಲು RSS ತುಂಬಾ ಪ್ರಯತ್ನಿಸಿತ್ತು. ಆ ಸಮಯದಲ್ಲಿ ಸಂಘದ ಬಲ ತುಂಬಾ ಕಡಿಮೆ ಇತ್ತು. ವಿಭಜನೆಯ ವಿರುದ್ಧ ಪ್ರಯತ್ನಗಳು ನಡೆದವು. ಆದರೆ ಈಗ ಏನೂ ಮಾಡಲು ಸಾಧ್ಯವಿಲ್ಲ. ಅಖಂಡ ಭಾರತ ಕೇವಲ ರಾಜಕೀಯವಲ್ಲ, ವಾಸ್ತವ. ಜಾತಿ ಆಧಾರಿತ ಮೀಸಲಾತಿ ಸೂಕ್ಷ್ಮವಾಗಿ ಗಮನಿಸಬೇಕು. ಕೆಳಗಿರುವವರ ಕೈಯನ್ನು ಮೇಲಿನವರು ಹಿಡಿದೆತ್ತಬೇಕು. ಸಂವಿಧಾನದ ಪ್ರಕಾರ RSS ಮೀಸಲಾತಿ ಬೆಂಬಲಿಸುತ್ತದೆ. ನಮಗೆಲ್ಲರಿಗೂ ಒಂದೇ ಗುರುತು ಇದೆ, ಅದು ಹಿಂದೂ. ವ್ಯತ್ಯಾಸ ಇರುವಲ್ಲಿ ಏಕತೆಯ ಬಗ್ಗೆ ಮಾತಾಡಬೇಕು. ಜಾತಿ ತಾರತಮ್ಯ ಕೊನೆಗೊಳಿಸುವುದು ಸಂಘದ ಗುರಿ.

ದೇಶದ ಹಿತಕ್ಕಾಗಿ ಮೂವರು ಮಕ್ಕಳನ್ನು ಮಾಡಿಕೊಳ್ಳಿ. 3 ಮಕ್ಕಳಿದ್ರೆ ಪೋಷಕರು, ಮಕ್ಕಳ ಆರೋಗ್ಯವೂ ಉತ್ತಮ. ಪ್ರತಿ ನಾಗರಿಕ 3 ಮಕ್ಕಳು ಹೊಂದುವುದನ್ನು ಖಚಿತಪಡಿಸಿ ಅಂತಾ RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. 

ಇದನ್ನೂ ಓದಿ: ಯುದ್ಧಭೂಮಿ ಉಕ್ರೇನ್​​ನಲ್ಲಿ ಆರ್ಟ್ ಆಫ್ ಲಿವಿಂಗ್ ಕ್ರಾಂತಿಕಾರಿ ಹೆಜ್ಜೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mohan Bhagwat
Advertisment