ಯುದ್ಧಭೂಮಿ ಉಕ್ರೇನ್​​ನಲ್ಲಿ ಆರ್ಟ್ ಆಫ್ ಲಿವಿಂಗ್ ಕ್ರಾಂತಿಕಾರಿ ಹೆಜ್ಜೆ..!

ಕ್ರೂರ ಯುದ್ಧದ ನೆರಳಿನಲ್ಲಿ ಅವಶೇಷಗೊಳ್ಳುತ್ತಿರುವ ನಗರಗಳು ಮತ್ತು ಆಘಾತಕ್ಕೊಳಗಾದ ನಾಗರಿಕರ ಮಧ್ಯೆ, ಶಾಂತಿ ಮತ್ತು ಅನುಕಂಪದಿಂದೊಡಗೂಡಿದ ಕ್ರಾಂತಿಯೊಂದು ಸದ್ದಿಲ್ಲದೆಯೇ ಸುಧಾರಣೆಯನ್ನು ತರುತ್ತಿದೆ.

author-image
Ganesh Kerekuli
art of living in ukraine (2)
Advertisment

ಕ್ರೂರ ಯುದ್ಧದ ನೆರಳಿನಲ್ಲಿ ಅವಶೇಷಗೊಳ್ಳುತ್ತಿರುವ ನಗರಗಳು ಮತ್ತು ಆಘಾತಕ್ಕೊಳಗಾದ ನಾಗರಿಕರ ಮಧ್ಯೆ, ಶಾಂತಿ ಮತ್ತು ಅನುಕಂಪದಿಂದೊಡಗೂಡಿದ ಕ್ರಾಂತಿಯೊಂದು ಸದ್ದಿಲ್ಲದೆಯೇ ಸುಧಾರಣೆಯನ್ನು ತರುತ್ತಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರ  ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, ಉಕ್ರೇನ್‌ನ ದುಃಖದ ಹೃದಯಭಾಗಕ್ಕೆ ಹೆಜ್ಜೆ ಹಾಕಿದೆ. ಆದರೆ ಶಸ್ತ್ರಾಸ್ತ್ರಗಳೊಂದಿಗೆ ಅಲ್ಲ, ಭರವಸೆ, ಸುಧಾರಣೆ ಮತ್ತು ಅವರ ಉಸಿರಾಟದ ಪ್ರಕ್ರಿಯೆಗಳೊಂದಿಗೆ. 

ಉಕ್ರೇನಿಯನ್ ಸೇನಾ ಅಧಿಕಾರಿಗಳು ಮೊದಲ ಬಾರಿಗೆ ಆರ್ಟ್ ಆಫ್ ಲಿವಿಂಗ್ ಆಘಾತ-ಪರಿಹಾರ ಶಿಬಿರಕ್ಕೆ ಕಾಲಿಟ್ಟಾಗ ಆ ದೃಶ್ಯ ಭಯಾನಕವಾಗಿತ್ತು. ಅವರನ್ನು ನೋಡಿ ನನ್ನ ಹೃದಯ ಕುಗ್ಗಿಹೋಯಿತು, ಅವರ ಕೈಗಳು, ಕಾಲುಗಳು ಮತ್ತು ಬೆನ್ನಿನಲ್ಲಿ ಗಾಯಗಳಾಗಿದ್ದವು. ಅವರ ಕಣ್ಣುಗಳಲ್ಲಿನ ಭಯ ಮತ್ತು ಶೂನ್ಯತೆಯ ಭಾವ ನನ್ನ ಮೇಲೆ ಭಾರ ಹೇರಿತು ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕರೊಬ್ಬರು ಹಂಚಿಕೊಂಡಿದ್ದಾರೆ. ನಂತರ ಅವರು ಆರ್ಟ್ ಆಫ್ ಲಿವಿಂಗ್‌ನ ಉಸಿರಾಟದ ಪ್ರಕ್ರಿಯೆ ಮತ್ತು ಧ್ಯಾನವನ್ನು ಕಲಿತ ಮೇಲೆ, ಅಸಾಮಾನ್ಯ ರೀತಿಯಲ್ಲಿ ಅವರಲ್ಲಿ ಸುಧಾರಣೆ ಕಾಣತೊಡಗಿತು. ಇದೇ ಅಧಿಕಾರಿಗಳು ಶಿಬಿರದ ನಂತರ ತಾವು ಶಾಂತಿ, ವಿಶ್ರಾಂತಿ, ಸುರಕ್ಷಿತ ಮತ್ತು ಕೇಂದ್ರೀಕೃತವಾದ ಭಾವನೆಗಳನ್ನು ಅನುಭವಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ಅಲ್ಲಿನ ಜನರಲ್ಲಿ ಯುದ್ಧದ ಗೋಚರ ಪರಿಣಾಮಗಳಾದ- ಶೂನ್ಯತೆ, ಕೋಪ ಮತ್ತು ದುಃಖ ಕಡಿಮೆಯಾಗಲು ಪ್ರಾರಂಭಿಸಿದೆ.

ಇದನ್ನೂ ಓದಿ:50 ಲಕ್ಷ ರೂ. ಖರ್ಚು ಮಾಡಿ ಮದುವೆ, ಪತಿಗೆ 10 ಲಕ್ಷ, ನಮ್ಮ ಮಗಳಿಗೆ ಆದ ತರ ಬೇರೆ ಹೆಣ್ಮಕ್ಕಳಿಗೆ ಆಗಬಾರದು ಎಂದ ಶಿಲ್ಪಾ ತಾಯಿ

art of living in ukraine (5)

ಇದರ ಪರಿಣಾಮವು ಎಷ್ಟು ಗಹನವಾಗಿತ್ತೆಂದರೆ ಉಕ್ರೇನ್‌ನ ಮಿಲಿಟರಿ ನಾಯಕರು ಗುರುದೇವರ ಕೆಲಸವನ್ನು ಸಾರ್ವಜನಿಕವಾಗಿ ಗುರುತಿಸಿ, ಗೌರವಿಸಿದರು. ಅಲ್ಲಿನ ಬೆಟಾಲಿಯನ್ ಕಮಾಂಡರ್ ಸ್ವತಃ ಗುರುದೇವರ ಮುಂದೆ ನಿಂತು, ಗೌರವ ಪ್ರಶಸ್ತಿಯನ್ನು ಗುರುದೇವರಿಗೆ ನೀಡಿದರು. ಆ ಸಮಯದಲ್ಲಿ ಅವರು ತಮ್ಮ ಸೈನಿಕರ ಪರವಾಗಿ ಮಾತನಾಡುತ್ತಾ ಹೇಳಿದರು. 

ಗುರುದೇವ್! ನಮ್ಮ ಸೈನಿಕರು ನಿಮ್ಮಿಂದ ಪಡೆದ ಜ್ಞಾನ ಮತ್ತು ಉಸಿರಾಟದ ಪ್ರಕ್ರಿಯೆಗಳಿಗೆ ನಾವು ಅಭಾರಿಗಳಾಗಿದ್ದೇವೆ. ನಮ್ಮ ದೇಶದ ಮೇಲೆ ಬಾಂಬ್‌ಗಳು ಬಿದ್ದಾಗ, ನಾವೆಲ್ಲರೂ ಸತ್ಪ್ರಜೆಗಳಾಗಿ ದೇಶಕ್ಕಾಗಿ ಹೋರಾಡಲು ಸಜ್ಜಾದೆವು, ಆದರೆ ಯುದ್ಧದ ಇನ್ನೊಂದು ಮುಖದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಯುದ್ಧಾನಂತರದಲ್ಲಿ, ಅದರಿಂದ ಉಂಟಾದ ನಷ್ಟದಿಂದ ನಾವು ಅನುಭವಿಸುವ ಕೋಪ, ದ್ವೇಷ, ಹತಾಶೆ ಮತ್ತು ಅಪಾರ ಶೂನ್ಯತೆಯ ತೀವ್ರತೆ ನಮ್ಮನ್ನು ದಿನದ 24 ಗಂಟೆಗಳೂ ಕಾಡುತ್ತದೆ. ಆದರೆ ಆರ್ಟ್ ಆಫ್ ಲಿವಿಂಗ್‌ನ ಶಿಬಿರದ ನಂತರ, ನಮ್ಮ ಜೀವನವು ಬದಲಾಗಲು ಪ್ರಾರಂಭಿಸಿದೆ. ಗಂಭೀರವಾದ ದೈಹಿಕ ಗಾಯಗಳನ್ನು ಹೊಂದಿರುವವರು ಸಹ ಈಗ ತಮ್ಮ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರ ಕಣ್ಣುಗಲ್ಲಿ ಈಗ ಮತ್ತೆ ಜೀವನದ ಬಗ್ಗೆ ಉತ್ಸಾಹವು ತುಂಬಿದೆ.

ಇದನ್ನೂ ಓದಿ:ಬ್ರೇಕ್ ಫೇಲ್.. ಒಂದು ಮಗು ಸೇರಿ ಐವರ ಜೀವ ತೆಗೆದ KSRTC

art of living in ukraine (3)

ಈ ಮನ್ನಣೆ ಆರ್ಟ್ ಆಫ್ ಲಿವಿಂಗ್ ಕಲಿಸುವ ‘ನಾಯಕತ್ವ ತರಬೇತಿ ಕಾರ್ಯಕ್ರಮ’ಗಳಿಗೆ ಸಹ ವಿಸ್ತರಿಸಿದೆ. ಈ ಕಾರ್ಯಕ್ರಮಗಳು, ಉಕ್ರೇನಿಯನ್ ಮಿಲಿಟರಿ ನಾಯಕರಲ್ಲಿ ಅನುಸರಣೀಯ ನಾಯಕತ್ವ ಮತ್ತು ಅಪಾಯದ ಅನಿರೀಕ್ಷಿತ ಪರಿಸ್ಥಿತಿಗಳಲ್ಲಿ ಉತ್ತಮ ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಮತ್ತು ಜೀವಗಳ ರಕ್ಷಣೆಯಲ್ಲಿ ಈ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಉಕ್ರೇನಿಯನ್ ಮಿಲಿಟರಿ ಈ ಬೆಂಬಲವನ್ನು ಶ್ಲಾಘಿಸಿದೆ. 

ಇದನ್ನೂ ಓದಿ:ಪ್ರಿಯಕರನಿಗೆ ಮತ್ತೊಬ್ಬಳ ಜೊತೆ ಲವ್, ನೇಣಿಗೆ ಕೊರಳೊಡ್ಡಿದ ಅಶ್ವಿನಿ!

art of living in ukraine (1)

ಮುಂಚೂಣಿಯಿಂದ ಬಂದಿರುವ ವರದಿಗಳು ಹೃದಯವಿದ್ರಾವಕವಾಗಿವೆ. 2014ರಿಂದ ಉಕ್ರೇನ್ ಸೈನ್ಯದ ಪ್ರಥಮ ಪಡೆಯ MPZ (ನೈತಿಕ ಮತ್ತು ಮಾನಸಿಕ ಬೆಂಬಲ) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ನತಾಲಿಯಾ ಅವರು, ಒಬ್ಬ ಯೋಧನ ಅನುಭವವನ್ನು ಹಂಚಿಕೊಂಡಿದ್ದಾರೆ: ಸಾಮಾನ್ಯವಾಗಿ ಯುದ್ಧ ಭೂಮಿಯಲ್ಲಿ ಸೈನಿಕರು ನಿರಂತರ ಡ್ರೋನ್ ದಾಳಿಯ ಸಮಯದಲ್ಲಿ, ಕೇವಲ 80 ಸೆಂಟಿಮೀಟರ್ ಅಗಲದ ಕಂದಕಗಳಲ್ಲಿ ಅಡಗಿ ಕುಳಿತಿರಬೇಕಾಗುತ್ತದೆ. ಅಂತಹ ಒಂದು ಸಮಯದಲ್ಲಿ ಭಯ ಮತ್ತು ಆಘಾತದಿಂದ ಸಂಪೂರ್ಣ ಸ್ಥಬ್ಧಗೊಂಡಿದ್ದ ಒಬ್ಬ ಸೈನಿಕನು, ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಕಲಿತ ಸರಳ ಉಸಿರಾಟದ ಪ್ರಕ್ರಿಯೆಯಾದ ಉಜ್ಜಯಿ ಉಸಿರಾಟವನ್ನು ನೆನಪಿಸಿಕೊಂಡು, ಅಲ್ಲಿ ಅದನ್ನು ಪ್ರಯೋಗ ಮಾಡಿಕೊಂಡಿದ್ದರಿಂದ ಬದುಕುಳಿದನು. 'ನನಗೆ ಕಣ್ಣ ರೆಪ್ಪೆ ಸಹ ಅಲುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಈ ಉಸಿರಾಟ ಪ್ರಕ್ರಿಯೆ ನೆನಪಾಯಿತು. ಈಗ ನಾನು ಅದನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೇನೆ. ಈ ಉಸಿರಾಟವೇ ಅಂದು ನನ್ನ ಪ್ರಾಣವನ್ನು ಉಳಿಸಿದ್ದು, ಅಷ್ಟೇ ಅಲ್ಲದೆ, ನನ್ನ ಘಟಕದ ಇನ್ನೂ ನಾಲ್ವರನ್ನು ರಕ್ಷಿಸಲು ಇದು ಸಹಾಯ ಮಾಡಿತು' ಎಂದು ಹೇಳಿದ್ದಾರೆ. 

ಇದನ್ನೂ ಓದಿ:ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಕೃಷಿ ಕೂಲಿ ಕೆಲಸಗಾರ!

art of living in ukraine

2022 ರಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸೈನಿಕರು, ಸ್ಥಳಾಂತರಗೊಂಡ ನಾಗರಿಕರು ಮತ್ತು ಆಕ್ರಮಿತ ಪ್ರದೇಶಗಳ ಮಕ್ಕಳನ್ನು ಒಳಗೊಂಡಂತೆ 8,000ಕ್ಕೂ ಹೆಚ್ಚು ಜನರಿಗೆ ಈ ಪ್ರಕ್ರಿಯೆಗಳನ್ನು ತಮ್ಮ ಶಿಬಿರಗಳ ಮೂಲಕ ಕಲಿಸಿದೆ. ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಗತ್ಯವಿರುವಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವಶ್ಯಕತೆಯಿರುವಲ್ಲಿ ಬೆಂಬಲವನ್ನು ನೀಡುವ ಮೂಲಕ ಸೇವೆಯನ್ನು ಮಾಡುವುದು ಹೆಮ್ಮೆಯ ಸಂಗತಿ ಮತ್ತು ಹೆಚ್ಚು ಸ್ಫೂರ್ತಿದಾಯಕವಾದುದು ಎಂದು ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕರೊಬ್ಬರು ಹೇಳಿದ್ದಾರೆ. ಪ್ರತಿಯೊಬ್ಬರೂ ಏನನ್ನಾದರೂ ಕಳೆದುಕೊಳ್ಳುವ ಯುದ್ಧದ ವಾತಾವರಣದಲ್ಲಿ ಗುರುದೇವರು  ಅವ್ಯವಸ್ಥೆಯ ನಡುವೆ ಶಾಂತಿ, ಹತಾಶೆಯ ಸ್ಥಳದಲ್ಲಿ ಭರವಸೆ ಮತ್ತು ಪುನರ್ನಿರ್ಮಾಣಕ್ಕೆ ಬೇಕಾದ ಆಂತರಿಕ ಶಕ್ತಿಯನ್ನು ಸಮಾಜಕ್ಕೆ ಮರಳಿ ಕೊಡುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಗುರುದೇವರು ಹೇಳುವಂತೆ, ‘ಶಾಂತಿ ಎಂದರೆ ಸಂಘರ್ಷ ಇಲ್ಲದಿರುವಿಕೆ ಮಾತ್ರವಲ್ಲ, ಬದಲಾಗಿ ಅನುಕಂಪದ ಉಪಸ್ಥಿತಿ ಇರುವುದಾಗಿದೆ.’ ಉಕ್ರೇನ್‌ನ ಕರಾಳ ಘಳಿಗೆಯಲ್ಲಿ, ಆ ಅನುಕಂಪದ ಜ್ಯೋತಿ ಮುಂದಿನ ದಾರಿಯನ್ನು ಬೆಳಗಿಸುತ್ತಿದೆ.

ಇದನ್ನೂ ಓದಿ: ದೇಶದಲ್ಲಿ ಈಗ ಲೋಕಸಭಾ ಚುನಾವಣೆ ನಡೆದರೇ, ಯಾರಿಗೆಷ್ಟು ಸೀಟು ಸಿಕ್ತಾವೆ? ಸರ್ವೇ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sri Sri Ravi Shankar
Advertisment