Advertisment

11 ದಿನ ಒಂದೇ ಕಡೆ ಪಾರ್ಕ್​ ಆಗಿತ್ತು i20 ಕಾರು.. ಭಯಾನಕ ದೃಶ್ಯ VIDEO

ದೆಹಲಿಯಲ್ಲಾದ ಕಾರು ಸ್ಫೋ* ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಸೋಮವಾರ ಸಂಜೆ 6.50ರ ಸುಮಾರಿಗೆ ನಡೆದಿರುವ ಘಟನೆಯ ಸಿಸಿಟಿವಿ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಪ್ರಕರಣದಲ್ಲಿ 9 ಮಂದಿ ಸಾ*ನ್ನಪ್ಪಿದ್ದಾರೆ.

author-image
Ganesh Kerekuli
Delhi incident car
Advertisment

ದೆಹಲಿಯಲ್ಲಾದ ಕಾರು ಸ್ಫೋ* ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಸೋಮವಾರ ಸಂಜೆ 6.50ರ ಸುಮಾರಿಗೆ ನಡೆದಿರುವ ಘಟನೆಯ ಸಿಸಿಟಿವಿ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಈ ಪ್ರಕರಣದಲ್ಲಿ 9 ಮಂದಿ ಸಾ*ನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ಡಾ. ಉಮರ್ ನಬಿ  ಕಾರಿನಲ್ಲಿ ಓಡಾಡಿದ್ದ ದೃಶ್ಯಗಳು ಲಭ್ಯವಾಗಿದ್ವು. ಈ ಬೆನ್ನಲ್ಲೇ ಇವತ್ತು ಘಟನೆಯ ಸಿಸಿಟಿವಿ ಲಭ್ಯವಾಗಿದೆ.

Advertisment

ಇದನ್ನೂ ಓದಿ: ದೆಹಲಿ ಕೇಸ್​​ನಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ.. ಇವತ್ತು ಪ್ರಧಾನಿ ಸಭೆ

ಪ್ರಕರಣದ i20 ಕಾರಿನ ಟ್ರಾವಲ್​ ಹಿಸ್ಟ್ರಿ ಬಗೆದಷ್ಟು ಬಯಲಾಗ್ತಿದೆ. 11 ದಿನಗಳಿಂದ ಉಮರ್​ ಅಲ್-ಫಲಾಹ್​ ವಿವಿ ಬಳಿಯೇ ಕಾರ್​ ಪಾರ್ಕ್​ ಮಾಡಿದ್ದ. ಅಕ್ಟೋಬರ್​ 29 ರಿಂದ ನವೆಂಬರ್​ 10ರವರೆಗೆ ಒಂದೇ ಜಾಗದಲ್ಲಿ ಕಾರ್​ ಪಾರ್ಕ್​ ಮಾಡಿದ್ದ. 

ಫರಿದಾಬಾದ್​ನಲ್ಲಿ ಆರ್​ಡಿಎಕ್ಸ್​ ಪತ್ತೆಯಾಗ್ತಿದ್ದಂತೆ ಮೂವರು ಡಾಕ್ಟರ್​ಗಳನ್ನ ಪೊಲೀಸರು ಅರೆಸ್ಟ್​ ಮಾಡಿದ್ರು. ಈ ಮಾಹಿತಿ ತಿಳಿಯುತ್ತಿದ್ದಂತೆ ಭಯಗೊಂಡ ಉಮರ್​ ನವೆಂಬರ್​10 ರಂದು ಕಾರು ಹೊರ ತೆಗೆದಿದ್ದ. ಬಳಿಕ ಕಾರಲ್ಲಿ ಕನ್ಹಾಟ್ ಪ್ಲೇಸ್, ಮಯೂರ್ ವಿಹಾರ್​​ ಸೇರಿ ಇಡೀ ದೆಹಲಿ ಸುತ್ತಾಡಿದ್ದ. ಕೊನೆಗೆ ರೆಡ್ ಪೋರ್ಟ್ ಎದುರು ಬಂದು ಸ್ಫೋ*ವಾಗಿದೆ.

Advertisment

ಇದನ್ನೂ ಓದಿ:ರಕ್ಷಿತಾಳನ್ನ ವಿಷಕಾರಿ ಎಂದ ರಾಶಿಕಾ.. ನಾಮಿನೇಟ್ ವಿಚಾರದಲ್ಲಿ ದೊಡ್ಡ ಗಲಾಟೆ..! VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಕೆಂಪುಕೋಟೆ Red Fort Delhi incident
Advertisment
Advertisment
Advertisment