/newsfirstlive-kannada/media/post_attachments/wp-content/uploads/2023/06/petrol.jpg)
ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಬಹುದು ಎಂಬ ಸುದ್ದಿಯನ್ನ ಆಗಾಗ ನಾವು ಕೇಳುತ್ತೇವೆ. ಇದೀಗ ನಮ್ಮ ಊಹಿಸಲೂ ಅಗದ ವರದಿ ಬಂದಿದೆ. ಕಚ್ಚಾ ತೈಲದ ಬೆಲೆ ನೀರಿನ ಬಾಟಲಿಗಿಂತ ಅಗ್ಗವಾಗಲಿದೆಯಂತೆ..
ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾಗಲಿದೆ ಅಂತೆ. ಇದು ಜಾಗತಿಕ ದಲ್ಲಾಳಿ ಸಂಸ್ಥೆ ಜೆಪಿ ಮಾರ್ಗನ್ ವರದಿ ಮಾಡಿದೆ. ಮಾರ್ಚ್ 2027ರ ವೇಳೆಗೆ ಕಚ್ಚಾ ತೈಲದ ಬೆಲೆ ಬ್ಯಾರೆಲ್​ಗೆ 30 ಡಾಲರ್ ಆಗಲಿದೆಯಂತೆ..
ಇದನ್ನೂ ಓದಿ: ಆರ್​ವಿ ದೇವರಾಜ್ ಇನ್ನು ನೆನಪು ಮಾತ್ರ.. ಅವರ ರಾಜಕೀಯ ಜೀವನ ಹೇಗಿತ್ತು..?
/filters:format(webp)/newsfirstlive-kannada/media/post_attachments/wp-content/uploads/2023/09/Pakistan-Petrol.jpg)
ಜೆಪಿ ಮಾರ್ಗನ್ ವರದಿ ಕಚ್ಚಾ ತೈಲ
ಈ ಜೆಪಿ ಮಾರ್ಗನ್ ವರದಿ ಕಚ್ಚಾ ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿತ ದೇಶಗಳಿಗೆ ಹೆಚ್ಚು ಲಾಭ. ಭಾರತವು ಶೇ.86ರಷ್ಟು ತೈಲ ಇತರ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತೆ.
1 ಲೀಟರ್ ಬೆಲೆ 18 ರೂ.ಗಿಂತ ಕಡಿಮೆ
ಒಂದು ಬ್ಯಾರೆಲ್ ಕಚ್ಚಾ ತೈಲ 159 ಲೀಟರ್​​ನಷ್ಟು ಇರುತ್ತದೆ. ಪ್ರತಿ ಬ್ಯಾರೆಲ್​ಗೆ 95 ರೂ. ವಿನಿಮಯ ದರದಲ್ಲಿ ಭಾರತೀಯ ರೂಪಾಯಿಗಳಿಂದ ಪರಿವರ್ತಿಸಿದರೆ ಒಂದು ಬ್ಯಾರೆಲ್​ಗೆ 2,850 ರೂ. ಯಷ್ಟು ವೆಚ್ಚವಾಗುತ್ತದೆ. ಹೀಗಾಗಿ ಒಂದು ಲೀಟರ್ ಕಚ್ಚಾ ತೈಲದ ಬೆಲೆ ಕೇವಲ 17.92 ಪೈಸೆಯಷ್ಟಾಗುತ್ತದೆ. ಅಂದರೆ ಇದು ಲೀಟರ್​ಗೆ 18-20 ರೂ.ಗೆ ಮಾರಾಟವಾಗುವ ನೀರಿನ ಬಾಟಲಿಗಿಂತ ಕಡಿಮೆ.
ಇದನ್ನೂ ಓದಿ: ಡಿಸಿಎಂ ಮನೆಗೆ CM ಆಗಮನ.. ಬಿಸಿಬಿಸಿ ನಾಟಿ ಕೋಳಿ ಖಾದ್ಯ, ಇಡ್ಲಿ, ವಡೆ, ಉಪ್ಪಿಟ್ಟು ರೆಡಿ..!
/filters:format(webp)/newsfirstlive-kannada/media/post_attachments/wp-content/uploads/2023/07/Petrol_Diesel.jpg)
ಭಾರತದಂಥ ಕಚ್ಚಾ ತೈಲ ಆಮದಿಯ ಮೇಲೆ ಹೆಚ್ಚು ಅವಲಂಬಿತ ದೇಶಗಳಿಂದ ಜೆಪಿ ಮಾರ್ಗನ್ ವರದಿ ಮಹತ್ವದ್ದಾಗಿದೆ. ಭಾರತವು ಶೇ.86ರಷ್ಟು ಕಚ್ಚಾ ತೈಲ ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತೆ. ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶೇ.50ಕ್ಕಿಂತ ಕಡಿಮೆಯಾಗಬಹುದು ಎಂದು ಜೆಪಿ ಮಾರ್ಗನ್ ವರದಿ ಅಂದಾಜು. ಸದ್ಯ ಈ ಬೆಲೆ ಪ್ರತಿ ಬ್ಯಾರೆಲ್​​ಗೆ ಶೇ.62ರಷ್ಟಿದೆ.
(ಬ್ರೆಂಟ್ ತೈಲವೆಂದರೆ ಅತ್ಯಂತ ವ್ಯಾಪಕವಾಗಿ ಬಳಲುವ ಬೆಂಚ್​ಮಾರ್ಕ್​ ಕಚ್ಚಾ ತೈಲಗಳಲ್ಲಿ ಒಂದು.ಇದು ಉತ್ತರ ಸಮುದ್ರದ ಬ್ರಿಟನ್​ & ನಾರ್ವೆ ನಡುವಿನ ತೈಲ ಪ್ರದೇಶಗಳಲ್ಲಿ ಉತ್ಪಾದನೆಯಾಗುತ್ತದೆ. ಇದನ್ನು ಬ್ರೆಂಟ್ ಅಥವಾ ಲಂಡನ್ ಬ್ರೆಂಟ್ ತೈಲ ಎನ್ನುತ್ತಾರೆ. ವಿಶ್ವದ ಶೇ.60-70ರಷ್ಟು ಕಚ್ಚಾ ತೈಲದ ಬೆಲೆ ನಿಗದಿಗೆ ಬ್ರೆಂಟ್ ಬೆಲೆಯೇ ಆಧಾರ)
ಮುಂದಿನ 2-3 ವರ್ಷಗಳಲ್ಲಿ ಜಾಗತಿಕ ತೈಲ ಬಳಕೆ ಹೆಚ್ಚುವ ಅಂದಾಜಿದೆ. ವಿಶೇಷವಾಗಿ ಓಪೆಕ್ ಅಲ್ಲದ ದೇಶಗಳಿಂದ (ಅಂದರೆ ರಷ್ಯಾ, ಮೆಕ್ಸಿಕೋ, ಕಝಕಿಸ್ತಾನ್, ಓಮನ್, ಮಲೇಷ್ಯಾ, ಸುಡಾನ್, ದಕ್ಷಿಣ ಸುಡಾನ್, ಅಜರ್​ಬೈಜಾನ್, ಬಹ್ರೇನ್, ಬ್ರೂನಿ, ಸಿಂಗಾಪುರ) ತೈಲ ಪೂರೈಕೆ ಬೇಡಿಕೆ ಮೀರುವ ನಿರೀಕ್ಷೆ ಇದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
2025ರಲ್ಲಿ ಜಾಗತಿಕ ತೈಲ ಬೇಡಿಕೆ ದಿನಕ್ಕೆ 0.9 ಮಿಲಿಯನ್ ಬ್ಯಾರೆಲ್​ಗಳಷ್ಟು ಹೆಚ್ಚುವ ನಿರೀಕ್ಷೆ ಇದೆ. ಇದು 227ರಲ್ಲಿ 1.2 ಮಿಲಿಯನ್ ಬ್ಯಾರೆಲ್ ತಲುಪಬಹುದು ಎಂದು ಅಂದಾಜಿದೆ. ಅತಿಯಾದ ಪೂರೈಕೆ ಬೆಲೆ ಕುಸಿತ ಕಾರಣವಾಗಲಿದೆ ಅಂತಾ ಜೆಪಿ ಮಾರ್ಗನ್ ವರದಿ ಅಂದಾಜಿಸಿದೆ.
ವಿಶೇಷ ವರದಿ: ವಿಶ್ವನಾಥ್ ಜಿ,
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us