/newsfirstlive-kannada/media/media_files/2025/12/02/rv-devaraj-2025-12-02-08-50-17.jpg)
ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ. ದೇವರಾಜ್ ನಿಧರಾಗಿದ್ದಾರೆ. ಚಿಕ್ಕಪೇಟೆ.. ಚಾಮರಾಜಪೇಟೆ ಜನರ ಅಚ್ಚುಮೆಚ್ಚಿನ ನಾಯಕರಾಗಿದ್ದ ರೋಣೂರು ವೆಂಕಟೇಶಪ್ಪ ದೇವರಾಜ್ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ರೋಣೂರು ವೆಂಕಟೇಶಪ್ಪ ದೇವರಾಜ್.. ಚಿಕ್ಕಪೇಟೆಯ ಮಾಜಿ ಶಾಸಕ.. ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳನ್ನ ಅಲಂಕರಿಸಿದಂತ ನಾಯಕ. ಆದ್ರೀಗ ವಿಧಿಯ ಕರೆಗ ಒಗೊಟ್ಟಿದ್ದಾರೆ. ಕಾಂಗ್ರೆಸ್‌ನ ನಾಯಕ ದೇವರ ಸನ್ನಿಧಿಗೆ ಭೇಟಿ ನೀಡಿದ್ದ ವೇಳೆಯಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಚಿಕ್ಕಪೇಟೆ ಮಾಜಿ ಶಾಸಕ ಆರ್​.ವಿ.ದೇವರಾಜ್ ನಿಧನ
ಮನುಷ್ಯನಿಗೆ ಸಾವು ಹೇಗೆ ಬರುತ್ತೆ? ಯಾವಾಗ ಬರುತ್ತೆ ಅಂತ ಊಹಿಸೋಕು ಅಸಾಧ್ಯ. ತಮ್ಮ ಸಾವು ಹೀಗೆ ಆಗುತ್ತೆ ಅಂತ ಮಾಜಿ ಶಾಸಕ ಆರ್.ವಿ. ದೇವರಾಜ್ ಊಹಿಸಿರಲಿಲ್ವೇನೋ? ಆದ್ರೀಗ ಚಾಮುಂಡಿ ತಾಯಿಯ ಕಣ್ತುಂಬಿಕೊಳ್ಳಲು ಹೋದ ಕಾಂಗ್ರೆಸ್ ನಾಯಕ ಅಲ್ಲಿಯೇ ಉಸಿರು ಚೆಲ್ಲಿದ್ದಾರೆ. 37 ವರ್ಷದ ರೋಣೂರು ವೆಂಕಟೇಶಪ್ಪ ದೇವರಾಜ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಇದನ್ನೂ ಓದಿ: ಲಿಂಗ ಭೈರವಿ ಸನ್ನಿಧಿಯಲ್ಲಿ ಪವಿತ್ರ ಭೂತ ಶುದ್ಧಿ ವಿವಾಹವನ್ನು ನೆರವೇರಿಸಿದ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೊರು
/filters:format(webp)/newsfirstlive-kannada/media/media_files/2025/12/02/rv-devaraj-1-2025-12-02-08-54-10.jpg)
ಆರ್.ವಿ. ದೇವರಾಜ್ ನಿಧನ
- ಮಾಜಿ ಶಾಸಕ ಆರ್.ವಿ. ದೇವರಾಜ್ ನಿನ್ನೆ ಮೈಸೂರಿಗೆ ಭೇಟಿ
- ಡಿಸೆಂಬರ್ 3 ಅಂದ್ರೆ ನಾಳೆ ಆರ್.ವಿ. ದೇವರಾಜ್ ಹುಟ್ಟುಹಬ್ಬ
- ಚಾಮುಂಡಿ ಬೆಟ್ಟಕ್ಕೆ ದೇವಿ ದರ್ಶನಕ್ಕೆಂದು ತೆರಳಿದ್ದ ದೇವರಾಜ್
- ಬೆಟ್ಟಕ್ಕೆ ತೆರಳಿ ಚಾಮುಂಡಿಯ ದರ್ಶನದ ಬಳಿಕ ಹೃದಯಾಘಾತ
- ಹಾರ್ಟ್ ಅಟ್ಯಾಕ್ ಆಗ್ತಿದ್ದಂತೆ ಅಪೋಲೋ ಆಸ್ಪತ್ರೆಗೆ ದಾಖಲು
- ಬಳಿಕ ಮೈಸೂರಿನ ಜಯದೇವ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು
- ಆದ್ರೆ, ಚಿಕಿತ್ಸೆ ಫಲಿಸದೇ ಆರ್.ವಿ. ದೇವರಾಜ್ ನಿಧನರಾಗಿದ್ದಾರೆ
ರೋಣೂರು ವೆಂಕಟೇಶಪ್ಪ ದೇವರಾಜ್ ರಾಜಕೀಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ರು. ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಗಳನ್ನೂ ಅಲಂಕರಿಸಿದ್ರು. ಚಾಮರಾಜಪೇಟೆ, ಚಿಕ್ಕಪೇಟೆ ಕ್ಷೇತ್ರದ ಜನಪ್ರಿಯ ರಾಜಕಾರಣಿಯೂ ಆಗಿದ್ರು. ಆದ್ರೀಗ ನೆಚ್ಚಿನ ನಾಯಕನನ್ನ ಕಳೆದುಕೊಂಡು ಅಭಿಮಾನಿಗಳು, ಕಾರ್ಯಕರ್ತರು, ಕುಟುಂಬವರ್ಗ ಕಂಗಾಲಾಗಿದೆ.
ಆರ್​.ವಿ.ದೇವರಾಜ್ ಹಿನ್ನೆಲೆ
ಆರ್.ವಿ. ದೇವರಾಜ್ ಅವರು ಡಿಸೆಂಬರ್ 3, 1957ರಂದು ಜನಿಸಿದ್ದರು. 1970ರ ದಶಕದಲ್ಲಿ ಯುವ ಕಾಂಗ್ರೆಸ್‌ನೊಂದಿಗೆ ರಾಜಕೀಯ ಆರಂಭಿಸಿದ್ರು. ಚಾಮರಾಜಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಆಗಿ ಮೊದಲು ಸೇವೆ ಸಲ್ಲಿಸಿದ್ರು. ಬಳಿಕ 1989ರಲ್ಲಿ ಚಾಮರಾಜಪೇಟೆಯಿಂದ ವಿಧಾನಸಭೆಗೆ ಪ್ರವೇಶಿಸಿದ್ದರು. ಸತತ ಎರಡು ಬಾರಿ ಚಾಮರಾಜಪೇಟೆಯಿಂದ ಗೆಲುವು ಸಾಧಿಸಿದ್ದರು. ಅಲ್ಲದೇ ಕೆಎಸ್ಆರ್​ಟಿಸಿಯ ಅಧ್ಯಕ್ಷರಾಗಿ ಎರಡು ಬಾರಿ ಅಂದ್ರೆ,, 2000 ರಿಂದ 2007 ರವರೆಗೆ KSRTC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಲಿಂಗ ಭೈರವಿ ಸನ್ನಿಧಿಯಲ್ಲಿ ಪವಿತ್ರ ಭೂತ ಶುದ್ಧಿ ವಿವಾಹವನ್ನು ನೆರವೇರಿಸಿದ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೊರು
2006ರಲ್ಲಿ ಚಾಮರಾಜಪೇಟೆ ಕ್ಷೇತ್ರ ವಿಂಗಡಣೆಯಾದಬಳಿಕ ಚಿಕ್ಕಪೇಟೆಯಲ್ಲಿ ಸ್ಪರ್ಧೆ ಮಾಡಿದ್ರು. ಚಿಕ್ಕಪೇಟೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. 2007ರಲ್ಲಿ ಬಿಲಾಸ್​ಪುರದ ಗುರು ಘಾಸಿದಾಸ್ ವಿವಿಯಲ್ಲಿ ಬಿಎ ಪದವಿಯನ್ನೂ ಪಡೆಿದಿದ್ರು. 1985-88ರಲ್ಲಿ ಬೆಂಗಳೂರು ನಗರ ಸೇವಾದಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೇ 2012ರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನಾಮಿನೇಟ್ ಆಗಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರ್.ವಿ. ದೇವರಾಜ್ ಸೋತಿದ್ರು.
ಸಾವಿಗೂ ಮುನ್ನ ಚಾಮುಂಡಿ ತಾಯಿಯೇ ಅವರನ್ನ ಸನ್ನಿಧಿಗೆ ಕರೆಸಿಕೊಂಡು ದರ್ಶನ ನೀಡಿದ್ದಾರೆ. ಆದ್ರೆ, ಹುಟ್ಟುಹಬ್ಬಕ್ಕೂ ಎರಡು ದಿನ ಮನ್ನವೇ ಆರ್.ವಿ. ದೇವರಾಜ್ ಇಹಲೋಕ ತ್ಯಜಿಸಿದ್ದಾರೆ. ನೆಚ್ಚಿನ ನಾಯಕನನ್ನ ಕಳೆದುಕೊಂಡು ಚಿಕ್ಕಪೇಟೆ ಕ್ಷೇತ್ರ ಸೇರಿದಂತೆ ಅವರ ಅಭಿಮಾನಿಗಳು, ಕುಟುಂಬವರ್ಗ, ಕಾಂಗ್ರೆಸ್‌ನ ನಾಯಕರು ಕಂಬನಿಯ ವಿದಾಯ ಹೇಳುತ್ತಿದ್ದಾರೆ.
ಇದನ್ನೂ ಓದಿ: ಇವತ್ತು ಡಿಕೆಶಿ ಮನೆಯಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್! ಸಿದ್ದುಗಾಗಿ ‘ನಾಟಿಕೋಳಿ’ ಖಾದ್ಯ ತಯಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us