/newsfirstlive-kannada/media/media_files/2025/11/29/dk-shivakumar-siddaramaiah-2025-11-29-10-07-35.jpg)
ಮೂರೇ ದಿನದ ಹಿಂದೆ ಸಿಡಿಗುಂಡಿನಂತೆ ಮಾತಿನ ಸಿಡಲು ಸಿಡಿದ್ವು. ತ್ಯಾಗ, ನಂಬಿಕೆ, ಕೊಟ್ಟ ಮಾತಿನ ಪ್ರವಚನಗಳು ಜಾಲತಾಣದಲ್ಲಿ ಜಿದ್ದಿನ ಕದನಕ್ಕೆ ಮುನ್ನುಡಿ ಬರೆದಿದ್ವು. ಹೈಕಮಾಂಡ್​​ ಕೊಟ್ಟ ಸಂದೇಶದ ಬೆನ್ನಲ್ಲೆ ನಡೆದ ಬ್ರೇಕ್​ಫಾಸ್ಟ್​ ಮೀಟಿಂಗ್​​, ಇಡ್ಲಿ-ವಡಾ ಮೋಡಿ ಮಾಡಿದ್ದು, ಒಗ್ಗಟ್ಟಿನ ಇಟ್ಟಿಗೆ ಜೋಡಿಸಿದೆ. 2ನೇ ಬ್ರೇಕ್​​ಫಾಸ್ಟ್​​​ ಮೀಟಿಂಗ್​​ಗೆ ಸಿಎಂರನ್ನ ಡಿಕೆಶಿ ತಮ್ಮ ಮನೆಗೆ ಆಹ್ವಾನಿಸಿ ಬ್ರದರ್ಸ್​​ ಅಸ್ತ್ರ ಬಿಟ್ಟಿದ್ದಾರೆ.
ನಾಯಕತ್ವ ಬದಲಾವಣೆಗಾಗಿ ಹಿಡಿದ ಪಟ್ಟು ಸಡಿಲಾಗಿದೆ. ಕೊಟ್ಟ ಮಾತಿನ ವಿಚಾರ ಕಾಂಗ್ರೆಸ್​ನಲ್ಲಿ ಕೋಲಾಹಲ ಸೃಷ್ಟಿಸಿ ಶಾಂತವಾಗಿದೆ. ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತುಸುಮಟ್ಟಿನ ಶಮನ ಆಗ್ತಿದ್ದಂತೆ ಇದೀಗ ಮತ್ತೆ ಬ್ರೇಕ್​ಫಾಸ್ಟ್​ ಮೀಟಿಂಗ್​​ಗೆ ಡೇಟ್ ಫಿಕ್ಸ್​ ಆಗಿದೆ. ಈ ಬಾರಿ ಡಿಸಿಎಂ ಡಿ.ಕೆ.ಶಿವಕುಮಾರ್​ ಮನೆಯಲ್ಲಿ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ:ರಾಜ್ಯದಲ್ಲಿ ಬದಲಾವಣೆ ಆಗುತ್ತದೆ ಎಂದ ಕಾಂಗ್ರೆಸ್ ಶಾಸಕ ಅಜಯಸಿಂಗ್! : ಇದಕ್ಕೆ ಸಿಎಂ ಸಿದ್ದು ಹೇಳಿದ್ದೇನು?
/filters:format(webp)/newsfirstlive-kannada/media/media_files/2025/10/27/cm-siddu-and-dks-watching-chair-2025-10-27-17-29-23.jpg)
ಸಿಎಂಗೆ ‘ನಾಟಿಕೋಳಿ’ ಬ್ರೇಕ್‌ಫಾಸ್ಟ್
ಇವತ್ತು ಬೆಳಗ್ಗೆ ಡಿಕೆ ಶಿವಕುಮಾರ್ ನಿವಾಸದಲ್ಲಿ ಉಪಹಾರ ಭೋಜನಕ್ಕೆ ಆಹ್ವಾನ ಬಂದಿದೆ. ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿ ಆಹ್ವಾನ ನೀಡಿದ್ದಾರೆ. ಸದಾಶಿವನಗರದ ಡಿಸಿಎಂ ಡಿಕೆಶಿ ನಿವಾಸದಲ್ಲಿ ಬೆಳಗ್ಗೆ ಬ್ರೇಕ್‌ಫಾಸ್ಟ್ ಆಯೋಜನೆ ಆಗಿದೆ. ಸಿಎಂ ಸಿದ್ದರಾಮಯ್ಯರನ್ನು ಡಿಸಿಎಂ ಡಿ.ಕೆ.ಶಿವಕುಮಾರ್​ ಮನೆಗೆ ಕರೆದಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ 6 ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಕುಸಿತ ! : ಶೇ.6 ರಿಂದ ಶೇ. 3.2 ಕ್ಕೆ ಕುಸಿತ ಎಂದ ಕೇಂದ್ರ ಸರ್ಕಾರ
ಹೀಗಾಗಿ ಇವತ್ತು ಬೆಳಗ್ಗೆ 9.30ರ ಹೊತ್ತಿಗೆ ಡಿಕೆಶಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.. ಸಿಎಂ ಸಿದ್ದರಾಮಯ್ಯಗಾಗಿ ವೆಜ್, ನಾನ್‌ವೆಜ್, ಸಿಹಿ ತಿಂಡಿಗಳ ಬ್ರೇಕ್‌ಫಾಸ್ಟ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಸಿದ್ದರಾಮಯ್ಯರಿಗೆ ಪ್ರಿಯವಾದ ನಾಟಿ ಕೋಳಿ ಖಾದ್ಯವೂ ತಯಾರಾಗಲಿದೆ. ಕನಕಪುರದ ನಾಟಿಕೋಳಿ ಫ್ರೈ ಮತ್ತು ನಾಟಿ ಕೋಳಿ ಸಾರಿನ ಮೆನು ರೆಡಿಯಾಗಿದೆ. ಬಳಿಕ ಬ್ರೇಕ್ ಫಾಸ್ಟ್ ಜೊತೆ ಸಿಎಂ-ಡಿಸಿಎಂ ಮಹತ್ವದ ಸಭೆ ನಡೆಸಲಿದ್ದಾರೆ ಅಂತ ಗೊತ್ತಾಗಿದೆ. ಜೊತೆಗೆ ಕಳೆದ ಬಾರಿ ಸಿಎಂ ನಿವಾಸದ ಬ್ರೇಕ್​ಫಾಸ್ಟ್​ ಮೀಟಿಂಗ್​ನಲ್ಲಿ ಶಾಸಕ ಪೊನ್ನಣ್ಣ ಇದ್ರು. ಈಗ ಡಿಕೆಶಿ ನಿವಾಸದಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನೋದು ಸಸ್ಪೆನ್ಸ್​..
ನಾವು ಬ್ರದರ್ಸ್ ತರಹ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ!
ಡಿಸಿಎಂ ಡಿಕೆಶಿ ಒಬ್ಬ ಕನಸುಗಾರ.. ಪಟ್ಟಕಾಗಿ ಪಡುತ್ತಿರುವ ಕಷ್ಟಗಳ ಸಾಗರದಷ್ಟು. ದಿಢೀರ್​ ವೇದಾಂತಿ ಆಗಿದ್ದಾರೆ. ಬ್ರೇಕ್​ಫಾಸ್ಟ್​ ವಿಚಾರಕ್ಕೆ ಮಾತ್ನಾಡ್ತಿದ್ದ ಡಿಕೆಶಿ, ನಾವು ಬ್ರದರ್ಸ್ ತರ ಒಟ್ಟಿಗೆ ಕೆಲಸ ಮಾಡ್ತಿದ್ದೇವೆ.. ಯಾವುದೇ ಗುಂಪಿಲ್ಲ ಅಂದ್ರು.. ಆ ಬಳಿಕ ಹುಟ್ಟು-ಸಾವಿನ ಮಧ್ಯೆ ಗುಂಪು ಯಾಕೆ ಎಂದಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ 6 ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಕುಸಿತ ! : ಶೇ.6 ರಿಂದ ಶೇ. 3.2 ಕ್ಕೆ ಕುಸಿತ ಎಂದ ಕೇಂದ್ರ ಸರ್ಕಾರ
/filters:format(webp)/newsfirstlive-kannada/media/media_files/2025/11/29/dk-shivakumar-dcm-2025-11-29-19-42-23.jpg)
ಇತ್ತ ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಬಿಜೆಪಿ ನಾಯಕರಾದ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಇತ್ತ ಸಿಎಂ-ಡಿಸಿಎಂ ಸಭೆ ಮಾಡೋದು ಸಂತೋಷದ ವಿಚಾರ ಅಂತ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಒಟ್ಟಾರೆ, ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ-ಡಿಸಿಎಂ ನಡುವಿನ ಶೀತಲ ಸಮರಕ್ಕೆ ಬ್ರೇಕ್​ ಬಿದ್ದಿದೆ. ಇವತ್ತು ಬೆಳಗ್ಗೆ 2ನೇ ಸುತ್ತಿನ ಬ್ರೇಕ್​ಫಾಸ್ಟ್​​ ಮೀಟಿಂಗ್​ ಆಯೋಜನೆ ಆಗಿದ್ದು, ಮತ್ತೆ ಒಗ್ಗಟ್ಟಿನ ಪ್ರದರ್ಶನಕ್ಕೆ ಸಿದ್ದು-ಡಿಕೆ ಸಜ್ಜಾಗಿದ್ದಾರೆ.. ಆದ್ರೆ, ಹೈಕಮಾಂಡ್​​ ಸೂತ್ರವೇನು ಅನ್ನೋದು ನಿಗೂಢ..
ಇದನ್ನೂ ಓದಿ:ಲಿಂಗ ಭೈರವಿ ಸನ್ನಿಧಿಯಲ್ಲಿ ಪವಿತ್ರ ಭೂತ ಶುದ್ಧಿ ವಿವಾಹವನ್ನು ನೆರವೇರಿಸಿದ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೊರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us