Advertisment

ಡಿಸಿಎಂ ಮನೆಗೆ CM ಆಗಮನ.. ಬಿಸಿಬಿಸಿ ನಾಟಿ ಕೋಳಿ ಖಾದ್ಯ, ಇಡ್ಲಿ, ವಡೆ, ಉಪ್ಪಿಟ್ಟು ರೆಡಿ..!

ಇಂದು ಮತ್ತೆ ಸಿಎಂ, ಡಿಸಿಎಂ ಇಬ್ಬರು ಮತ್ತೊಂದು ಸುತ್ತಿನ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದು, ಇದೀಗ ಡಿಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡ್ತಿದ್ದಾರೆ.

author-image
Ganesh Kerekuli
Siddaramaiah and DK Shivakumar (1)
Advertisment

ಬೆಂಗಳೂರು: ಇಂದು ಮತ್ತೆ ಸಿಎಂ, ಡಿಸಿಎಂ ಇಬ್ಬರು ಮತ್ತೊಂದು ಸುತ್ತಿನ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದು, ಇದೀಗ ಡಿಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡ್ತಿದ್ದಾರೆ.

Advertisment

ಇಂದು ಡಿಕೆಶಿ ಅವರು ಸಿದ್ದರಾಮಯ್ಯ ಅವರನ್ನು ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಸಿಎಂ ಅವರಿಗೆ ಇಷ್ಟವಾದ ನಾಟಿ ಕೋಳಿ ಖಾದ್ಯ, ಇಡ್ಲಿ, ವಡೆ, ಉಪ್ಪಿಟ್ಟು ಮಾಡಲಾಗಿದ್ದು, ಬ್ರೇಕ್​ ಫಾಸ್ಟ್​ ಮೀಟಿಂಗ್ ಮಾಡುತ್ತಾ ಉಭಯ ನಾಯಕರು ಮಾತುಕತೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ:ಇವತ್ತು ಡಿಕೆಶಿ ಮನೆಯಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌! ಸಿದ್ದುಗಾಗಿ ‘ನಾಟಿಕೋಳಿ’ ಖಾದ್ಯ ತಯಾರಿ

ಸಮಾನತೆ ಸೂತ್ರ

ಕಾಂಗ್ರೆಸ್​​​ ಹೈಕಮಾಂಡ್​ ಬ್ರೇಕ್​ ಫಾಸ್ಟ್​ ಮೀಟಿಂಗ್​ ಮೂಲಕ ಸಿಎಂ, ಡಿಸಿಎಂ ನಡುವೆ​​ ಸಮಾನತೆ ಸೂತ್ರವನ್ನು ಬಳಸುತ್ತಿದೆ. ಸಿಎಂ ನಿವಾಸದಲ್ಲಿ ಬ್ರೇಕ್ ​ಫಾಸ್ಟ್​ ಮೀಟಿಂಗ್​ ಬೆನ್ನಲ್ಲೇ ಇಂದು ಡಿಸಿಎ ಮನೆಯಲ್ಲಿ ಬ್ರೇಕ್​ಫಾಸ್ಟ್​ ಮೀಟಿಂಗ್​ ಆಗ್ತಿದೆ. ಈ ಮೂಲಕ ಸಿಎಂ ಹೆಚ್ಚಲ್ಲ, ಡಿಸಿಎಂ ಕಡಿಮೆಯಲ್ಲ ಅಂತ ವರಿಷ್ಠರು ಸಂದೇಶ ರವಾನಿಸುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ವರಿಷ್ಠರ ಸಮ್ಮತಿ ನೀಡಿದ್ದು,  ಕೆಪಿಸಿಸಿ ಹುದ್ದೆ ಚರ್ಚೆಗೂ ಬ್ರೇಕ್ ಫಾಸ್ಟ್ ಮೂಲಕ ವರಿಷ್ಠರ ಫುಲ್ ಇಡಲು ನಿರ್ಧರಿಸಿದ್ದಾರೆ.

Advertisment

ಇದನ್ನೂ ಓದಿ:ಆರ್​ವಿ ದೇವರಾಜ್ ಇನ್ನು ನೆನಪು ಮಾತ್ರ.. ಅವರ ರಾಜಕೀಯ ಜೀವನ ಹೇಗಿತ್ತು..?

ಹಾಗಿದ್ದರೆ ಮುಂದೇನು..? 

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನಡುವಿನ ಮತ್ತೊಂದು ಸುತ್ತಿನ ಬ್ರೇಕ್ ಫಾಸ್ಟ್ ಮೀಟಿಂಗ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇಂದು ಡಿಕೆಶಿ ಮನೆಯಲ್ಲಿ ಬ್ರೇಕ್​ಫಾಸ್ಟ್​ ಮೀಟಿಂಗ್​ ಮಾಡ್ತಿದ್ದು, ಹೈಕಮಾಂಡ್ ಸೂಚನೆಯಂತೆ ಪಕ್ಷದಲ್ಲಿನ ಗೊಂದಲಕ್ಕೆ ತೆರೆ ಎಳೆದ ಬಳಿಕ ಮುಂದೇನೆಂಬ ಚರ್ಚೆ ನಡೆಯುತ್ತಿದೆ. ಇತ್ತ ಹೈಕಮಾಂಡ್​ ಇಬ್ಬರ ಮೂಲಕ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮಾಡಿ ಯಶಸ್ವಿಯಾಗಿದೆ. ಇನ್ನು ಶೀಘ್ರದಲ್ಲೇ ಹೈಕಮಾಂಡ್​​ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳಲಿದೆಯಾ ಅನ್ನೋ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:‘ಹೇ.. ಇಂಥವ್ನೆಲ್ಲಾ MP ಬಳಿ ಕೇಳ್ತೀರಲ್ಲಾ, ಏನ್ರೀ ನಿಮ್ದು’ ಶೆಟ್ಟರ್​​ಗೆ ವಿಚಿತ್ರ ಬೇಡಿಕೆ ಇಟ್ಟ ಕಿಲಾಡಿ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar
Advertisment
Advertisment
Advertisment