/newsfirstlive-kannada/media/media_files/2025/12/02/jagadish-shetter-2025-12-02-09-26-51.jpg)
ಯುವಜನತೆಗೆ ಫೋನ್ ಅನ್ನೋದು ಹುಚ್ಚು.. ಅದ್ರಲ್ಲಿ ಐಫೋನ್ ಅನ್ನೋದು ಇನ್ನೊಂದು ರೀತಿಯ ಹುಚ್ಚು.. ನಾರ್ಮಲ್ ಸ್ಮಾರ್ಟ್‌ಫೋನ್ ಬಳಸೋನಿಗೆ ಆ್ಯಪಲ್ ಪೋನ್ ತಗೋಬೇಕು ಅನ್ನೋದು ಕನಸು. ಇದನ್ನ ತಾವು ದುಡಿದ ಹಣದಲ್ಲಿ ತಗೋಂಡ್ರೆ ಒಳಿತು. ಆದ್ರೆ, ಇಲ್ಲೊಬ್ಬ ಭೂಪ ಐಫೋನ್ ಕೊಡಿಸಿ ಸರ್ ಅಂತ ಸಂಸದರಿಗೆ ಕರೆ ಮಾಡಿ ತಲೆ ತಿಂದಿದ್ದಾನೆ.
ಯುವಕರಲ್ಲಿ ಮೊಬೈಲ್ ಗೀಳು ಕಾಮನ್.. ಕೈಲಿ ಫೋನ್ ಇದ್ರೆ ಲೋಕವನ್ನೇ ಮರೀತಾರೆ ಈಗಿನ ಯೂತ್ಸ್. ಆದರಲ್ಲೂ ಐಫೋನ್ ಬೇಕು ಅನ್ನೋದು ಎಷ್ಟೋ ಯುವಕರ ಕನಸು. ಈ ಕನಸನ್ನ ನನಸು ಮಾಡಿಕೊಳ್ಳಬೇಕು ಅಂದ್ರೆ ದುಡಿದು ತಗೊಳ್ಳಬೇಕು. ಇಲ್ಲೊಬ್ಬ ಎಕ್ಸ್‌ಟ್ರಾರ್ಡಿನರಿ ಯುವಕನೊಬ್ಬ ಸಂಸದರಿಗೆ ಕರೆ ಮಾಡಿ ಕಿರಿಕಿರಿ ಮಾಡಿದ್ದಾನೆ.
ಇದನ್ನೂ ಓದಿ: ಆರ್​ವಿ ದೇವರಾಜ್ ಇನ್ನು ನೆನಪು ಮಾತ್ರ.. ಅವರ ರಾಜಕೀಯ ಜೀವನ ಹೇಗಿತ್ತು..?
/filters:format(webp)/newsfirstlive-kannada/media/media_files/2025/12/02/jagadish-shetter-1-2025-12-02-09-30-48.jpg)
17 ಪ್ರೋ ಮ್ಯಾಕ್ಸ್ ಬೇಕು ಅಂತ ಶೆಟ್ಟರ್ ಬಳಿ ಬೇಡಿಕೆ
ಹೀಗೊಂದು ಕೀಟಲೆಯ ಕರೆ ಬಂದಿರೋದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್‌ಗೆ.. ಇತ್ತೀಚೆಗೆ ಸಂಸದ ಜಗದೀಶ್ ಶೆಟ್ಟರ್‌ಗೆ ಕರೆ ಮಾಡಿದ್ದ ಯುವಕನೊಬ್ಬ ಸರ್ ನನಗೊಂದು ಐಫೋನ್ 17 ಪ್ರೋ ಮ್ಯಾಕ್ಸ್ ಕೊಡಿಸಿ ಅಂತ ಗಂಟುಬಿದ್ದಿದ್ದಾನೆ. ಈತನ ಮಾತು ಕೇಳಿ ಸಂಸದರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಯುವಕನ ಬೇಡಿಕೆ ಕೇಳಿ ಗರಂ ಆಗಿ ಫೋನ್ ಕರೆಯನ್ನ ಕಟ್ ಮಾಡಿದ್ದಾರೆ.
ಐಫೋನ್ ಕೊಡುಸ್ರೀ ಸರಾ..
ಜಗದೀಶ್ ಶೆಟ್ಟರ್: ಹಲೋ..
ಪ್ರತೀಕ್: ಹಲೋ..
ಜಗದೀಶ್ ಶೆಟ್ಟರ್: ಯಾರು?
ಪ್ರತೀಕ್: ಸರ್.. ನಮಸ್ಕಾರ ಸರ್.. ಪ್ರತೀಕ್ ಮಲಜಿ ಸರ್ ಮಾತಾಡೋದು.
ಜಗದೀಶ್ ಶೆಟ್ಟರ್: ಪ್ರತೀಕ್
ಪ್ರತೀಕ್: ಮಲಜಿ ಸರ್.
ಜಗದೀಶ್ ಶೆಟ್ಟರ್: ಹೇಳಿ
ಪ್ರತೀಕ್: ಜಗದೀಶ್ ಸರ್ ರೀ..
ಜಗದೀಶ್ ಶೆಟ್ಟರ್: ಹೇಳ್ರೀ ಶೆಟ್ಟರ್ ಮಾತಾಡೋದು..
ಪ್ರತೀಕ್: ಹೌದ್ರೀ ಸರಾ.. ನಮಸ್ಕಾರೀ ಸರಾ.. ಆರಾಮಿದೀರೀ ಸರಾ..
ಜಗದೀಶ್ ಶೆಟ್ಟರ್: ಹೂ..
ಪ್ರತೀಕ್: ಸರ್ ನನಗೊಂದು ಹೆಲ್ಪ್ ಬೇಕಾಗಿತ್ತು ಸರಾ..
ಜಗದೀಶ್ ಶೆಟ್ಟರ್: ಹೇಳಪ್ಪಾ..
ಪ್ರತೀಕ್: ಸರ್ ನನಗಾ 17 ಪ್ರೋ ಮ್ಯಾಕ್ಸ್ ಐಫೋನ್ ಲಾಂಚಿಂಗ್ ಆಗ್ಯಾತಿ ಸರಾ.. ನನಗದು ಒಂದು ಪೀಸ್ ಬೇಕಿತ್ತು ಸರಾ
ಜಗದೀಶ್ ಶೆಟ್ಟರ್: ಹೇ.. ಇಂಥವ್ನೆಲ್ಲಾ ಎಂಪಿ ಬಳಿ ಕೇಳ್ತೀರಲ್ಲಾ. ಏನ್ರೀ ನಿಮ್ದು.
ಪ್ರತೀಕ್: ಹೌದ್ರೀ..
ಇದನ್ನೂ ಓದಿ: ಇವತ್ತು ಡಿಕೆಶಿ ಮನೆಯಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್! ಸಿದ್ದುಗಾಗಿ ‘ನಾಟಿಕೋಳಿ’ ಖಾದ್ಯ ತಯಾರಿ
/filters:format(webp)/newsfirstlive-kannada/media/media_files/2025/12/02/jagadish-shetter-2-2025-12-02-09-31-14.jpg)
ಸಂಸದರ ಜೊತೆ ಮಾತನಾಡಿದ ಈ ಆಡಿಯೋ ಎಲ್ಲೆಡೆ ಹರಿದಾಡ್ತಿದೆ. ಅಂದ್ಹಾಗೆ ಐಫೋನ್ 17 ಪ್ರೋ ಮ್ಯಾಕ್ಸ್‌ಗೆ ಬೇಡಿಕೆ ಇಟ್ಟಿದ್ದ ಯುವಕನ ಹೆಸರು ಪ್ರತೀಕ್ ಮಲಜಿ. ರಾಮದುರ್ಗ ಮೂಲದ ಪ್ರತೀಕ್ ಕಾಂಗ್ರೆಸ್‌ನ ಕಾರ್ಯಕರ್ತ ಅನ್ನೋದು ತಿಳಿದುಬಂದಿದೆ.
ಪ್ರತೀಕ್ ಮಲಜಿ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ
ಬೆಳಗಾವಿ ಸಂಸದ ಶೆಟ್ಟರ್‌ಗೆ ಪ್ರತೀಕ್ ಕರೆ ಮಾಡಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದ್ರ ಬೆನ್ನಲ್ಲೇ ಪ್ರತೀಕ್ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಪ್ರತೀಕ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಬೇಕಂತಲೇ ಜಗದೀಶ್ ಶೆಟ್ಟರ್‌ಗೆ ಹೀಗೆ ಕರೆ ಮಾಡಿ ಅವಮಾನ ಮಾಡಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಯುವಕರಾದ್ರವರು ಸಂಸದರಿಗೆ ಕರೆ ಮಾಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡ್ಬೇಕು.. ತಮ್ಮ ಊರಲ್ಲಿರೋ ಸಮಸ್ಯೆಗಳ ಬಗ್ಗೆ ಸಂಸದರ ಗಮನಕ್ಕೆ ತರಬೇಕು. ಅದನ್ನ ಬಿಟ್ಟು ಐಪೋನ್ ಕೊಡ್ಸಿ.. ಮತ್ತೇನೋ ಕೊಡ್ಸಿ ಅನ್ನೋದು ನಿಜಕ್ಕೂ ಹಾಸ್ಯಾಸ್ಪದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us