/newsfirstlive-kannada/media/media_files/2025/12/02/kl-rahul-1-2025-12-02-09-07-28.jpg)
ಕ್ರಿಕೆಟ್ ಅಭಿಮಾನಿಗಳಿಗೆ ವೈಟ್​ಬಾಲ್ ಕ್ರಿಕೆಟ್ ಫೀವರ್ ಶುರುವಾಗಿದೆ. ಟೆಸ್ಟ್​ ಕ್ರಿಕೆಟ್​ನಿಂದ ಏಕದಿನ ಕ್ರಿಕೆಟ್​​ಗೆ ಫೋಕಸ್ ಶಿಫ್ಟ್​ ಆಗಿದೆ. ಟೆಸ್ಟ್ ಕ್ರಿಕೆಟ್​​ನಲ್ಲಿ ವೈಟ್​ವಾಶ್ ಮುಖಭಂಗ ಮಾತ್ರ ಟೀಮ್ ಇಂಡಿಯಾ ಆಟಗಾರರ ಪದೇ ಪದೇ ಕಾಡ್ತಿದೆ. ಜಾರ್ಖಂಡ್ ಏಕದಿನ ಪಂದ್ಯಕ್ಕೂ ಮುನ್ನ, ಏಕದಿನ ತಂಡದ ಹಂಗಾಮಿ ನಾಯಕ ಕೆ.ಎಲ್.ರಾಹುಲ್, ರೆಡ್​ಬಾಲ್​ನಲ್ಲಿ ಮಾಡಿದ್ದ ತಪ್ಪನ್ನ ಒಪ್ಪಿಕೊಂಡಿದ್ದಾರೆ.
ಇಂಡೋ-ಆಫ್ರಿಕಾ ಮೊದಲ ಏಕದಿನ ಪಂದ್ಯ ಅಂತ್ಯ ಕಂಡಿದೆ. ಮೊದಲ ಪಂದ್ಯ ಮುಗಿದ್ರೂ ಪಂದ್ಯಕ್ಕೂ ಮುನ್ನ ನಾಯಕ ಕೆ.ಎಲ್.ರಾಹುಲ್ ಆಡಿದ ಮಾತುಗಳು ಚರ್ಚೆಯಲ್ಲಿದೆ. ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿಗೆ ರಾಹುಲ್​ ಅಸಲಿ ಕಾರಣ ಬಿಚ್ಚಿಟ್ಟಿದ್ರು. ರಾಹುಲ್ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸ್ಪಿನ್​​​ ಪ್ರಾಬ್ಲಂ ಒಪ್ಪಿಕೊಂಡ ರಾಹುಲ್
ಕೊಲ್ಕತ್ತಾ ಮತ್ತು ಗುವಾಹಟಿ ಟೆಸ್ಟ್ ಪಂದ್ಯದ ಸೋಲಿಗೆ ಎದುರಾಳಿ ತಂಡದ ಸ್ಪಿನ್ನರ್ಸ್ ಕಾರಣ. ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾ ಆಟಗಾರರು, ಸ್ಪಿನ್ ದಾಳಿ ಎದುರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸ್ಪಿನ್ ದಾಳಿಯನ್ನ ದಿಟ್ಟವಾಗಿ ಎದುರಿಸಲು ಸಾಧ್ಯವಾಗದ ಕಾರಣ, ತಂಡ ಸೋಲು ಅನುಭವಿಸಿದೆ ಅನ್ನೋದು ರಾಹುಲ್ ನೇರ ಅಭಿಪ್ರಾಯ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ವೈಟ್​ವಾಶ್​ಗೂ, ಸ್ಪಿನ್ ಟ್ರಬಲ್ ಕಾರಣ ಅಂತ ರಾಹುಲ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:ಪಂತ್​​ಗೆ ಪಶ್ಚಾತಾಪ ಪಡುವ ಸಮಯ.. ಎಚ್ಚರ ಎಚ್ಚರ..!
/filters:format(webp)/newsfirstlive-kannada/media/media_files/2025/10/14/kl-rahul-4-2025-10-14-08-00-24.jpg)
ರಾಹುಲ್ ನೇರ ಮಾತಿಗೆ ಮೆಚ್ಚಲೇಬೇಕು. ಯಾಕಂದ್ರೆ ರಾಹುಲ್​ಗೂ ಗೊತ್ತು, ತಂಡದ ಸೋಲಿಗೆ ಕಾರಣವೇನು ಅನ್ನೋದು. 2016 ರಿಂದ 2019ರವರೆಗೂ ಟೀಮ್ ಇಂಡಿಯಾ ಬ್ಯಾಟರ್ಸ್​ ತವರಿನಲ್ಲಿ 53.30 ಬ್ಯಾಟಿಂಗ್ ಸರಾಸರಿ ಹೊಂದಿದ್ರು. ಆದ್ರೆ 2024 ಸೆಪ್ಟೆಂಬರ್ ನಂತರ ತವರಿನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್​ ಸರಾಸರಿ 27.60ಗೆ ಭಾರೀ ಕುಸಿದಿದೆ. ತವರಿನಲ್ಲಿ ಟೀಮ್ ಇಂಡಿಯಾ ಆಟಗಾರರ ಬ್ಯಾಟಿಂಗ್ ಸ್ಟ್ಯಾಟ್ಸ್ ನೋಡಿದ್ರೆ, ನಿಜಕ್ಕೂ ಗಾಬರಿ ಆಗುತ್ತದೆ. ಸ್ಪಿನ್ನರ್ಸ್​ ವಿರುದ್ಧ ಯಾಕೆ ಇಷ್ಟೊಂದು ವೀಕ್ ಅಂತ ಅನ್ನಿಸದೇ ಇರೋದಿಲ್ಲ.​
ತೆಂಡುಲ್ಕರ್, ದ್ರಾವಿಡ್, ಗವಾಸ್ಕರ್​​​ ಸಲಹೆ ಪಡೆಯುತ್ತೇವೆ..!
ಪ್ರೆಸ್ ಕಾನ್ಫರೆನ್ಸ್​ನಲ್ಲಿ ಸ್ಪಿನ್ ವೀಕ್ನೆಸ್ ಒಪ್ಪಿಕೊಂಡ ರಾಹುಲ್, ಅದಕ್ಕೆ ಪರಿಹಾರ ಕಂಡುಕೊಳ್ಳೊದಾಗಿ ತಿಳಿಸಿದ್ರು. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್​ರಂತಹ ದಿಗ್ಗಜರ ಸಲಹೆ ಪಡೆದು ಸ್ಪಿನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಅಂದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕೆವಿನ್ ಪೀಟರ್​ಸನ್ ಉದಾಹರಣೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಹೈವೋಲ್ಟೆಜ್​ ಸಭೆಗೆ ಮಹೂರ್ತ ಇಟ್ಟ ಬಿಸಿಸಿಐ; ಕೊಹ್ಲಿ, ರೋಹಿತ್ ಟಾರ್ಗೆಟ್​..!
/filters:format(webp)/newsfirstlive-kannada/media/media_files/2025/11/27/gambhir-and-gill-2025-11-27-10-31-33.jpg)
2014ರಲ್ಲಿ ವಿರಾಟ್ ಕೊಹ್ಲಿ ಬ್ಯಾಡ್​ ಫಾರ್ಮ್​ಗೆ ಸಿಲುಕಿದಾಗ ತೆಂಡುಲ್ಕರ್ ಸಲಹೆ ಪಡೆದು ಮತ್ತೆ ಫಾರ್ಮ್​​ಗೆ ಮರಳಿದ್ರು. ಹಾಗೆ ಇಂಗ್ಲೆಂಡ್​ನ ಮಾಜಿ ನಾಯಕ ಕೆವಿನ್ ಪೀಟರ್​ನಸ್, ಉಪಖಂಡದ ಸ್ಪಿನ್​​ ಟ್ರ್ಯಾಕ್​ಗಳಲ್ಲಿ ಆಡೋ ಟ್ರಿಕ್ಸ್​ ಅನ್ನ ರಾಹುಲ್ ದ್ರಾವಿಡ್ ಬಳಿ ಪಡೆದಿದ್ರು. ಹಾಗಾಗಿ ದಿಗ್ಗಜರಿಂದ ಪಾಠ ಹೇಳಿಸಿಕೊಳ್ಳೋದಾಗಿ ಕೆ.ಎಲ್.ರಾಹುಲ್ ತಿಳಿಸಿದ್ರು.
ಗಂಭೀರ್, ಸಿತಾಂಶು ಕೊಟಕ್ ಕೋಚ್ ಅಲ್ವಾ..?
ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಬಳಿ ಸ್ಪಿನ್ ಪಾಠ ಹೇಳಿಸಿಕೊಳ್ಳೋಕೆ ಮುಂದಾಗಿರೋದು, ಒಳ್ಳೆಯ ವಿಚಾರನೇ. ಆದ್ರೆ ತಂಡದಲ್ಲಿ 50ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನ ಆಡಿರುವ ಕೋಚ್ ಗೌತಮ್ ಗಂಭೀರ್ ಇದ್ರೂ ಇಲ್ಲದಂತೆ. ಹಾಗೆ 130 ಫಸ್ಟ್ ಕ್ಲಾಸ್ ಪಂದ್ಯಗಳನ್ನಾಡಿರುವ ಸಹಾಯಕ ಕೋಚ್ ಸಿತಾಂಶು ಕೋಟಕ್ ಇದ್ರೂ ಇಲ್ಲದಂತೆ. ಅದಕ್ಕಾಗೇ ರಾಹುಲ್, ಕೋಚ್ ಗಂಭೀರ್ ಬಿಟ್ಟು ದಿಗ್ಗಜರ ಮೊರೆ ಹೋಗ್ತಿದ್ದಾರೆ.
ಇದನ್ನೂ ಓದಿ: ಅಪರೂಪದ ಮಾಣಿಕ್ಯ ಬವುಮಾ.. ಇವರಿಗೆ ಇರೋ ಗೌರವ ಎಂಥದ್ದು..?
/filters:format(webp)/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
ಟೆಸ್ಟ್ ಸರಣಿ ಸೋಲಿಗೆ ಕೇವಲ ಆಟಗಾರರು, ಕೋಚ್, ಮ್ಯಾನೇಜ್ಮೆಂಟ್ ಮಾತ್ರ ಕಾರಣವಲ್ಲ. ಬಿಸಿಸಿಐ ಬಿಗ್​ಬಾಸ್​​ಗಳು ಕಾರಣಾನೇ. ಯಾಕಂದ್ರೆ ದೇಸಿ ಕ್ರಿಕೆಟ್​ನಲ್ಲಿ ಫಾಸ್ಟ್ ಪಿಚ್​​ಗಳಿಗೆ ಹೆಚ್ಚು ಒತ್ತ ಕೊಟ್ಟು, ಕೈಸುಟ್ಟುಕೊಂಡಿದ್ದಾರೆ. ಕೇವಲ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವಿನತ್ತ ಮಾತ್ರ ಗಮನ ಹರಿಸಿದ ಬಿಗ್​ಬಾಸ್​ಗಳು, ಸ್ಪಿನ್ ಅಡೋದನ್ನೇ ಮರೆತು ಹೋಗಿದ್ದಾರೆ.
ದಶಕಗಳಿಂದ ಸ್ಪಿನ್ ಆಡೋದ್ರಲ್ಲಿ ಎಕ್ಸ್​ಪರ್ಟ್ ಆಗಿದ್ದ ಟೀಮ್ ಇಂಡಿಯಾಗೆ ಇದೀಗ ಸ್ಪಿನ್ ಮುಳುವು ಅಂದ್ರೆ ನಂಬೋಕೆ ಆಗ್ತಿಲ್ಲ. ಟೀಮ್ ಇಂಡಿಯಾದ ಸ್ಪಿನ್ ಟ್ರಬಲ್​ಗೆ ಆದಷ್ಟು ಬೇಗ ಬ್ರೇಕ್ ಬೀಳಲಿ ಅನ್ನೋದೇ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಆಶಯ.
ಇದನ್ನೂ ಓದಿ: ಆರ್​ವಿ ದೇವರಾಜ್ ಇನ್ನು ನೆನಪು ಮಾತ್ರ.. ಅವರ ರಾಜಕೀಯ ಜೀವನ ಹೇಗಿತ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us