/newsfirstlive-kannada/media/media_files/2025/11/30/temba-bavuma-2025-11-30-14-39-42.jpg)
ಜಾರ್ಖಂಡ್​ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ತವರಿನಲ್ಲಿ ಆತಿಯಾದ ಆತ್ಮವಿಶ್ವಾಸದಿಂದ ಟೆಸ್ಟ್ ಸರಣಿ ಸೋತಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಯುವ ಮತ್ತು ಅನುಭವಿ ಆಟಗಾರರಿರುವ ಸೌತ್ ಆಫ್ರಿಕಾ ತಂಡ ಡೇಂಜರಸ್. ಅದಕ್ಕಿಂತ ದೊಡ್ಡ ಡೇಂಜರ್ ಅಂದ್ರೆ ಆಫ್ರಿಕನ್ ಕ್ಯಾಪ್ಟನ್ ಟೆಂಬ ಬವುಮಾ.
5.4 ಅಡಿ ಎತ್ತರ.. ಚಿಕ್ಕ ದೇಹ.. ನೋಡೋಕೆ ಚಿಕ್ಕ ಹುಡುಗನಂತೆ ಕಾಣುವ ಈತ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬ ಬವುಮಾ. ಈತನನ್ನ ನೋಡಿ ಅದೆಷ್ಟೋ ಮಂದಿ ಈಸಿಯಾಗಿ ತೆಗೆದುಕೊಂಡ್ರು. ಈತ ಕೊಟ್ಟ ಏಟಿಗೆ ಎದುರಾಳಿಗಳು ಮುಟ್ಟಿನೋಡಿಕೊಂಡ್ರು. ಇದಕ್ಕೆ ತಾಜಾ ಉದಾಹರಣೆ ಇತ್ತೀಚಿಗೆ ಟೀಮ್ ಇಂಡಿಯಾ ವಿರುದ್ಧ ನಡೆದ ಟೆಸ್ಟ್ ಸರಣಿ.
ಇದನ್ನೂ ಓದಿ:ಇನ್ಮುಂದೆ ಎಲ್ಲಾ ಮಕ್ಕಳಿಗೂ ಒಂದನೇ ತರಗತಿಯಲ್ಲಿ ಕಂಪ್ಯೂಟರ್ ಸೈನ್ಸ್..!
/filters:format(webp)/newsfirstlive-kannada/media/post_attachments/wp-content/uploads/2025/06/Temba_Bavuma.jpg)
ಟೆಂಬ ಬವುಮಾ ನೋಡೋಕೆ ಚಿಕ್ಕವರಾಗಿ ಕಂಡ್ರೂ ಅಪ್ರತಿಮ ಕ್ರಿಕೆಟಿಗ. ಸಿಕ್ಕಾಪಟ್ಟೆ ಬ್ರಲಿಯಂಟ್ ಕೂಡ.! "BIG THINGS COME FROM SMALL PACKAGES" ಅಂತಾರಲ್ಲ. ಅದು ಟೆಂಬ ಬವುಮಾಗೆ ಸಖತ್ ಸೂಟ್ ಆಗುತ್ತದೆ.
ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನ ವೈಟ್​ವಾಶ್ ಮಾಡಿರೋ ಟೆಂಬ ಬವುಮಾ, ಏಕದಿನ ಕ್ರಿಕೆಟ್​​ನಲ್ಲೂ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆಡಿರೋ 5 ಏಕದಿನ ಪಂದ್ಯಗಳಲ್ಲಿ ಟೆಂಬ ಬವುಮಾ ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾ, 4 ಪಂದ್ಯಗಳನ್ನ ಗೆದ್ದು ಬೀಗಿದೆ. ಒಂದೇ ಒಂದು ಪಂದ್ಯದಲ್ಲಿ ಮಾತ್ರ ಆಫ್ರಿಕಾ, ಟೀಮ್ ಇಂಡಿಯಾ ವಿರುದ್ಧ ಸೋತಿದೆ. ಈ ಯಶಸ್ಸಿಗೆ ಟೆಂಬ ಬವುಮಾರ ನಾಯಕತ್ವವೇ ಕಾರಣ.
ಟೆಂಬ ಬವುಮಾ ನ್ಯಾಚ್ಯುರಲಿ ಕೂಲ್ ಅಂಡ್ ಕಾಮ್ ಕ್ಯಾರೆಕ್ಟರ್​​ ಇರೋ ವ್ಯಕ್ತಿ. ಇದು ಟೆಂಬ ನಾಯಕತ್ವಕ್ಕೆ, ಶಕ್ತಿ ಅಂದ್ರೂ ತಪ್ಪಾಗೋದಿಲ್ಲ. ನಾಯಕನಾಗಿಯೂ ಕೂಲ್ ಅಂಡ್ ಕಾಮ್ ಆಗಿ ತಂಡವನ್ನ ಮುನ್ನಡೆಸುವ ಟೆಂಬ, ಒತ್ತಡದ ಸಂದರ್ಭದಲ್ಲೂ ತಾಳ್ಮೆಯನ್ನ ಕಳೆದುಕೊಳ್ಳೋದಿಲ್ಲ. ಯಾವಾಗಲೂ ಕಂಪೋಸ್ಡ್​ ಆಗಿರೋ ಟೆಂಬ, ಗ್ರೇಟ್​ ಲೀಡರ್ ಎನಿಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್​ಗಿಂತ ವೈಟ್​ಬಾಲ್ ಕ್ರಿಕೆಟ್​ನಲ್ಲಿ ಟೆಂಬ ಬವುಮ, ಟ್ಯಾಕ್ಟಿಕಲಿ ಸಖತ್ ಸ್ಟ್ರಾಂಗ್. ಮ್ಯಾಚ್ ಸಿಚ್ಯುವೇಶನ್ ರೀಡ್ ಮಾಡೋದ್ರಲ್ಲಿ, ಟೆಂಬ ಎತ್ತಿದ ಕೈ. ಅದ್ರಲ್ಲೂ ಸಂದರ್ಭಕ್ಕೆ ತಕ್ಕಂತೆ ಫೀಲ್ಡ್ ಪ್ಲೇಸ್​ಮೆಂಟ್, ಬೌಲಿಂಗ್ ಚೇಂಜಸ್, ಅದ್ಭುತವಾಗಿ ಮಾಡ್ತಾರೆ. ಇದೇ ಕಾರಣದಿಂದ ಟೆಂಬ, ಸ್ಟ್ರಾಂಗ್ ಟ್ಯಾಕ್ಟಿಕಲ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೆ ದೇಶದ ಗಮನ ಸೆಳೆದ ಬೆಂಗಳೂರು ವಿಮಾನ ನಿಲ್ದಾಣ..!
/filters:format(webp)/newsfirstlive-kannada/media/post_attachments/wp-content/uploads/2023/12/Tembu-Bavuma.jpg)
ಕ್ಲಾರಿಟಿ ಇರೋ ನಾಯಕ..!
ಟೆಂಬ ಬವುಮಾ ಲೈಫ್ ಮತ್ತು ಕ್ರಿಕೆಟ್ ಜರ್ನಿಯಲ್ಲಿ, ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ. ಬವುಮಗೆ, ಟೀಕೆಗಳು ಕೂಡ ಹೊಸದೇನಲ್ಲ. ಸೋ ಎಲ್ಲಾ ಪರಿಸ್ಥಿತಿಗಳನ್ನ ಕಣ್ಣಾರೆ ನೋಡಿ, ದಾಟಿಕೊಂಡು ಬಂದಿರುವ ಬವುಮ, ಮಾನಸಿಕವಾಗಿ ಶಕ್ತಿಶಾಲಿಯಾಗಿದ್ದಾರೆ. ​ಬವುಮ ಏನೇ ಮಾಡಿದ್ರೂ, ಕ್ಲಿಯರ್ ಆಗಿರುತ್ತದೆ. ಕ್ಲಾರಿಟಿ ಇಲ್ಲದೇ ಬವುಮ, ಯಾವುದೇ ನಿರ್ಧಾರವನ್ನ ಕೈಗೊಳ್ಳೋದಿಲ್ಲ.
ಬುವುಮಾ ಗ್ರೇಟ್ ಕ್ಯಾಪ್ಟನ್ ಅನ್ನೋದಕ್ಕೆ ಇದೇ ಪ್ರಮುಖ ಕಾರಣ. ಆಟಗಾರರ ಜೊತೆ ಉತ್ತಮ ಬಾಂಧವ್ಯ ಮತ್ತು ಉತ್ತಮ ಕಮ್ಯುನಿಕೇಷನ್ ಹೊಂದಿದ್ದಾರೆ. ಆಟಗಾರರು ಟಫ್ ಟೈಮ್ ಎದುರಿಸುವಾಗ, ಅವರ ಜೊತೆಯಾಗಿ ನಿಂತು ಆತ್ಮವಿಶ್ವಾಸ ಹೆಚ್ಚಿಸುತ್ತಾರೆ. ಆಟಗಾರರಿಗೆ ತಮ್ಮ ರೋಲ್ ಬಗ್ಗೆ ಕ್ಲಾರಿಟಿ ಕೊಡ್ತಾರೆ. ಇದ್ರಿಂದ ಆಟಗಾರರು ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಲು ಸಾಧ್ಯವಾಗುತ್ತದೆ. ತಂಡ ಮತ್ತು ಸಹ ಆಟಗಾರರ ಜೊತೆ ಸದಾ ನಿಲ್ಲುವ ಬವುಮಗಿಂತ ಒಳ್ಳೆ ನಾಯಕ ಬೇಕಾ..?
ಬವುಮಾಗೆ ಅಪಾರ ಗೌರವ
ಆಫ್ರಿಕನ್ ನಾಯಕನಿಗೆ ಡ್ರೆಸಿಂಗ್​ ರೂಮ್​ನಲ್ಲಿ ಅಪಾರವಾಗ ಗೌರವ ಇದೆ. ಆಟಗಾರರನ್ನ ಒಂದುಗೂಡಿಸಿ, ವೃತ್ತಿಪರತೆಯನ್ನ ಕಾಣುವ ಬವುಮ, ಆಫ್ರಿಕನ್ ತಂಡಕ್ಕೆ ರಿಯಲ್ INSPIRATION ಆಗಿದ್ದಾರೆ. ಆಫ್ರಿಕಾದ ಮೊದಲ PERMANENT BLACK CAPTAIN ಎನಿಸಿಕೊಂಡಿರೋ ಟೆಂಬ ಬವುಮ, ಆಟಗಾರರಲ್ಲಷ್ಟೇ ಅಲ್ಲ..! ದೇಶದ ಜನತೆಯಲ್ಲೂ ಗೌರವ ಸಂಪಾದಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us