/newsfirstlive-kannada/media/media_files/2025/08/31/modi-xi-zinping-2025-08-31-15-22-03.jpg)
ಭಾರತ ಮತ್ತು ಚೀನಾ ದ್ವಿಪಕ್ಷೀಯ ಮಾತುಕತೆ Photograph: (@narendramodi)
ಬರೋಬ್ಬರಿ 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ ಹಿನ್ನೆಲೆಯಲ್ಲಿ ಮೋದಿ ಚೀನಾ ಪ್ರವಾಸದಲ್ಲಿದ್ದಾರೆ. ಅಂತೆಯೇ ಇಂದು ಬೆಳಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾದರು. ಈ ವೇಳೆ ಎರಡು ದೇಶಗಳು ಮಹತ್ವದ ಒಪ್ಪಂದಕ್ಕೆ ಬಂದಿವೆ.
ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಹೊರತಾಗಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಹತ್ವದ ಸಭೆ ನಡೆಸಿದರು. 2024, ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ನಡೆದ ಕೊನೆಯ ಸಭೆಯ ಬಳಿಕ ಮತ್ತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮುಖಾಮುಖಿಯಾದರು. ಈ ವೇಳೆ ಉಭಯ ನಾಯಕರು ಭಾರತ ಮತ್ತು ಚೀನಾ ಅಭಿವೃದ್ಧಿ ಪಾಲುದಾರರು, ಪ್ರತಿಸ್ಪರ್ಧಿಗಳಲ್ಲ ಅನ್ನೋದನ್ನ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮೋದಿ, ಜಿನ್‌ಪಿಂಗ್ ಭೇಟಿ -ಚೀನಾಗೆ 3 ಪದಗಳಲ್ಲಿ ಸಂದೇಶ
ದ್ವಿಪಕ್ಷೀಯ ಸಂಬಂಧಗಳ ಪ್ರಗತಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಗಡಿ ವಿವಾದಕ್ಕೆ ನ್ಯಾಯಯುತ ಮತ್ತು ಸ್ವೀಕಾರಾರ್ಹ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ಪುನರುಚ್ಚರಿಸಿದರು.
ವ್ಯಾಪಾರ, ವೀಸಾ ಸಹಕಾರ
ಜನರಿಂದ ಜನರಿಗೆ ಸಂಪರ್ಕವನ್ನು ಹೆಚ್ಚಿಸಲು ವೀಸಾ ಸೌಲಭ್ಯ, ನೇರ ವಿಮಾನಗಳು ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಯ ಪುನಃಸ್ಥಾಪನೆಗೆ ಒತ್ತು ನೀಡಿದರು. ಹೊರತಾಗಿ ವ್ಯಾಪಾರ, ಹೂಡಿಕೆಯನ್ನು ಹೆಚ್ಚಿಸುವ ಬಗ್ಗೆಯೂ ಒಪ್ಪಂದಕ್ಕೆ ಬರಲಾಯಿತು.
ಜಾಗತಿಕ ವಿಷಯಗಳಲ್ಲಿ..
ಭಾರತ ಮತ್ತು ಚೀನಾ ಎರಡೂ ದೇಶಗಳು ಕಾರ್ಯತಂತ್ರದಲ್ಲಿ ಸ್ವಾಯತ್ತತೆ ಹೊಂದಿವೆ. ಇಬ್ಬರ ಸಂಬಂಧಗಳನ್ನು ಮೂರನೇ ದೇಶದ ದೃಷ್ಟಿಕೋನದಿಂದ ನೋಡಬಾರದು ಎಂದು ಮೋದಿ ಹೇಳಿದ್ದಾರೆ. ಭಯೋತ್ಪಾದನೆ ಮತ್ತು ನ್ಯಾಯಯುತ ವ್ಯಾಪಾರದಂತಹ ಜಾಗತಿಕ ವಿಷಯಗಳಲ್ಲಿ ಸಹಕಾರ ಹೆಚ್ಚಿಸುವುದರ ಬಗ್ಗೆ ಚರ್ಚಿಸಲಾಗಿದೆ.
ಇದನ್ನೂ ಓದಿ:ಚೀನಾದಲ್ಲಿ SCO ಶೃಂಗಸಭೆ.. ಇಂದು ಮೋದಿ, ಜಿನ್‌ಪಿಂಗ್ ಭೇಟಿ..!
ಭವಿಷ್ಯದ ಸಭೆಗಳು
ಪ್ರಧಾನಿ ಮೋದಿ ಚೀನಾದ SCO ಅಧ್ಯಕ್ಷತೆಯನ್ನು ಬೆಂಬಲಿಸಿದರು ಮತ್ತು ಅಧ್ಯಕ್ಷ ಕ್ಸಿ ಅವರನ್ನು 2026ರಲ್ಲಿ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಆಹ್ವಾನಿಸಿದರು. ಕ್ಸಿ ಆಹ್ವಾನವನ್ನು ಸ್ವೀಕರಿಸಿದರು. ಜೊತೆಗೆ ಭಾರತದ ಅಧ್ಯಕ್ಷತೆಗೆ ಬೆಂಬಲ ನೀಡುವ ಭರವಸೆ ಕೊಟ್ಟರು.
ಚೀನಾ ನಾಯಕತ್ವದೊಂದಿಗೆ ದ್ವಿಪಕ್ಷೀಯ ಮಾತುಕತೆ
ಇನ್ನು ಮೋದಿ ಅವರು ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯ ಕೈ ಚಿಯನ್ನ ಭೇಟಿಯಾದರು. ಭಾರತದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಚೀನಾ ಉತ್ಸುಕವಾಗಿದೆ ಎಂದು ಕೈ ಹೇಳಿದರು.
ಇದನ್ನೂ ಓದಿ: ಟ್ರಂಪ್ ಅವರ ಈ ಮಾತಿಗೆ ಮೋದಿಗೆ ಸಿಟ್ಟು -ಸಿಕ್ರೇಟ್ ರಿವೀಲ್ ಮಾಡಿದ ನ್ಯೂಯಾರ್ಕ್ ಟೈಮ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ