Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನ್ನಾಡಲಿದ್ದಾರೆ. ಭಾಷಣದಲ್ಲಿ ಯಾವ ವಿಚಾರವನ್ನು ಪ್ರಸ್ತಾಪ ಮಾಡಲಿದ್ದಾರೆ ಅನ್ನೋದ್ರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ದೇಶದ ಜನ ಗುಡ್​ನ್ಯೂಸ್ ನಿರೀಕ್ಷೆಯಲ್ಲಿದ್ದಾರೆ

author-image
Ganesh Kerekuli
PM MODI (4)
Advertisment

ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನ್ನಾಡಲಿದ್ದಾರೆ. ಇಂದು ಮಧ್ಯರಾತ್ರಿಯಿಂದ ದೇಶದಲ್ಲಿ ಪರಿಷ್ಕೃತ ಜಿಎಸ್​ಟಿ ಜಾರಿಯಾಗಲಿದೆ. ಜಿಎಸ್​ಟಿ ಕಡಿತಗೊಳಿಸಿ ಜಾರಿ ಹಿಂದಿನ ದಿನ ಮೋದಿ ದೇಶವನ್ನು ಉದ್ದೇಶಿಸಿ ಮಾತನ್ನಾಡುತ್ತಿರೋದು ಭಾರೀ ಕುತೂಹಲ ಮೂಡಿಸಿದೆ. 

ಆದರೆ ಮೋದಿ ಅವರು ತಮ್ಮ ಭಾಷಣದಲ್ಲಿ ಯಾವ ವಿಚಾರವನ್ನು ಪ್ರಸ್ತಾಪ ಮಾಡಲಿದ್ದಾರೆ ಅನ್ನೋದ್ರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಯಾಕೆಂದರೆ ನಾಳೆಯಿಂದ ನಾಡ ಹಬ್ಬ ದಸರಾ ಕೂಡ ಆರಂಭವಾಗ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ದೀಪಾವಳಿ ಕೂಡ ಬರಲಿದೆ. ಸಾಲು ಸಾಲು ಹಬ್ಬ ಹಿನ್ನೆಲೆಯಲ್ಲಿ ಮೋದಿ ಅವರ ಭಾಷಣೆ ಮೇಲೆ ದೇಶದ ಜನ ಗುಡ್​ನ್ಯೂಸ್ ನಿರೀಕ್ಷೆಯಲ್ಲಿದ್ದಾರೆ. 

ಇದನ್ನೂ ಓದಿ:ಬಿಸಿಸಿಐಗೆ CSK ಮಾಜಿ ಸ್ಟಾರ್​ ಅಧ್ಯಕ್ಷ.. ಖಜಾಂಚಿಯಾಗಿ ರಘುರಾಂ ಭಟ್ ಆಯ್ಕೆ

ಇನ್ನು ಇವತ್ತು ಮಹಾಲಯ ಅಮಾಸ್ಯೆ ನಿಮಿತ್ತ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಪ್ರಧಾನಿಗಳು ನಾಳೆ ಅರುಣಾಚಲ ಪ್ರದೇಶ ಮತ್ತು ತ್ರಿಪುರಾಗೆ ಭೇಟಿ ನೀಡಲಿದ್ದಾರೆ. ಈ ವೇಳೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಮಾಹಿತಿಗಳ ಪ್ರಕಾರ ಬರೋಬ್ಬರಿ 5100 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳಿಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. 

ಇದನ್ನೂ ಓದಿ:ನಿಧಿ, ಕರ್ಣ LOVE ಪ್ರಪೋಸಲ್ ಸಕ್ಸಸ್.. ಕೇಡಿಗಳ ಪ್ಲಾನ್​ಗೆ ಪ್ರೀತಿಯ ಕಿಡಿ ಹೊತ್ತಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pm Narendra Modi
Advertisment