Advertisment

ನಿಧಿ, ಕರ್ಣ LOVE ಪ್ರಪೋಸಲ್ ಸಕ್ಸಸ್.. ಕೇಡಿಗಳ ಪ್ಲಾನ್​ಗೆ ಪ್ರೀತಿಯ ಕಿಡಿ ಹೊತ್ತಿದೆ..

ಕನ್ನಡದ ಜನಪ್ರಿಯ ಸೀರಿಯಲ್​​ ಕರ್ಣದಲ್ಲಿ ಕೇಡಿಗಳ ಪ್ಲ್ಯಾನ್​ ಪ್ರೀತಿಯ ಕಿಡಿ ಹೊತ್ತಿಸಿದೆ. ಕರ್ಣ ಹಾಗೂ ನಿಧಿ ಲವ್​ ಪ್ರಪೋಸಲ್​ ಸೂಪರ್​ ಸಕ್ಸಸ್​ ಆಗಿದೆ. ಆ ದೃಶ್ಯ ಅಂತೂ ಕನಸೋ ಇದು.. ನನಸೋ ಇದು ಎಂಬಂತಿತ್ತು.. ವೀಕ್ಷಕರಣ ಕಣ್ಣಿಗೆ ಹಬ್ಬದಂತೆ ಕಾಣ್ತಿತ್ತು.

author-image
Ganesh Kerekuli
karna kannada serial
Advertisment

ಕನ್ನಡದ ಜನಪ್ರಿಯ ಸೀರಿಯಲ್​​ ಕರ್ಣದಲ್ಲಿ ಕೇಡಿಗಳ ಪ್ಲ್ಯಾನ್​ ಪ್ರೀತಿಯ ಕಿಡಿ ಹೊತ್ತಿಸಿದೆ. ಕರ್ಣ ಹಾಗೂ ನಿಧಿ ಲವ್​ ಪ್ರಪೋಸಲ್​ ಸೂಪರ್​ ಸಕ್ಸಸ್​ ಆಗಿದೆ. ಆ ದೃಶ್ಯ ಅಂತೂ ಕನಸೋ ಇದು.. ನನಸೋ ಇದು ಎಂಬಂತಿತ್ತು.. ವೀಕ್ಷಕರಣ ಕಣ್ಣಿಗೆ ಹಬ್ಬದಂತೆ ಕಾಣ್ತಿತ್ತು. 

Advertisment

ಇದನ್ನೂ ಓದಿ:ಮದುವೆ ಆದ ಮೇಲೆ ಹೀಗ್ಯಾಕೆ ಮಾಡ್ತಿದ್ದಾರೋ.. ಅಕ್ಕನ ಬಗ್ಗೆ ಬಿಗ್​ ಬಾಸ್​ ರಂಜಿತ್ ಏನೇನು ಹೇಳಿದರು?

karna kannada serial (1)

ನಿಧಿ ಕ್ಯೂಟ್​ ಸ್ವೀಟ್​ ಮಾತಿಗೆ ಕರ್ಣನ ಹಾರ್ಟ್​ ಲಬ್​ ಡಬ್​ ಅಂತ ಹೊಡ್ಕೊಳ್ಳೋ ಬದಲು ನಿಧಿ ನಿಧಿ ಅಂತ ಸೌಂಡ್​ ಮಾಡ್ತಿದೆ ಎಂದಾಗಿದೆ. ಇಷ್ಟು ದಿನ ಪ್ರೀತಿಗಾಗಿ ಹಂಬಲಿಸುತ್ತಿದ್ದ ನಾಯಕ, ನಶೆಯ ಮತ್ತಲ್ಲಿ ಬಚ್ಚಿಟ್ಟ ಪ್ರೀತಿಯ ನಿಧಿಯನ್ನ ಧಾರೆ ಏರೆದಿದ್ದಾನೆ. 
 

ಇದನ್ನೂ ಓದಿ:ಮದುವೆ ಆದ ಮೇಲೆ ಹೀಗ್ಯಾಕೆ ಮಾಡ್ತಿದ್ದಾರೋ.. ಅಕ್ಕನ ಬಗ್ಗೆ ಬಿಗ್​ ಬಾಸ್​ ರಂಜಿತ್ ಏನೇನು ಹೇಳಿದರು?

Advertisment

karna kannada serial (2)

ದಿಲ್​ ಕದ್ದ ಚೋರಿ ನಿಧಿಗೆ ಮನಸ್ಸಿನ ಮಾತನ್ನೆಲ್ಲಾ ಹೇಳಿದ್ದಾನೆ ಕರ್ಣ. ಕೇಡಿಗಳು ನಿಧಿ ಪ್ರಾಣಕ್ಕೆ ಸಂಚಕಾರ ತರೋಕೆ ಇಬ್ಬರಿಗೂ ಮತ್ತೇರುವಂತೆ ಮಾಡಿದ್ರು. ಆದ್ರೇ ಇದು ಅವ್ರಿಗೆ ಉಲ್ಟಾ ಹೊಡೆದು, ನಿಧಿ-ಕರ್ಣ ಮತ್ತಷ್ಟು ಹತ್ತಿರವಾಗುವಂತೆ ಮಾಡಿದ್ದು, ಪೊಲೀಸರ ಜೊತೆ ಬಂದು ನಿತ್ಯಾ ಇಬ್ಬರನ್ನು ರಕ್ಷಣೆ ಮಾಡ್ತಾಳೆ. ನಶೆಯಲ್ಲೆ ಮನೆ ಸೇರಿದ್ದಾರೆ ನಿಧಿ-ಕರ್ಣ. 

ಇದನ್ನೂ ಓದಿ:ಚಂದನಾ ಅನಂತಕೃಷ್ಣ ಮತ್ತೊಂದು ಪ್ರಯತ್ನ.. ಅಭಿಮಾನಿಗಳು ಫಿದಾ..! Video

karna kannada serial (4)

ಪ್ರೀತಿಯ ಸುರಿಮಳೆಯ ಮಾತುಗಳನ್ನಾಡಿರುವ ನಿಧಿ ಮತ್ತು ಕರ್ಣಕ್ಕೆ ತಾವು ನಶೆಯಲ್ಲಿ ತೇಲಾಡಿದ್ದು ಗೊತ್ತಿಲ್ಲ. ನಶೆಯು ಪ್ರೀತಿಯ ಅಮಲಾಗಿ ಸ್ಫೋಟಗೊಂಡಿರೋದು ಕೂಡ ಈ ಜೋಡಿಗೆ ಗೊತ್ತಾಗಿಲ್ಲ. ಇಬ್ಬರ ಬದುಕಲ್ಲಿ ಸದ್ಯ ಏನಾಗಿದೆ ಅನ್ನೋದನ್ನ ತಿಳಿಯದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ನಾಳೆಯಿಂದ ಮತ್ತೆ ಪ್ರಸಾರವಾಗಲಿರುವ ಸೀರಿಯಲ್ ಯಾವ ರೀತಿ ಟ್ವಿಸ್ಟ್ ಪಡೆದುಕೊಳ್ಳಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. 

ಇದನ್ನೂ ಓದಿ:ಕಿರುತೆರೆಗೆ ಎಂಟ್ರಿ ಕೊಟ್ಟ ಅವಿನಾಶ್​​ಗೆ ಅದ್ದೂರಿ ವೆಲ್​​ಕಮ್.. ವಸುದೇವ ಕುಟುಂಬದ ಕತೆ ಏನು..?

Advertisment

karna kannada serial (3)

ಈ ದೃಶ್ಯಕ್ಕೆ ಅಭಿಮಾನಿಗಳು ಥ್ರೀಲ್​ ಆಗಿದ್ರು. ಮತ್ತಷ್ಟು ಇಂತಹ ಸಂಚಿಕೆಗಳು ಬೇಕೇಬೇಕು ಅಂತಿದ್ದಾರೆ. ಒಟ್ನಲ್ಲಿ ಕರ್ಣನ ಮದುವೆಗೆ ಅಪ್ಪ ಒಪ್ಪಿಗೆ ಕೊಟ್ಟಿದ್ದು, ನಿಧಿ-ಕರ್ಣ ಪ್ರೇಮ ಕಲ್ಯಾಣಕ್ಕೆ ಮಂಟಪ ಸಿದ್ಧವಾಗ್ತಿದೆ. ಈ ನಡುವೆ ನಿತ್ಯಾ ಕಥೆ ಏನು? ತಿಳಿಯೋಕೆ ಕರ್ಣ ಸೀರಿಯಲ್​ ನೋಡ್ಬಹುದು.

ಇದನ್ನೂ ಓದಿ: ಸುಬ್ಬು ಮನ ಗೆದ್ದ ಶ್ರಾವಣಿ.. ಮದುವೆ ಸಂಭ್ರಮದ ಮೇಕಿಂಗ್ ಝಲಕ್ -Photos

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bhavya gowda kiran raj, karna serial
Advertisment
Advertisment
Advertisment