/newsfirstlive-kannada/media/media_files/2025/09/18/ca2-2025-09-18-14-20-53.jpg)
ಚಂದನದ ಗೊಂಬೆಯಂತಿರೋ ಚಂದನಾ ಅನಂತಕೃಷ್ಣ ಹೊಸ ಪ್ರಯತ್ನ ಮಾಡೋದ್ರಲ್ಲಿ ಸದಾ ಮುಂದೆ ಇರ್ತಾರೆ. ಕಲೆಗೆ ಬೆಲೆ ಕೊಡೋ ಕರುನಾಡ ಮುದ್ದು ಚಿನ್ನು ಮರಿ ಹೊಸ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇತ್ತೀಚಿಗೆ ಪಹಲ್ಗಾಮ್ ದಾಳಿ ಕುರಿತು ಆಲ್ಬಂ ಸಾಂಗ್ ನಿರ್ಮಿಸಿ, ನಿರ್ಮಾಪಕಿಯಾಗಿಯೂ ಸಹ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇನ್ ಹಿಸ್ ನೇಮ್ ಹೆಸರನಲ್ಲಿ ರಿಲೀಸ್ ಆದ ವಿಡಿಯೋಗೆ ಭಾರಿ ಮೆಚ್ಚುಗೆ ಸಿಕ್ಕಿದ್ದು, ಚಂದನಾ ಕೆಲಸವನ್ನ ಕರುನಾಡ ಚಕ್ರವರ್ತಿ ಸುದೀಪ್ ಕೂಡ ಹಾಡಿ ಹೋಗಳಿದ್ರು.
ಇದನ್ನೂ ಓದಿ: ಕಿಚ್ಚ ಸುದೀಪ್ ವಿರುದ್ಧ ವೈಯಕ್ತಿಕ ನಿಂದನೆ -ಪೊಲೀಸ್ ಆಯುಕ್ತರಿಗೆ ದೂರು
ಈ ಬೆನ್ನಲ್ಲೇ ಮತ್ತೊಂದು ಹೊಸ ಪ್ರಯತ್ನವನ್ನು ನಟಿ ಚಂದನ ಮಾಡಿದ್ದಾರೆ. ಇಳಕಲ್ ಸೀರೆಯಲ್ಲಿ ಸಾಂಪ್ರದಾಯಕ ಕಾಸ್ಟ್ಯೂಮ್ ಧರಿಸಿದ್ದು, ನಾಟ್ಯದ ಮೂಲಕ ಕೃಷ್ಣನನ್ನ ಆರಾಧಿಸಿದ್ದಾರೆ. ಬೆಳದಿಂಗಳ ಮೌನದಲ್ಲಿ ನಾನು ಕಾಯುತ್ತೇನೆ.. ಬೆಳಗಿನ ಮೊದಲ ಹೊಳಪಿನಲ್ಲಿ ಕರಗುತ್ತಿರುವ ಕನಸು. ಕೃಷ್ಣ ಕೃಷ್ಣ ಕೃಷ್ಣ ಎಂದು ಶ್ರೀಕೃಷ್ಣನನ್ನ ಆರಾಧಿಸೋ ಮುದ್ದು ಚಲುವೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಸೊಗಸಾದ ಹಾವಭಾವಕ್ಕೆ ವೀಕ್ಷಕರು ಮನಸೋತಿದ್ದಾರೆ.
ಇದನ್ನೂ ಓದಿ:ಅಕ್ಕ-ತಮ್ಮನ ಜಗಳ! ಠಾಣೆ ಮೆಟ್ಟಿಲೇರಿದ ಬಿಗ್ಬಾಸ್ ಖ್ಯಾತಿಯ ರಂಜಿತ್
ವೀಕ್ಷಕರ ಮನೆಮಗಳಾಗಿರೋ ಚಂದನಾ ಲಕ್ಮೀ ನಿವಾಸದ ಚಿನ್ನುಮರಿ ಅಂತಲೇ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ಸೈಕೋ ಜಯಂತ್ನ ಹಿನ್ನಲೆ ಕೆದಕುತ್ತಿರೋ ಚಿನ್ನುಮರಿಗೆ ಜಯಂತ್ ಶಾಕ್ ಕೊಟ್ಟಿದ್ದಾನೆ. ಇವತ್ತಿನ ಸಂಚಿಕೆ ಸಖತ್ ಇಂಟ್ರಸ್ಟಿಂಗ್ ಆಗಿದೆ.
ಒಟ್ನಲ್ಲಿ ಹಾಡು, ನೃತ್ಯ, ಅಭಿನಯ ಎಲ್ಲದ್ರಲ್ಲೂ ಭೇಷ್ ಎನಿಸಿಕೊಂಡಿರೋ ಚಂದನಾ ಕಡೆಯಿಂದ ಮತ್ತಷ್ಟು ವಿಭಿನ್ನ ಪ್ರಯತ್ನಗಳು ಮೂಡಿಬರಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.