Advertisment

ಕೊಲ್ಲೂರು ಮೂಕಾಂಬಿಕಾ ದೇವಿ ಭಕ್ತರಿಗೆ ಸರ್ಕಾರದಿಂದ ಗುಡ್​ ನ್ಯೂಸ್..!

ತಾಯಿ ಮೂಕಾಂಬಿಕಾ ದೇವಿಯ ಭಕ್ತರಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಲು ರೆಡಿಯಾಗ್ತಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

author-image
Ganesh Kerekuli
Updated On
Advertisment

ತಾಯಿ ಮೂಕಾಂಬಿಕಾ ದೇವಿಯ ಭಕ್ತರಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಲು ರೆಡಿಯಾಗ್ತಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸಿ ಮೂಲಭೂತ ಸೌಕರ್ಯಗಳ ಪಟ್ಟಿ ನೀಡುವಂತೆ ಸೂಚನೆಯನ್ನ ಕೂಡ ಈಗಾಗ್ಲೆ ಕೊಟ್ಟಾಗಿದೆ.

Advertisment

ಇದನ್ನೂ ಓದಿ: ದಿಶಾ ಪಠಾನಿ ಮನೆ ಮೇಲೆ ಫೈರಿಂಗ್ ಕೇಸ್​.. ಇಬ್ಬರು ಆರೋಪಿಗಳ ಎನ್​ಕೌಂಟರ್​..!

ಮೂಕಾಂಬಿಕಾ ದೇವಿಯ ಭಕ್ತರೆ.. ದಯವಿಟ್ಟು ಗಮನಿಸಿ.. ಕರಾವಳಿ ಭಾಗದ ಉಡುಪಿ ಜಿಲ್ಲೆಯ ಜಗತ್ ಪ್ರಸಿದ್ಧ ದೇವಾಲಯ ಆಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡಲು ಕೈ ಹಾಕಿದ್ದು, ಕೊಲ್ಲೂರು ಶ್ರೀಕ್ಷೇತ್ರದ ಅಭಿವೃದ್ಧಿಯತ್ತ ಸರ್ಕಾರದ ಚಿತ್ತ ಹರಿದಿದೆ.

ದೇಗುಲದ ಅಭಿವೃದ್ಧಿಗೆ ಸಕಲ ಸಿದ್ಧತೆ ನಡೆಸಿದೆ ರಾಜ್ಯ ಸರ್ಕಾರ 

ಪ್ರತಿ ವರ್ಷ ಸುಮಾರು 45  ರಿಂದ 50 ಲಕ್ಷ ಭಕ್ತರು ಆಗಮಿಸುವ ಧಾರ್ಮಿಕ ಕೇಂದ್ರದಲ್ಲಿ ಮೂಲ ಸೌಕರ್ಯಗಳ ನೀಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಕೆ ಸರ್ಕಾರ ಮುಂದಾಗಿದೆ. ಹಾಗಾಗಿ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.

Advertisment

ಇದನ್ನೂ ಓದಿ:ರಾಜ್ಯ ಬಿಜೆಪಿಯನ್ನ ಸಂಘಟಿಸಲು ಎಂಟ್ರಿ ಕೊಟ್ಟ ಸಂಘ ಪರಿವಾರ.. 2 ದಿನ ನಾಯಕರಿಗೆ ಕ್ಲಾಸ್..!

ಬೈಕ್ ಟ್ಯಾಕ್ಸಿ ಸೇವೆಗೆ ಶೀಘ್ರದಲ್ಲೇ ಬ್ರೇಕ್​..? ಓಲಾ, ಉಬರ್​​ಗೆ ಟೆನ್ಶನ್ ಹೆಚ್ಚಿಸಿದ ರಾಜ್ಯ ಸರ್ಕಾರ


ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಈ ತಿಂಗಳ 3೦ ರೊಳಗೆ ಆಡಳಿತ ಮಂಡಳಿ ಏನು ತೀರ್ಮಾನ ತೆಗೆದುಕೊಳ್ಳುತ್ತೋ, ಅದನ್ನ ಅನುಮೋದನೆ ಪಡೆದು ಸರ್ಕಾರಕ್ಕೆ ಕಳಿಯಿಸಿ ಅಂತ ಹೇಳಿದ್ದೀನಿ ತಾಕೀತು ಮಾಡಿದ್ದಾರೆ. ಅಲ್ಲದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳ ತಂಡ, ಆರ್ಕಿಟೆಕ್ಟ್, ಪಂಡಿತರು ಹೋಗಿ ಕೊಲ್ಲೂರಿನಲ್ಲಿ ಏನೇನು ಕಾಮಗಾರಿ ಆಗಬೇಕು ಅಂತ ಸಮಿತಿ ಹೇಳಿರೋದನ್ನ ವೀಕ್ಷಣೆ ಮಾಡಿ ಎಂದಿದ್ದಾರೆ.

Advertisment

ಇದನ್ನೂ ಓದಿ:ಬುರುಡೆ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

ಪ್ರಮುಖವಾಗಿ ಭಕ್ತರಿಗೆ ಅವಶ್ಯಕತೆ ಇರುವ ವಸತಿ.. ದಾಸೋಹ.. ರಸ್ತೆ.. ಸ್ನಾನಗೃಹ.. ಒಳಚರಂಡಿ ವ್ಯವಸ್ಥೆ.. ರಥ ಬೀದಿ ಆಶ್ಲೇಷ ಭವನ ಸೇರಿದಂತೆ ದೇವಸ್ಥಾನ ಸಿಬ್ಬಂದಿಗೆ ಕ್ವಾಟ್ರಸ್  ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ರಾಮಲಿಂಗರೆಡ್ಡಿ ಸೂಚಿಸಿದ್ದಾರೆ. ಒಟ್ನಲ್ಲಿ ಸರ್ಕಾರ ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಡಿ ಬರುವ ದೇವಾಲಯಗಳ ಅಭಿವೃದ್ಧಿಗೆ ಸಾಕಷ್ಟು ಸರ್ಕಸ್ ಮಾಡ್ತಿದೆ. ಆ ಮೂಲಕ ಭಕ್ತರಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡೆಸುವ ಮೂಲಕ ಮತ್ತಷ್ಟು ಭಕ್ತರನ್ನ ಸೆಳೆಯೋಕೆ ಪ್ಲಾನ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ರಾತ್ರಿ ಭಾರೀ ಮಳೆ.. ಜನ ಜೀವನ ಅಸ್ತವ್ಯಸ್ತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kollur Mookambika Devi Ramalinga Reddy
Advertisment
Advertisment
Advertisment