Advertisment

ಬುರುಡೆ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

ಬಂಗ್ಲಗುಡ್ಡದಲ್ಲಿ ಅಸ್ಥಿಪಂಜರಗಳು ಪತ್ತೆ.. ಇಂದು ಕೂಡ ಬಂಗ್ಲಗಡ್ಡದಲ್ಲಿ ಮುಂದುವರಿಯಲಿದೆ ಎಸ್​ಐಟಿ ಮಹಜರು.. ಬಂಗ್ಲಗುಡ್ಡದ ಐದು ಸ್ಥಳಗಳಲ್ಲಿ ಸಿಕ್ಕಿರುವ ಕಳೇಬರ.. ಮತ್ತೊಂದೆಡೆ ಮಹೇಶ್​ ತಿಮ್ಮರೋಡಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

author-image
Ganesh Kerekuli
Soujayna vithal gowda
Advertisment
  • ಬಂಗ್ಲಗುಡ್ಡದಲ್ಲಿ ಎಸ್​ಐಟಿ ಶೋಧದ ವೇಳೆ ಕಳೇಬರಗಳು ಪತ್ತೆ
  • ಮೂಳೆ ಚೂರುಗಳು, ಬಟ್ಟೆ ಪತ್ತೆ.. ಮಣ್ಣಿನ ಸ್ಯಾಂಪಲ್‌ ರವಾನೆ
  • ತಿಮರೋಡಿ ವಿರುದ್ಧ ಆರ್ಮ್ಸ್‌ ಆಕ್ಟ್‌ ಅಡಿಯಲ್ಲಿ ಎಫ್‌ಐಆರ್‌

ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಹೊಸ ಮಜಲಿಗೆ ಹೊರಳಿದೆ. ಚಿನ್ನಯ್ಯನ ನಂತರ ಬಂಗ್ಲೆಗುಡ್ಡೆಯಲ್ಲಿ ಎರಡನೇ ಹಂತದ ಶೋಧ ಕಾರ್ಯಕೈಗೊಂಡಿರುವ ಎಸ್​ಐಟಿಗೆ ಶಾಕ್​ ಆಗಿದೆ.

Advertisment

ಕೆಲ ದಿನಗಳ ಹಿಂದೆ.. ಸೌಜನ್ಯ ಅವರ ಮಾವ ವಿಠಲಗೌಡ.. ಸ್ಥಳಮಹಜರು ವೇಳೆ  ಅಸ್ಥಿಪಂಜರಗಳು ಸಿಕ್ಕಿವೆ ಎಂದು ಸ್ಫೋಟಕ ಬಾಂಬ್​ ಸಿಡಿಸಿದ್ರು.. ಈ ಹಿನ್ನೆಲೆಯಲ್ಲಿ 15 ಎಕರೆ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ನಡೆಸಿದ್ದು, ಸೌಜನ್ಯಳ ಮಾವ ವಿಠ್ಠಲ ಗೌಡ ಹೇಳಿದ್ದು ನಿಜ ಎಂದು ಮಾತುಗಳು ಕೇಳಿ ಬರ್ತಿವೆ.
ಕಳೇಬರಗಳು ಪತ್ತೆ

ಇದನ್ನೂ ಓದಿ:ತೆಲಂಗಾಣದ ಇಂಜಿನಿಯರ್ ಬಳಿ 2 ಕೋಟಿ ಕ್ಯಾಶ್ ಜಫ್ತಿ, ಬರೋಬ್ಬರಿ 6.5 ಕೋಟಿ ಆಕ್ರಮ ಆಸ್ತಿ ಪತ್ತೆ!!

DHARMASTHALA

Advertisment

ಚಿನ್ನಯ್ಯನ ಬಳಿಕ ಇದೀಗ ಎಸ್​ಐಟಿ ಎರಡನೇ ಹಂತದಲ್ಲಿ ಬಂಗ್ಲೆಗುಡ್ಡೆ ಶೋಧಕಾರ್ಯಕ್ಕೆ ಇಳಿದಿದೆ. ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ಬಂಗ್ಲೆ ಗುಡ್ದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದು. ಈ ವೈಕಿ.. 5 ಸ್ಥಳಗಳಲ್ಲಿ ಮೂಳೆಗಳು ಮಾತ್ರವಲ್ಲ ತಲೆ ಬುರುಡೆಯೂ ಸಹಿತ ಸಿಕ್ಕಿದೆ. ಸಿಕ್ಕ ಅಸ್ಥಿ ಪಂಜರಗಳನ್ನು ಪೈಪ್​ ಮತ್ತು ಇತರೆ ವಸ್ತುಗಳನ್ನ ಸಂಗ್ರಹಿಸಿ, ಇವುಗಳೆನ್ನಲ್ಲಾ ಸುರಕ್ಷಿತವಾಗಿ ಎವುಗಳನ್ನೆಲ್ಲ ಸಂಗ್ರಹಿಸಿ. ಲ್ಯಾಬ್​ ಟೆಸ್ಟ್​ಗೆ ಕಳಿಸಲಾಗಿದೆ. ಇನ್ನು ಅಸ್ಥಿ ಪಂಜರದ ಜೊತೆಗೆ ಐಡಿ ಕಾರ್ಡ್​, ಮಹಿಳೆಯರ ವಸ್ತ್ರಗಳು ಸಿಕ್ಕಿವೆ. ಹೀಗಾಗಿ ಇವತ್ತು ಕೂಡ ಬಂಗ್ಲಗುಡ್ಡದಲ್ಲೇ ಎಸ್​ಐಟಿ ಶೋಧ ನಡೆಸುವ ಸಾಧ್ಯತೆ ಇದೆ. 

ತಿಮರೋಡಿ ವಿರುದ್ಧ ಆರ್ಮ್ಸ್‌ ಆಕ್ಟ್‌ ಅಡಿಯಲ್ಲಿ FIR

ಧರ್ಮಸ್ಥಳದ ಬುರುಡೆ ಕೇಸ್​ ಸಂಬಂಧ ಎಸ್​ಐಟಿ ತನಿಖೆ 2.O ಬಿಗ್​ ಟ್ವಿಸ್ಟ್​ ನೀಡಿದೆ. ಇದರ ನಡುವೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೊಸ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಎಸ್‌ಐಟಿ ಶೋಧ ನಡೆಸಿದ ವೇಳೆ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 16 ರಂದು ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್ ಅವರು  ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ:ಕಿರುತೆರೆಗೆ ಎಂಟ್ರಿ ಕೊಟ್ಟ ಅವಿನಾಶ್​​ಗೆ ಅದ್ದೂರಿ ವೆಲ್​​ಕಮ್.. ವಸುದೇವ ಕುಟುಂಬದ ಕತೆ ಏನು..?

Advertisment

CHINNAYYA

ತಿಮರೋಡಿ ತಮ್ಮ ಮನೆಯಲ್ಲಿ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಮುಂದಿನ ತನಿಖೆ ನಡೆಸಬೇಕೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಎಫ್​ಐಆರ್​ ದಾಖಲಾಗಿದೆ.
ಅದೇನೆ ಇರಲಿ.. ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರ, ಮೂಳೆಗಳು ತನಿಖೆಯನ್ನ ಹೊಸ ದಿಕ್ಕಿಗೆ ಹೊರಳಿಸಿದ್ದು, ಇದರಿಂದ ಹೊಸ ಕಥೆ ಹೊರಗೆ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ರಾತ್ರಿ ಭಾರೀ ಮಳೆ.. ಜನ ಜೀವನ ಅಸ್ತವ್ಯಸ್ತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala case, sameer md Dharmasthala case dharmasthala Chenna Dharmasthala
Advertisment
Advertisment
Advertisment