/newsfirstlive-kannada/media/media_files/2025/09/18/disha-patani-2025-09-18-07-54-40.jpg)
ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಘಟನೆಯಲ್ಲಿ ಇಬ್ಬರು ಆರೋಪಿಗಳ ಹೆಸರುಗಳು ಬೆಳಕಿಗೆ ಬಂದಿತ್ತು. ಈ ಗುಂಡು ಹಾರಿಸಿದ ಪ್ರಕರಣದಲ್ಲಿ ಎನ್‌ಕೌಂಟರ್ ನಡೆದಿದೆ.
ಉತ್ತರ ಪ್ರದೇಶ ಬರೇಲಿಯಲ್ಲಿರೋ ದಿಶಾ ಪಟಾನಿ ಮನೆ ಮೇಲೆ ನಡೆದ ಗುಂಡಿನ ದಾಳಿಯ ಹೊಣೆಯನ್ನ ಗೋಲ್ಡಿ ಬ್ರಾರ್ ಗ್ಯಾಂಗ್ ಹೊತ್ತಿತ್ತು. ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ದುಷ್ಕರ್ಮಿಗಳ ಜೀವನ ಕೂಡ ಗನ್​ ಪಾಯಿಂಟ್​ನಲ್ಲಿ ಮುಕ್ತಾಯವಾಗಿದೆ.
ದುಷ್ಕರ್ಮಿಗಳ ಎನ್‌ಕೌಂಟರ್
ದಿಶಾ ಪಟಾನಿ ಸಹೋದರಿ ಖುಷ್ಬೂ ಪಟಾನಿ.. ಸಂತರಾದ ಪ್ರೇಮಾನಂದ ಮಹಾರಾಜ್ ಮತ್ತು ಅನಿದುದ್ಧಾಚಾರ್ಯ ಮಹಾರಾಜ್ ವಿರುದ್ಧ ನಿಂದನಾತ್ಮಕ ಹೇಳಿಕೆ ಕೊಟ್ಟಿದ್ದರು. ಇದರಿಂದ ಸನಾತನ ಧರ್ಮಕ್ಕೆ ಅವಮಾನವಾಗಿದೆ ಎಂದು ಆರೋಪಿಸಿ ಈ ಕೃತ್ಯವೆಸಗಿರೋ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ರೋಹ್ಟಕ್ ಮೂಲದ ರವೀಂದ್ರ ಅಲಿಯಾಸ್ ಕಲ್ಲು.. ಮತ್ತೊಬ್ಬ ಹರಿಯಾಣದ ಸೋನಿಪತ್ ನಿವಾಸಿ ಅರುಣ್ ರೋಹಿತ್ ಗೋದಾರ.. ಇವರಿಬ್ಬರೂ ಗೋಲ್ಡಿ ಬ್ರಾರ್ ಗ್ಯಾಂಗ್‌ನಲ್ಲಿ ಸಕ್ರಿಯ ಸದಸ್ಯರು. ಜೊತೆಗೆ ಬಹು ಕ್ರಿಮಿನಲ್ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್‌ಗಳು
ಘಟನೆ ಬೆನ್ನಲ್ಲೇ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ನೋಯ್ಡಾ ಘಟಕ ಹಾಗೂ ದೆಹಲಿ ಪೊಲೀಸರ ಅಪರಾಧ ಗುಪ್ತಚರ ಘಟಕ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿತ್ತು. ಗಾಜಿಯಾಬಾದ್‌ನ ಟ್ರೋನಿಕಾ ಸಿಟಿ ಬಳಿ ಇಬ್ಬರೂ ದುಷ್ಕರ್ಮಿಗಳು ಅಡಗಿರುವ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ, ಶರಣಾಗುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಬೆಲೆ ಕೊಡದ ಹಂತಕರು, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಶಂಕಿತರು ಪೊಲೀಸರ ಗುಂಡೇಟು ತಿಂದು ಮಸಣ ಸೇರಿದ್ದಾರೆ.
ಘಟನಾ ಸ್ಥಳದಿಂದ, ಅಧಿಕಾರಿಗಳು ಗ್ಲಾಕ್ ಪಿಸ್ತೂಲ್, ಜಿಗಾನಾ ಪಿಸ್ತೂಲ್ ಮತ್ತು ಬಹು ಲೈವ್ ಕಾರ್ಟ್ರಿಡ್ಜ್‌ಗಳು ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅದ್ಹೇನೆ ಇರಲಿ ಗನ್​ ಹಿಡಿದು ಅಟ್ಟಹಾಸ ಮೆರೆದವರು.. ಅದೇ ಗನ್​ನಿಂದ ಪ್ರಾಣ ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us