/newsfirstlive-kannada/media/media_files/2025/09/18/bigg-boss-ranjith-kumar-2025-09-18-13-31-55.jpg)
ಬೆಂಗಳೂರು: ಅಕ್ಕ-ತಮ್ಮನ ಜಗಳದಿಂದಾಗಿ ಬಿಗ್ಬಾಸ್ ಖ್ಯಾತೀಯ ರಂಜಿತ್ ಕುಮಾರ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರಣ ಇಷ್ಟೇ, ತಂದೆಯವರ ಫ್ಲಾಟ್ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಪರಸ್ಪರ ದೂರು ನೀಡಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ನಂತರ ಪೊಲೀಸರು ಎನ್ಸಿಆರ್ ದಾಖಲು ಮಾಡಿ ಕಳುಹಿಸಿದ್ದಾರೆ. ಇದು ಫ್ಲಾಟ್ ವಿಚಾರ (ಸಿವಿಲ್ ವ್ಯಾಜ್ಯ). ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:WCPL ಟ್ರೋಫಿಗೆ ಮುತ್ತಿಟ್ಟ ಶ್ರೇಯಂಕ ಪಾಟೀಲ್ ಟೀಂ -ಹ್ಯಾಟ್ರಿಕ್ ಕಪ್ ಹೊಡೆದ ರಾಯಲ್ಸ್..!
ಈ ಹಿಂದೆ ಇಡೀ ಕುಟುಂಬ ಅದೇ ಫ್ಲಾಟ್ನಲ್ಲಿ ವಾಸವಿತ್ತು. ಇತ್ತೀಚೆಗೆ ಅಕ್ಕ ಬೇರೆ ಹೋಗಿದ್ದಾರೆ. ಈ ಮನೆಯಲ್ಲಿ ತನಗೂ ಪಾಲಿದೆ ಎಂದು ಇಬ್ಬರು ವಾದ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಬ್ಬರಿಗೂ ಬುದ್ಧಿ ಹೇಳಿ ಕೋರ್ಟ್ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಗಲಾಟೆ ದೃಶ್ಯ ವೈರಲ್..!
ರಂಜಿತ್ ಅವರು ತಮ್ಮ ಸಹೋದರಿ ಜೊತೆ ವಾಗ್ವಾದ ಮಾಡ್ತಿರುವ ವಿಡಿಯೋ ವೈರಲ್ ಆಗಿದೆ. ರಂಜಿತ್ ಮಾತ್ರವಲ್ಲ, ರಂಜಿತ್ ಪತ್ನಿ ಮಾನಸ ಗೌಡ ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಗಲಾಟೆ ವೇಳೆ ಬಟ್ಟೆ ವಿಚಾರವಾಗಿ ರಂಜಿತ್ ಅಕ್ಕ, ಮಾನಸಗೆ ಹೊಡೆದಿದ್ದಾರೆ ಅಂತಾ ದೂರುತ್ತಿರೋದು ವಿಡಿಯೋದಲ್ಲಿ ಕಾಣ್ತಿದೆ. ಇನ್ನು ವಿಡಿಯೋದಲ್ಲಿ ಬಟ್ಟೆ ಹಾಗೂ ಅಡುಗೆ ಮನೆ ವಿಚಾರಕ್ಕೆ ಅಶ್ಲೀಲವಾಗಿ ಬೈದಾಡಿಕೊಂಡು ಕಿತ್ತಾಡಿದ್ದಾರೆ.
ಇದನ್ನೂ ಓದಿ:ಕಿರುತೆರೆಗೆ ಎಂಟ್ರಿ ಕೊಟ್ಟ ಅವಿನಾಶ್ಗೆ ಅದ್ದೂರಿ ವೆಲ್ಕಮ್.. ವಸುದೇವ ಕುಟುಂಬದ ಕತೆ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ