/newsfirstlive-kannada/media/media_files/2025/11/05/rahul-gandhi-2025-11-05-08-46-34.jpg)
ಬಿಹಾರ ವಿಧಾನಸಭೆ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.. ನಿನ್ನೆ ಬಹಿರಂಗ ಪ್ರಚಾರ ಅಂತ್ಯ ಆಗಿದೆ.. ನಾಳೆ ಮೊದಲ ಹಂತಕ್ಕೆ ಮತದಾನ ನಡೆಯಲಿದೆ.. ಕಳೆದ ಬಾರಿ ಈ ಭಾಗದಲ್ಲಿ ಮ್ಯಾಜಿಕ್​​ ಮಾಡಿದ್ದ ಮಹಾಘಟ್ಬಂಧನ್​​, ಪರಂಪರೆ ಮುಂದುವರಿಸುತ್ತಾ ಅನ್ನೋ ಕುತೂಹಲ ಇದೆ.. ಈ ಮಧ್ಯೆ ರಾಹುಲ್​​ ಗಾಂಧಿ, ಸೇನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಟೀಕೆಗೆ ಗುರಿಯಾಗಿದ್ದಾರೆ..
ಬಿಹಾರ.. ಈ ಬಾರಿ ಯಾರಿಗೆ ಗೆಲುವಿನ ಹಾರ? ದಶಕಗಳ ಕಾಲ ನಿತೀಶ್​​ ಕಪಿಮುಷ್ಠಿಯಲ್ಲಿರುವ ಮಗಧ ನಾಡಿನ ಕಬ್ಜಾಗೆ ಲಾಲೂ ಪಡೆ ದಾಂಗುಡಿ ಇಟ್ಟಿದೆ.. ಮಾಡು ಇಲ್ಲವೇ ಮಡಿ ಹೋರಾಟಕ್ಕಾಗಿ ಹಸ್ತಕ್ಕೆ ಲ್ಯಾಟಿನ್​​​ ಬೆಳಕಿನ ಆಶ್ರಯ ನೀಡ್ತಿರುವ ತೇಜಸ್ವಿ, ಚಾಚಾ ನಿತೀಶ್​ಗೆ ಟಕ್ಕರ್​​ ನೀಡ್ತಿದ್ದಾರೆ.. ಆದ್ರೆ, ನಿತೀಶ್​​ ಬೆನ್ನಿಗೆ ಬಲವಾಗಿ ನಿಂತ ನಮೋ-ಶಾ ಜೋಡಿ, ಗೆಲುವಿನ ವಿಶ್ವಾಸದಲ್ಲಿದೆ..
ಇದನ್ನೂ ಓದಿ: ಕಬ್ಬು ಬೆಳೆಗಾರರ ರಣಕಹಳೆ.. ರೈತರ ಕಿಚ್ಚಿಗೆ ಮಣಿದು ಸಂಧಾನಕ್ಕೆ ಕಳುಹಿಸಿದ ಸರ್ಕಾರ
ಅಂದ್ಹಾಗೆ ಬಿಹಾರ ವಿಧಾನಸಭೆ ಎಲೆಕ್ಷನ್​​​ನ ಮೊದಲ ಹಂತದ ಮತದಾನಕ್ಕೆ ಸಿದ್ಧತೆ ಶುರುವಾಗಿದೆ.. 121 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ನಿನ್ನೆ ಸಂಜೆ ಅಂತ್ಯವಾಗಿದ್ದು, ನಾಳೆ ಗುರುವಾರ ಮತದಾನ ನಡೆಯಲಿದೆ.. ಕೊನೆ ದಿನವಾದ ನಿನ್ನೆ ಎನ್​ಡಿಎ - ಇಂಡಿಯಾ ಕೂಟದ ನಾಯಕರು ಮತದಾರರನ್ನ ಸೆಳೆಯಲು ಕೊನೆ ಕಸರತ್ತು ನಡೆಸಿದ್ರು.. ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ಪ್ರಚಾರ ಸಭೆಗಳನ್ನ ಉದ್ದೇಶಿಸಿ ಮಾತನಾಡಿದ್ರು..
ರಾಹುಲ್​​​ ಗಾಂಧಿ ಹೊಸ ವಿವಾದ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.. ಈ ಬಾರಿ ಭಾರತೀಯ ಸೇನೆಯನ್ನ ಗುರಿಯಾಗಿಸಿ ಜಾತಿ ಅಸ್ತ್ರ ಬಿಟ್ಟಿದ್ದಾರೆ.. ಶೇ.10 ರಷ್ಟು ಜನರಿಂದ ಭಾರತೀಯ ಸೇನೆ ನಿಯಂತ್ರಿಸಲ್ಪಡ್ತಿದೆ ಅಂತ ಕಾಂಟ್ರವರ್ಸಿ ಕ್ರಿಯೇಟ್​​ ಮಾಡ್ಕೊಂಡಿದ್ದಾರೆ.. ಬಿಹಾರದ ಔರಂಗಾಬಾದ್‌ನ ಱಲಿಯಲ್ಲಿ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್​​, ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಮೇಲ್ಜಾತಿ ವ್ಯಕ್ತಿಗಳು ಪ್ರಾಬಲ್ಯ ಹೊಂದಿದ್ದಾರೆ.. ಇದ್ರಲ್ಲಿ ಸೇಣೇಯೂ ಸೇರಿದೆ ಅಂತ ವಿವಾದ ಸೃಷ್ಟಿಸಿದ್ರು..
ಎಲ್ಲಾ ನೌಕರಿ ಮೇಲ್ಜಾತಿಗೆ ಸಿಗುತ್ತೆ. ಅಧಿಕಾರಶಾಹಿಯಲ್ಲೂ ಅವರೇ ಸಿಗ್ತಾರೆ. ನ್ಯಾಯಾಂಗವನ್ನೂ ನೋಡಿ. ಅಲ್ಲೂ ಉನ್ನತ ಅವಕಾಶಗಳನ್ನು ಪಡೆಯುತ್ತಾರೆ. ಸೇನೆಯಲ್ಲೂ ಅವರದ್ದೆ ಹಿಡಿತ ಇದೆ. ಆದ್ರೆ 90% ಜನಸಂಖ್ಯೆ ಇರುವ ಅವರು ಎಲ್ಲೂ ಸಿಗೋದಿಲ್ಲ.
- ರಾಹುಲ್ ಗಾಂಧಿ, ಲೋಕಸಭಾ ವಿಪಕ್ಷ ನಾಯಕ
ರಾಹುಲ್​ ಗಾಂಧಿ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.. ರಾಹುಲ್​​​ ಪ್ರಚಾರ ಮಾಡಿದಷ್ಟು ಎನ್​​ಡಿಎಗೆ ಲಾಭ ಅಂತ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಕುಟುಕಿದ್ದಾರೆ.
ಬಿಹಾರದಲ್ಲಿ ನಿರ್ಣಾಯಕ ಆಟ!
- 2020ರ ಎಲೆಕ್ಷನ್​​​ನಲ್ಲಿ ಮಹಾಘಟ್ಬಂಧನ್​​​ ಪಡೆ ಅತ್ಯುತ್ತಮ ಸಾಧನೆ
- ಮೊದಲ ಹಂತದ 121 ಸ್ಥಾನಗಳ ಪೈಕಿ 63 ಕ್ಷೇತ್ರಗಳನ್ನ ಗೆದ್ದಿದ್ದ MGB
- ಈ ಪ್ರದೇಶದಲ್ಲಿ ಗಮನಾರ್ಹ ನೆಲೆಯನ್ನ ಪಡೆದ್ಕೊಂಡಿದ್ದ ಇಂಡಿ ಕೂಟ
- NDA ಸಹ 55 ಸ್ಥಾನಗಳು, ಇತರರು ಮೂರು ಸ್ಥಾನಗಳನ್ನ ಪಡೆದಿದ್ರು
- ದಕ್ಷಿಣ ಮತ್ತು ಮಧ್ಯ ಬಿಹಾರದ ಈ ಪ್ರದೇಶವು MGBಗೆ ನಿರ್ಣಾಯಕ
- ಕಳೆದ ಬಾರಿ ಉಳಿದ ಭಾಗದಲ್ಲಿ ಎನ್​ಡಿಎ ಕೂಟ ಸ್ಪಷ್ಟ ಬಹುಮತ
- ಈ ಕಾರಣ ಬಿಜೆಪಿ ಅತಿರಥರು ಈ ಭಾಗದ ಮೇಲೆ ಹೆಚ್ಚು ಫೋಕಸ್
ಒಟ್ಟಾರೆ 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೀತಿದೆ.. ಮೊದಲ ಹಂತಕ್ಕೆ ನಾಳೆ ಮತದಾನವಿದ್ದು, ನವೆಂಬರ್​​ 11ರಂದು 2ನೇ ಹಂತವಿದೆ.. 14ರಂದು ಜನಾದೇಶ ಪ್ರಕಟ ಆಗಲಿದ್ದು, ದೇಶದ ಹಲವು ರಾಜ್ಯಗಳ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ..
ಇದನ್ನೂ ಓದಿ: ಒಂದೇ ಒಂದು ಥ್ರೋನಿಂದ ಬದಲಾಯ್ತು ಅದೃಷ್ಟ.. ವಿಶ್ವಕಪ್ ಗೆದ್ದ ತಾರೆಯರ ಹಾರ್ಟ್​ ಟಚಿಂಗ್ ಸ್ಟೋರಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us