/newsfirstlive-kannada/media/media_files/2025/08/25/rahul-mamkootathil-2025-08-25-16-15-35.jpg)
ಕೇರಳ ಪಾಲಕ್ಕಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ ಕೂಟತಿಲ್ (Rahul Mamkootathil) ವಿರುದ್ಧ ಪಕ್ಷ ಕಠಿಣ ನಿಲುವು ತೆಗೆದುಕೊಂಡಿದೆ. ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಮಮ್ ಕೂಟತಿಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.
ಉಪಚುನಾವಣೆಗೆ ಸಿದ್ಧ ಎಂದ ಕಾಂಗ್ರೆಸ್
ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷ ಕೇಳಿಲ್ಲ. ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್, ಶಾಸಕ ಹುದ್ದೆಯನ್ನು ತ್ಯಜಿಸುವ ಬಗ್ಗೆ ಚರ್ಚೆಗಳ ನಡುವೆ ಪಕ್ಷದ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಮುಂಬೈನ GSB ಮಂಡಲ ಗಣೇಶನಿಗೆ ಬರೋಬ್ಬರಿ ₹474 ಕೋಟಿ ಇನ್ಸೂರೆನ್ಸ್..
ರಾಹುಲ್ ಮಮ್ ಕೂಟತಿಲ್ ಪಕ್ಷದ ಅಥವಾ ಸಂಸದೀಯ ಪಕ್ಷದ ಸಭೆಯಲ್ಲಿ ಸದಸ್ಯರಾಗಿರುವುದಿಲ್ಲ. ತಕ್ಷಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಉಪಚುನಾವಣೆ ನಡೆಯಲಿದೆ ಎಂಬುವುದು ಪಕ್ಷದ ನಿಲುವು ಎಂದು ಸೂಚಿಸಲಾಗಿದೆ.
ಆರೋಪ ಕೇಳಿಬಂದ ಬೆನ್ನಲ್ಲೇ ಮಮ್ಕೂತಿಲ್ ಪ್ರಕರಣ ಕೇರಳದಲ್ಲಿ ರಾಜಕೀಯ ಸ್ವರೂಪಕ್ಕೆ ತಿರುಗಿತ್ತು. ಕಾಂಗ್ರೆಸ್ ಅಮಾನತು ಮಾಡುವ ಮೊದಲು ಬಿಜೆಪಿ ಪಾಲಕ್ಕಡ್ ಶಾಸಕ ಕಚೇರಿ ಎದುರು ಧರಣಿ ನಡೆಸಿತ್ತು. ಸಿಪಿಎಂ ಕೂಡ ಬೃಹತ್ ಪ್ರತಿಭಟನಾ ಱಲಿ ನಡೆಸಿತ್ತು.
ಇದನ್ನೂ ಓದಿ:BSNL ಬೆಸ್ಟ್ ರೀಚಾರ್ಜ್ ಪ್ಲಾನ್.. 147 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ