/newsfirstlive-kannada/media/media_files/2025/09/04/bijasal-tree-2025-09-04-22-06-17.jpg)
ಒಂದು ಪ್ರಾಚೀನ ಮರವು ರೈಲ್ವೆ ಇಲಾಖೆಗೆ ಭಾರೀ ತೊಂದರೆ ಉಂಟುಮಾಡಿದೆ. ಆರಂಭದಲ್ಲಿ ಇದನ್ನು ಅಧಿಕೃತವಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ಕೆಂಪು ಶ್ರೀಗಂಧದ ಮರವೆಂದು ನೋಂದಾಯಿಸಲಾಗಿತ್ತು. ಈಗ ಅದರ ನಿಜವಾದ ಮೌಲ್ಯ ಗೊತ್ತಾಗಿ ಬೆಚ್ಚಿ ಬೀಳುವಂತಾಗಿದೆ.
ಏನಿದು ಪ್ರಕರಣ..?
ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕರಣಕ್ಕೆ ಇಂಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ. ಒಂದು ಪ್ರಾಚೀನ ಮರದ ಮೌಲ್ಯ 1 ಕೋಟಿ ರೂಪಾಯಿ ಎಂದು ಲೆಕ್ಕ ಹಾಕಲಾಗಿತ್ತು. ನಂತರ ಅದರ ಮೌಲ್ಯ ಕೇವಲ 10,981 ರೂಪಾಯಿ ಅನ್ನೋದು ಗೊತ್ತಾಗಿದೆ. ಇದೀಗ ರೈಲ್ವೇ ಇಲಾಖೆ ರೈತನಿಗೆ ಪಾವತಿಸಿದ ಹೆಚ್ಚುವರಿ ಹಣ ಮರುಪಾವತಿಸುವಂತೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಮೆಟ್ಟಿಲೇರಿದೆ.
ಭೂ-ಸ್ವಾಧೀನ ವಿವಾದ
ವಾರ್ಧಾ-ಯವತ್ಮಲ್-ಪುಸಾದ್-ನಾಂದೇಡ್ ರೈಲ್ವೆ ಯೋಜನೆಗಾಗಿ ಖರ್ಶಿ ಗ್ರಾಮದ ಕೇಶವ್ ತುಕಾರಾಮ್ ಶಿಂಧೆ ಅನ್ನೋರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅಂತೆಯೇ 2018ರಲ್ಲಿ ಭೂಮಿಗೆ ಪರಿಹಾರ ನೀಡಲಾಯಿತು. ಆದರೆ ಮರಗಳು ಮತ್ತು ಇತರ ಆಸ್ತಿಗಳಿಗೆ ಪರಿಹಾರ ನೀಡೋದು ವಿಳಂಬವಾಗಿತ್ತು. ಹೀಗಾಗಿ ರೈತ ಕುಟುಂಬ ಸೂಕ್ತ ಪರಿಹಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿತ್ತು.
ಇದನ್ನೂ ಓದಿ:ಸಿದ್ದುಗೆ ಕ್ಲೀನ್ಚಿಟ್, ಡಿಕೆಶಿ ಬೆಂಬಲಿಗರ ವಿರುದ್ಧದ ಕೇಸ್ ವಾಪಸ್ - ಸಂಪುಟ ಸಭೆಯಲ್ಲಿ 10 ನಿರ್ಣಯಗಳು
ಅಧಿಕೃತ ದಾಖಲೆಗಳ ಪ್ರಕಾರ, ಅಲ್ಲಿದ್ದ ಮರ ಬೆಲೆಬಾಳುವ ರಕ್ತ ಚಂದನ ಎಂದು ಹೇಳುತ್ತವೆ. ಅದರ ಆಧಾರದ ಮೇಲೆ, ಹೈಕೋರ್ಟ್ ರೈಲ್ವೆ ಇಲಾಖೆಗೆ ಮಧ್ಯಂತರ ಪರಿಹಾರವಾಗಿ 1 ಕೋಟಿ ರೂಪಾಯಿ ಪಾವತಿಸಲು ಆದೇಶಿಸಿತು.
ಸತ್ಯ ಹೊರ ಬಂದಿದ್ದು ಹೇಗೆ..?
ಕೆಲವು ದಿನಗಳ ಹಿಂದೆ, ಪುಸಾದ್ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯನ್ನು ಮರದ ಮೇಲೆ ವೈಜ್ಞಾನಿಕ ಪರೀಕ್ಷೆ ನಡೆಸುವಂತೆ ಕೇಳಿಕೊಂಡರು. ಪರೀಕ್ಷೆಯಲ್ಲಿ ಆ ಮರವು ಬಿಜಸಲ್ (ಪ್ಟೆರೊಕಾರ್ಪಸ್ ಮಾರ್ಸುಪಿಯಂ) ಅನ್ನೋದು ದೃಢವಾಯಿತು. ಬಿಜಸಲ್ (bijasal tree) ಒಂದು ಸಾಮಾನ್ಯ ಮರವಾಗಿದೆ. ಅದರ ಮೌಲ್ಯ ಕೇವಲ 10,981 ರೂಪಾಯಿ. ಈ ಕಾರಣದಿಂದಾಗಿ ರೈಲ್ವೆ ಅಧಿಕಾರಿಗಳು 1 ಕೋಟಿ ರೂಪಾಯಿ ಹಿಂದಿರುಗಿಸುವಂತೆ ಕೊರಿ ಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಹಿಂದಿಕ್ಕಿದ ಗಿಲ್; ಯುವರಾಜನ ಬೆನ್ನ ಹಿಂದೆ ಬಿದ್ದ ಬಿಸಿಸಿಐ.. ಯಾಕೆ ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ