ಕೊಹ್ಲಿ ಹಿಂದಿಕ್ಕಿದ ಗಿಲ್; ಯುವರಾಜನ ಬೆನ್ನ ಹಿಂದೆ ಬಿದ್ದ ಬಿಸಿಸಿಐ.. ಯಾಕೆ ಗೊತ್ತಾ?

ಇಂಡಿಯನ್​ ಕ್ರಿಕೆಟ್​ ಅಂದ್ರೆ ಥಟ್​ ಅಂತಾ ನೆನೆಪಾಗ್ತಿದ್ದದ್ದು ವಿರಾಟ್​​ ಕೊಹ್ಲಿ. ಕ್ರಿಕೆಟ್​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ, ಮೈದಾನದಿಂದ ನಿಧಾನವಾಗಿ ದೂರಾಗ್ತಿದ್ದಾರೆ. ಗಿಲ್​ ಆ ಸ್ಥಾನ ಅತಿಕ್ರಮಿಸಿಕೊಳ್ತಿದ್ದಾರೆ. ಗಿಲ್​ ಕ್ರಿಕೆಟ್​ ಜಗತ್ತಿನ ಮುಂದಿನ ದೊರೆ ಅನ್ನೋದು ಸಾಬೀತಾಗಿದೆ.

author-image
Ganesh Kerekuli
shubman_gill (4)
Advertisment

ಇಂಡಿಯನ್​ ಕ್ರಿಕೆಟ್​ ಅಂದ್ರೆ ಇಷ್ಟು ದಿನ ಥಟ್​ ಅಂತಾ ನೆನೆಪಾಗ್ತಿದ್ದದ್ದು ವಿರಾಟ್​​ ಕೊಹ್ಲಿ. ಈಗ ಟ್ರೆಂಡ್​ ಬದಲಾಗ್ತಿದೆ. ಕ್ರಿಕೆಟ್​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ, ಮೈದಾನದಿಂದ ನಿಧಾನವಾಗಿ ದೂರಾಗ್ತಿದ್ದಾರೆ. ಯುವರಾಜ್​ ಶುಭ್​ಮನ್​ ಗಿಲ್​ ಆ ಸ್ಥಾನ ಅತಿಕ್ರಮಿಸಿಕೊಳ್ತಿದ್ದಾರೆ. ಗಿಲ್​ ಕ್ರಿಕೆಟ್​ ಜಗತ್ತಿನ ಮುಂದಿನ ದೊರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 

ಇದನ್ನೂ ಓದಿ:ರಾಜಸ್ಥಾನಕ್ಕೆ ಗುಡ್​ಬೈ ಹೇಳ್ತಿದ್ದಂತೆ ದ್ರಾವಿಡ್​ಗೆ ಬಿಗ್ ಆಫರ್​.. ಒಪ್ಪಿದ್ರೆ ಜಾಕ್​ಪಾಟ್..!

Shubman Gill (11)

ದಶಕಕ್ಕೂ ಅಧಿಕ ಕಾಲ ಕ್ರಿಕೆಟ್​​ ಲೋಕವನ್ನ ರಾಜನಂತೆ ಆಳಿದ ವಿರಾಟ್​ ಕೊಹ್ಲಿ ನಿಧಾನವಾಗಿ ಮೈದಾನದಿಂದ ದೂರಾಗ್ತಿದ್ದಾರೆ. ಟಿ20, ಟೆಸ್ಟ್​ ಫಾರ್ಮೆಟ್​​ಗೆ ಗುಡ್​ ಬೈ ಹೇಳಿರೋ ಕೊಹ್ಲಿ, ಈಗ ಏಕದಿನ ಮತ್ತು ಐಪಿಎಲ್​ಗೆ ಮಾತ್ರ ಸೀಮಿತವಾಗಿದ್ದಾರೆ. ಆನ್​​​ಫೀಲ್ಡ್​​ಗಿಂತ ಆಫ್​ ಫೀಲ್ಡ್​ನಲ್ಲೇ ಕೊಹ್ಲಿ ಉಳಿದಿದ್ದು, ಕೊಹ್ಲಿಯ ಖದರ್​​ ಕೂಡ ನಿಧಾನವಾಗಿ ಕಡಿಮೆಯಾಗ್ತಿದೆ. ಕಿಂಗ್​ ಪಟ್ಟ ಇದೀಗ ಪ್ರಿನ್ಸ್​ ಗಿಲ್​ನ ಅರಸಿಕೊಂಡು ಬರ್ತಿದೆ. 

ಕೊಹ್ಲಿ ಸೈಲೆಂಟ್​​

ಜೂನ್​ 3ರಂದು ಐಪಿಎಲ್​ ಫೈನಲ್​ ಪಂದ್ಯವನ್ನಾಡಿದ್ದೇ ಕೊನೆ. ಕಿಂಗ್​ ವಿರಾಟ್​ ಕೊಹ್ಲಿ ಆ ಬಳಿಕ ಮೈದಾನಕ್ಕೆ ಇಳಿದಿಲ್ಲ. ಕೊಹ್ಲಿ ಕ್ರಿಕೆಟ್​​ ಫೀಲ್ಡ್​ನಲ್ಲಿ ಕಾಣಿಸಿಕೊಳ್ಳದೇ 3 ತಿಂಗಳೆ ಕಳೆದ್ವು. ವಿದೇಶಕ್ಕೆ ಹಾರಿರೋ ವಿರಾಟ್​ ಕೊಹ್ಲಿ, ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದು ಬೆರಳೆಣಿಕೆಯಷ್ಟು ಬಾರಿ ಮಾತ್ರ ಸಾರ್ವಜನಿಕವಾಗಿ ದರ್ಶನ ನೀಡಿದ್ದಾರೆ. ಕೊಹ್ಲಿ ಸೈಲೆಂಟ್​​ ಮೂಡ್​​ಗೆ ಸ್ವಿಚ್​ ಆಗಿದ್ರೆ ಪ್ರಿನ್ಸ್​​ ಶುಭ್​ಮನ್​ ಗಿಲ್​ ಫುಲ್​ ವೈಲೆಂಟ್​ ಆಗಿದ್ದಾರೆ. ಟೆಸ್ಟ್ ತಂಡದ​ ನಾಯಕನಾದ ಮೊದಲ ಸರಣಿಯಲ್ಲೇ ಆಂಗ್ಲರ ಸೆದೆಬಡಿದು ಕಮಾಲ್​ ಮಾಡಿದ್ದಾರೆ. 

ಇದನ್ನೂ ಓದಿ:ED ವಿಚಾರಣೆಗೆ ಹಾಜರಾದ ಟೀಮ್ ಇಂಡಿಯಾದ ಮಾಜಿ ಪ್ಲೇಯರ್.. ಕಾರಣ ಏನು?

Shubman Gill (3)

ಇಂಗ್ಲೆಂಡ್​​ ಪ್ರವಾಸದಲ್ಲಿ ಸೆನ್ಸೇಷನ್​ ಸೃಷ್ಟಿಸಿದ ಗಿಲ್​ ಟಾಕ್​​ ಆಫ್​ ದಿ ಟೌನ್​ ಆಗಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಅಗಸ್ಟ್​​ ತಿಂಗಳಲ್ಲಿ ಟ್ವಿಟರ್​​ನಲ್ಲಿ ಅತಿ ಹೆಚ್ಚು ಚರ್ಚೆಯಾದ ಭಾರತೀಯ ನಾಯಕರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಜುಲೈ ತಿಂಗಳಲ್ಲಿ 4ನೇ ಸ್ಥಾನಲ್ಲಿದ್ದ ಕೊಹ್ಲಿ 7ನೇ ಸ್ಥಾನಕ್ಕೆ ಕುಸಿದಿದ್ರೆ 1 ಸ್ಥಾನ ಮೇಲೆರಿರೋ ಗಿಲ್​ 5ನೇ ಸ್ಥಾನಕ್ಕೇರಿದ್ದಾರೆ. ಮಾಜಿ ನಾಯಕ ಎಮ್​.ಎಸ್​​ ಧೋನಿಯನ್ನೂ ಶುಭ್​ಮನ್​ ಗಿಲ್​ ಹಿಂದಿಕ್ಕಿದ್ದಾರೆ. 

ಶುಭ್​ಮನ್​ ಮೇನಿಯಾ

ಕ್ರಿಕೆಟ್​​ನಿಂದ ದೂರಾಗ್ತಿರೊದ್ರಿಂದಾಗಿ ಕೊಹ್ಲಿಗೆ ಉತ್ತರಾಧಿಕಾರಿಯ ಹುಡುಕಾಟ ಜಾಹೀರಾತು ಲೋಕದಲ್ಲೂ ನಡೆದಿತ್ತು. ಕಾರ್ಪೋರೇಟ್​​ ಜಗತ್ತಿಗೆ ಕೊಹ್ಲಿಗೆ ಪರ್ಯಾಯವಾಗಿ ಕಂಡಿರೋದು ಶುಭ್​ಮನ್​ ಗಿಲ್​. ಗಿಲ್​ ಕಾಲ್​​ಶೀಟ್​​ಗಾಗಿ ಇದೀಗ ಖ್ಯಾತ ಬ್ರ್ಯಾಂಡ್​ಗಳೆಲ್ಲಾ ಕಾದು ನಿಂತಿವೆ. ಕಳೆದ 2 ತಿಂಗಳ ಅವಧಿಯಲ್ಲಿ ಗಿಲ್​ ಹೊಸದಾಗಿ 10 ರಿಂದ 15 ಬ್ರ್ಯಾಂಡ್​ಗಳಿಗೆ ಸಹಿ ಹಾಕಿದ್ದಾರೆ. ಪ್ರಿನ್ಸ್​ ಡಿಮ್ಯಾಂಡ್​ ಎಷ್ಟು ಹೆಚ್ಚಿದೆ ಅನ್ನೋದಕ್ಕೆ ಇದೇ ಸಾಕ್ಷಿ. 

ಇದನ್ನೂ ಓದಿ:ಕ್ಯಾಪ್ಟನ್​ ಕೌರ್ ಹಿಂದಿಕ್ಕಿದ ಕನ್ನಡತಿ ಶ್ರೇಯಾಂಕ.. ಸ್ಮೃತಿ ಮಂದಾನ ಬಿಟ್ಟರೆ ಇವರೇ ಯುವರಾಣಿ!

Shubman Gill (8)

ಬೇಡಿಕೆ ಹೆಚ್ಚಾದಂತೆ ಗಿಲ್​ ಬ್ರ್ಯಾಂಡ್​ ​ವ್ಯಾಲ್ಯೂ ಕೂಡ ಏರಿಕೆ ಕಂಡಿದೆ. ಕಾರ್ಪೋರೇಟ್ ಜಗತ್ತಿನ ನಯಾ ಡಾರ್ಲಿಂಗ್ ಶುಭ್​​ಮನ್ ಗಿಲ್​​, ಈಗ ಫುಲ್ ಕಾಸ್ಟ್ಲಿಯಾಗಿದ್ದಾರೆ. ಇಷ್ಟು ದಿನ ಬ್ರ್ಯಾಂಡ್​ಗಳ ಒಪ್ಪಂದಗಳಿಗೆ ವರ್ಷಕ್ಕೆ ಸುಮಾರು 4 ಕೋಟಿ ಪಡೀತ್ತಿದ್ದ ಗಿಲ್​​​, ಈಗ 7ರಿಂದ 8 ಕೋಟಿ ಚಾರ್ಜ್ ಮಾಡ್ತಿದ್ದಾರಂತೆ. ಈ ಹಿಂದೆ ಪಡೀತಿದ್ದ ಹಣಕ್ಕಿಂತ ದುಪ್ಪಟ್ಟು ಹಣವನ್ನ ಜೇಬಿಗಿಳಿಸ್ತಿದ್ದಾರೆ. 

ಗಿಲ್​ ಹಿಂದೆ ಬಿದ್ದ ಬಿಸಿಸಿಐ

ಸೂಪರ್​​ ಸ್ಟಾರ್​​ ಆಟಗಾರರ ನಿರ್ಗಮನದಿಂದಾಗಿ ಬಿಸಿಸಿಐ ವಲಯದಲ್ಲೂ ಹೊಸ ಚಿಂತೆ ಶುರುವಾಗಿದೆ. ಬ್ರ್ಯಾಂಡ್​ ಉಳಿಸೋಕೆ ಬಿಸಿಸಿಐ ಬಾಸ್​​ಗಳು ಶುಭ್​ಮನ್​ ಗಿಲ್​ ಹಿಂದೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಗಿಲ್​ನ 3 ಫಾರ್ಮೆಟ್​ ನಾಯಕನನ್ನಾಗಿ ಮಾಡೋಕೆ ಹೊರಟಿದ್ದಾರೆ. ಇಷ್ಟು ದಿನಗಳ ಕಾಲ ಟಿ20ಯಿಂದ ಹೊರಬಿದ್ದಿದ್ದ ಶುಭ್​ಮನ್​ ಗಿಲ್​, ಏಷ್ಯಾಕಪ್​​ ತಂಡದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿರೋದ್ರ ಹಿಂದಿನ ಸೀಕ್ರೆಟ್​ ಕೂಡ ಇದೇ.

ಇದನ್ನೂ ಓದಿ:ಧೋನಿ vs ಶಾರುಖ್ ಖಾನ್! ಕೊನೆಯಲ್ಲಿ ಗೆದ್ದಿದ್ದು ತಲಾ..!

ಗಿಲ್​ ಮೇನಿಯಾ ದಿನೇ ದಿನೇ ಹೆಚ್ಚಾಗ್ತಿದೆ. ಕೊಹ್ಲಿ ಉತ್ತರಾಧಿಕಾರಿ ಎಂದು ಈ ಹಿಂದೆಯೇ ಬಿಂಬಿತವಾಗಿದ್ದ ಗಿಲ್​, ನಿಧಾನವಾಗಿ ಕಿಂಗ್​ ಪಟ್ಟವನ್ನ ಕಬ್ಜಾ ಮಾಡ್ತಿದ್ದಾರೆ. ಆನ್​ಫೀಲ್ಡ್​ನಲ್ಲಿ ಗಿಲ್​​ ಇನ್ನಷ್ಟು ಮಿಂಚಿದ್ರೆ, ನೆಕ್ಸ್ಟ್​ ಸೂಪರ್​ ಸ್ಟಾರ್​ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Shubman Gill Captaincy Shubman Gill style
Advertisment