/newsfirstlive-kannada/media/media_files/2025/09/04/shreyanka-patil-3-2025-09-04-15-23-56.jpg)
ಶ್ರೇಯಾಂಕ ಪಾಟೀಲ್! ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಮಿಂಚಿದ ಕನ್ನಡತಿ, ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ತನ್ನ ಆಟದಿಂದಲೇ ಮೋಡಿ ಮಾಡಿ ಸೆನ್ಸೇಷನ್ ಸೃಷ್ಟಿಸಿರೋ ಶ್ರೇಯಾಂಕಾ, ಇದೀಗ ಆಫ್ ದ ಫೀಲ್ಡ್ನಲ್ಲೂ ಸಖತ್ ಸದ್ದು ಮಾಡ್ತಿದ್ದಾರೆ. ನೀವು ನಂಬ್ತಿರೋ ಇಲ್ವೋ.. ಶ್ರೇಯಾಂಕ ಈಗ ವಿಶ್ವದ ಮೋಸ್ಟ್ ಸೆಲಬ್ರೇಟೆಡ್ ವುಮೆನ್ ಕ್ರಿಕೆಟರ್. ಕನ್ನಡತಿಯ ಮುಂದೆ ಟೀಮ್ ಇಂಡಿಯಾ ಕ್ಯಾಪ್ಟನ್ ಹರ್ಮನ್ಪ್ರೀತ್ ಕೂಡ ಏನಿಲ್ಲ.. ಏನೇನಿಲ್ಲ.
ಇದನ್ನೂ ಓದಿ:T20 ಏಷ್ಯಾ ಕಪ್ನಲ್ಲಿ ಬೆಸ್ಟ್ ಸ್ಟ್ರೈಕ್ ರೇಟ್ ಹೊಂದಿರುವ ಟಾಪ್- 5 ಬ್ಯಾಟ್ಸ್ಮನ್ಸ್
ಶ್ರೇಯಾಂಕ ಪಾಟೀಲ್, ಆರ್ಸಿಬಿಯ ಎಕ್ಸ್-ಫ್ಯಾಕ್ಟರ್. ವಿಶ್ವ ಕ್ರಿಕೆಟ್ನ ನಯಾ ಸೆನ್ಸೇಷನ್. 23 ವರ್ಷದ ಈ ಚೆಲುವೆಯ ಫಿಯರ್ಲೆಸ್ ಬ್ಯಾಟಿಂಗ್, ವೇರಿಯೇಷನ್ ಬೌಲಿಂಗ್, ಆತ್ಮವಿಶ್ವಾಸದ ಆಟಕ್ಕೆ ಕ್ರಿಕೆಟ್ ಲೋಕ ಫಿದಾ ಆಗಿದೆ. ಆನ್ಫೀಲ್ಡ್ ಆಟದಲ್ಲಿ ಇನ್ನೂ ಶ್ರೇಯಾಂಕಾಗೆ ಬಿಗ್ ಸಕ್ಸಸ್ ಸಿಕ್ಕಿಲ್ಲ. ಆಫ್ ದ ಫೀಲ್ಡ್ನಲ್ಲಿ ಶ್ರೇಯಾಂಕಾಗೆ ಅದಾಗಲೇ ಸಪರೇಟ್ ಫ್ಯಾನ್ ಬೇಸ್ ಕ್ರಿಯೇಟ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಶ್ರೇಯಾಂಕ ಸೆನ್ಸೇಷನ್ ಆಗಿದ್ದಾರೆ.
ಕನ್ನಡತಿಯ ಪೋಸ್ಟ್ಗೆ ಲೈಕ್ಸ್, ಕಮೆಂಟ್ಸ್ ಸುರಿಮಳೆ
ಟೀಮ್ ಇಂಡಿಯಾ ಹಾಗೂ ಆರ್ಸಿಬಿ ಪರ ಆಡಿ ಮೋಡಿ ಮಾಡಿರುವ ಶ್ರೇಯಾಂಕ ಪಾಟೀಲ್ ಕ್ರಿಕೆಟ್ ಅಭಿಮಾನಿಗಳ ನಯಾ ಕ್ರಶ್ ಆಗಿದ್ದಾರೆ. ಫ್ಯಾನ್ಸ್ ಪ್ರೀತಿಯ ಟಗರುಪುಟ್ಟಿ ಒಂದು ಪೋಸ್ಟ್ ಮಾಡಿದ್ರೆ ಸಾಕು ಸೆನ್ಸೇಷನ್ ಸೃಷ್ಟಿಯಾಗ್ತಿದೆ. 1 ದಿನದ ಹಿಂದೆ ಪೋಸ್ಟ್ ಮಾಡಿರೋ ಈ ಒಂದು ಡಾನ್ಸ್ ವಿಡಿಯೋ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಇದನ್ನೂ ಓದಿ:T20 ಕ್ಯಾಪ್ಟನ್ಗೆ ಬಿಗ್ ಚಾಲೆಂಜ್.. ಮುಂಬೈಕರ್ ಸೂರ್ಯಗೆ ವಿಲನ್ ಆಗ್ತಾರಾ ಗಿಲ್?
ಒಂದು ದಿನದ ಹಿಂದೆ ಇನ್ಸ್ಸ್ಟಾಗ್ರಾಂನಲ್ಲಿ ಶ್ರೇಯಾಂಕ ಪಾಟೀಲ್ ಈ ರೀಲ್ಸ್ನ ಪೋಸ್ಟ್ ಮಾಡಿದ್ರು. ಪೋಸ್ಟ್ ಮಾಡಿದ ಕೇವಲ 2 ಗಂಟೆಯಲ್ಲಿ ಇದಕ್ಕೆ ಲಕ್ಷಗಟ್ಟಲೇ ಲೈಕ್ಸ್ ಬಂದಿವೆ. ಕಮೆಂಟ್ಸ್ಗಳ ಸುರಿಮಳೆಯೇ ಹರಿದಿತ್ತು. ಶ್ರೇಯಾಂಕ ಅಕೌಂಟ್ನಲ್ಲಿ ಮಾತ್ರವಲ್ಲ. ಅಭಿಮಾನಿಗಳ ಅಕೌಂಟ್ಗಳಲ್ಲೂ ಈ ರೀಲ್ಸ್ ಈಗ ಸದ್ದು ಮಾಡ್ತಿದೆ.
https://www.instagram.com/share/reel/_4SWT01Uv
ಟೀಮ್ ಇಂಡಿಯಾ ನಾಯಕಿಯನ್ನೂ ಹಿಂದಿಕ್ಕಿದ ಶ್ರೇಯಾಂಕಾ
ಶ್ರೇಯಾಂಕ ಪಾಟೀಲ್ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯೂ ಮಾಡಿ 2 ವರ್ಷವೂ ತುಂಬಿಲ್ಲ. ಆಡಿದ ಪಂದ್ಯಗಳ ಸಂಖ್ಯೆ 20ರ ಗಡಿಯನ್ನೂ ದಾಟಿಲ್ಲ. ಪ್ರಸಿದ್ಧಿಯಲ್ಲಿ ಶ್ರೇಯಾಂಕ ವಿಶ್ವದ ಲೆಜೆಂಡರಿ ಅಟಗಾರರನ್ನೇ ಹಿಂದಿಕ್ಕಿದ್ದಾರೆ. ಹೆಸರಿಗೆ ತಕ್ಕಂತೆ ಮಹಿಳಾ ಕ್ರಿಕೆಟ್ಗೆ ಭಾರತದ ಸ್ಮೃತಿ ಮಂದಾನಾನೇ ಕ್ವೀನ್. ಮಂದಾನ ಬಿಟ್ರೆ 2ನೇ ಸ್ಥಾನದಲ್ಲಿರೋದು,ಶ್ರೇಯಾಂಕ ಪಾಟೀಲ್. ಇನ್ಸ್ಸ್ಟಾಗ್ರಾಂ ಫಾಲೋವರ್ಸ್ಗಳ ಲೆಕ್ಕಾಚಾರದಲ್ಲಿ ಶ್ರೇಯಾಂಕ ಪಾಟೀಲ್ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತಯ್ ಕೌರ್ನೂ ಹಿಂದಿಕ್ಕಿದ್ದಾರೆ.
ಇನ್ಸ್ಸ್ಟಾಗ್ರಾಂ ಫಾಲೋವರ್ಸ್
ಟೀಮ್ ಇಂಡಿಯಾ ಉಪನಾಯಕಿ ಸ್ಮೃತಿ ಮಂದಾನ ಇನ್ಸ್ಸ್ಟಾಗ್ರಾಂನಲ್ಲಿ 12.4 ಮಿಲಿಯನ್ ಫಾಲೋವರ್ಸ್ ಹೊಂದಿದ್ರೆ. ಶ್ರೇಯಾಂಕ ಪಾಟೀಲ್ 4.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ಗೆ 2.3 ಮಿಲಿಯನ್, ಹರ್ಲಿನ್ ಡಿಯೋಲ್ಗೆ 2.1 ಮಿಲಿಯನ್, ಜೆಮಿಮಾ ರೋಡ್ರಿಗಸ್ಗೆ 1.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ:ED ವಿಚಾರಣೆಗೆ ಹಾಜರಾದ ಟೀಮ್ ಇಂಡಿಯಾದ ಮಾಜಿ ಪ್ಲೇಯರ್.. ಕಾರಣ ಏನು?
ಭಾರತದ ಕ್ರಿಕೆಟರ್ಸ್ ಮಾತ್ರವಲ್ಲ. ವಿದೇಶಿ ಆಟಗಾರ್ತಿಯರನ್ನೂ ಶ್ರೇಯಾಂಕ ಸೈಡ್ ಹೊಡೆದಿದ್ದಾರೆ. ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ, ಇಂಗ್ಲೆಂಡ್ನ ಸಾರಾ ಟೇಲರ್ ಸೇರಿದಂತೆ ಯಾವ ಸ್ಟಾರ್ ಆಟಗಾರ್ತಿಯರಿಗೂ ಕೂಡ ಶ್ರೇಯಾಂಕಗಿರೋ ಫ್ಯಾನ್ ಫಾಲೋಯಿಂಗ್ ಇಲ್ಲ.
ಇನ್ಸ್ಸ್ಟಾಗ್ರಾಂ ಫಾಲೋವರ್ಸ್ ಹೆಚ್ಚಾದ್ರೆ ಏನು ಲಾಭ ಅಂತಾ ಕೇಳ್ಬೆಡಿ. ಕೋಟಿ ಕೋಟಿ ದುಡಿಯಬಹುದು. ಫಾಲೋವರ್ಸ್ ಆಧಾರದಲ್ಲೇ ಟಾಪ್ ಬ್ರ್ಯಾಂಡ್ಗಳು ಪ್ರಮೋಷನ್ಗೆ ಶ್ರೇಯಾಂಕನ ಹುಡುಕಿಕೊಂಡು ಬಂದಿದೆ. ಅಡಿಡಾಸ್, ಬ್ಯಾಂಕ್ ಆಫ್ ಬರೋಡಾ, ಅಮೇಜಾನ್, ಡಿಎಸ್ಸಿಯಂತಾ ಬಿಗ್ ಕಂಪನಿಗಳು ಸೇರಿದಂತೆ ಹಲವು ಬ್ರ್ಯಾಂಡ್ಗಳಿಗೆ ಶ್ರೇಯಾಂಕ ಪ್ರಮೋಟರ್ ಆಗಿದ್ದಾರೆ. ಒಟ್ಟಿನಲ್ಲಿ, ಆನ್ಫೀಲ್ಡ್ಗಿಂತ ಮುನ್ನವೇ ಆಫ್ ದ ಫೀಲ್ಡ್ನಲ್ಲಿ ಶ್ರೇಯಾಂಕ ಪಾಟೀಲ್ಗೆ ಬಿಗ್ ಸಕ್ಸಸ್ ಅಂತೂ ಸಿಕ್ಕಿದೆ. ಇದೇ ಸಕ್ಸಸ್ ಕನ್ನಡತಿಗೆ ಆನ್ಫೀಲ್ಡ್ನಲ್ಲೂ ಸಿಗಲಿ.
ಇದನ್ನೂ ಓದಿ:T20 ಕ್ಯಾಪ್ಟನ್ಗೆ ಬಿಗ್ ಚಾಲೆಂಜ್.. ಮುಂಬೈಕರ್ ಸೂರ್ಯಗೆ ವಿಲನ್ ಆಗ್ತಾರಾ ಗಿಲ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ