ಧೋನಿ vs ಶಾರುಖ್ ಖಾನ್! ಕೊನೆಯಲ್ಲಿ ಗೆದ್ದಿದ್ದು ತಲಾ..!

ಟೀಮ್ ಇಂಡಿಯಾದ ಮೋಸ್ಟ್​ ಸಕ್ಸಸ್​​ಫುಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಈಗಲೂ ಕಾರ್ಪೊರೇಟ್ ವರ್ಲ್ಡ್​ನ ಡಾರ್ಲಿಂಗ್. ಧೋನಿ ಆಡಿದ್ರೂ ಡಿಮ್ಯಾಂಡ್. ಆಡದಿದ್ರೂ ಡಿಮ್ಯಾಂಡ್. ಧೋನಿ ಇಂಟರ್​ನ್ಯಾಷನಲ್ ಕ್ರಿಕೆಟ್​​ನಿಂದ ದೂರವಾಗಿ 6 ವರ್ಷ ಕಳೆದ್ರೂ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ.

author-image
Ganesh Kerekuli
Sharukh Khan and MS Dhoni
Advertisment

ಟೀಮ್ ಇಂಡಿಯಾದ ಮೋಸ್ಟ್​ ಸಕ್ಸಸ್​​ಫುಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಈಗಲೂ ಕಾರ್ಪೊರೇಟ್ ವರ್ಲ್ಡ್​ನ ಡಾರ್ಲಿಂಗ್. ಧೋನಿ ಆಡಿದ್ರೂ ಡಿಮ್ಯಾಂಡ್. ಆಡದಿದ್ರೂ ಡಿಮ್ಯಾಂಡ್. ಧೋನಿ ಇಂಟರ್​ನ್ಯಾಷನಲ್ ಕ್ರಿಕೆಟ್​​ನಿಂದ ದೂರವಾಗಿ 6 ವರ್ಷ ಕಳೆದ್ರೂ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ. 

ಈ ಕ್ರಿಕೆಟರ್ಸ್​​ ಅಂದ್ರೆ ಒಂಥರಾ ಓಡೋ ಕುದುರೆಗಳಿದ್ದ ಹಾಗೆ. ಕ್ರಿಕೆಟರ್ಸ್​​ ಮುಂದೆ ಹೋಗ್ತಿದ್ರೆ ಜಾಹಿರಾತು ಕಂಪನಿಗಳು ಕ್ರಿಕೆಟರ್​ಗಳ ಹಿಂದೆ ಓಡುತ್ತಲೇ ಇರ್ತವೆ. ಆಡ್ತಾ ಇರಲಿ. ರಿಟೈರ್​ ಆಗಲಿ. ಲೆಕ್ಕಕ್ಕೆ ಇರಲ್ಲ. ಇದಕ್ಕೆ ಬೆಸ್ಟ್​​ ಎಕ್ಸಾಂಪಲ್​ MS​ ಧೋನಿ. ಮಿಸ್ಟರ್​​ ಕೂಲ್​​ ಧೋನಿ ಅಂದ್ರಂತೂ ಮುಗಿದೇ ಹೋಯ್ತು. ಜಾಹೀರಾತುದಾರರು ಈಗಲೂ ಕ್ಯೂ ನಿಲ್ತಿದ್ದಾರೆ.

ಇದನ್ನೂ ಓದಿ:T20 ಏಷ್ಯಾ ಕಪ್​ನಲ್ಲಿ ಬೆಸ್ಟ್​ ಸ್ಟ್ರೈಕ್ ​ರೇಟ್ ಹೊಂದಿರುವ ಟಾಪ್- 5 ಬ್ಯಾಟ್ಸ್​ಮನ್ಸ್​​​

MS Dhoni (1)

ಬಾಲಿವುಡ್​ ಬಾದ್​ ಷಾ vs ಕ್ರಿಕೆಟ್​ ಬಾದ್​ ಷಾ

ಮಾರ್ಕೆಟಿಂಗ್​ ಲೋಕದಲ್ಲಿ ಬಿಗ್​ ಫೈಟ್​ ನಡೀತಿತ್ತು. ಬಾಲಿವುಡ್​ ಬಾದ್​ ಷಾ ಶಾರೂಖ್​ ಖಾನ್​ vs ಕ್ರಿಕೆಟ್​ ಬಾದ್​ ಶಾ ಎಮ್​​.ಎಸ್​ ಧೋನಿ ನಡುವಿನ ಫೈಟ್​ ಇದು. ಇಬ್ಬರೂ ಸೂಪರ್​ ಸ್ಟಾರ್​​ಗಳು ಜಾಹೀರಾತು ಲೋಕದ ಡಾರ್ಲಿಂಗ್​ ಎನಿಸಿದ್ದಾರೆ. ಇವರಿಬ್ಬರ ಕಾಲ್​ಶೀಟ್​ಗಾಗಿ ಕಂಪನಿಗಳು ಕ್ಯೂ ನಿಲ್ತಿವೆ. ಎಂಡರ್ಸೋಮೆಂಟ್​​ ವಿಚಾರದಲ್ಲಿ ಇಬ್ಬರ ನಡುವೆ ನೀನಾ? ನಾನಾ? ಫೈಟ್​ ಇತ್ತು. ಅದ್ರಲ್ಲಿ ಧೋನಿ ಮೇಲುಗೈ ಸಾಧಿಸಿದ್ದಾರೆ.

43 ಬ್ರ್ಯಾಂಡ್​​​ಗಳಿಗೆ ಧೋನಿ ಅಂಬಾಸಿಡರ್​

ಧೋನಿ ಇಂಟರ್​​ನ್ಯಾಷನಲ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದು 2019ರಲ್ಲಿ. ಕಳೆದ 6 ವರ್ಷದಿಂದ ಐಪಿಎಲ್​ಗೆ ಮಾತ್ರ ಧೋನಿ ಸೀಮಿತವಾಗಿದ್ರೂ ಕ್ರೇಜ್​ ಕಿಂಚಿತ್ತೂ ಕುಂದಿಲ್ಲ. ಹೀಗಾಗಿ ಧೋನಿ ಕ್ರಿಕೆಟ್​ ಬಿಟ್ರೂ ಬ್ರ್ಯಾಂಡ್​​ಗಳು ಧೋನಿಯನ್ನ ಬಿಟ್ಟು ಹೋಗ್ತಿಲ್ಲ. ವರ್ಷದಿಂದ ವರ್ಷಕ್ಕೆ ಬ್ರ್ಯಾಂಡ್​​ಗಳ ಸಂಖ್ಯೆ ಏರುತ್ತಲೇ ಇದೆ. ಒಟ್ಟಾರೆ 43 ಬ್ರ್ಯಾಂಡ್​ಗಳಿಗೆ ಧೋನಿ ಅಂಬಾಸಿಡರ್​ ಆಗಿದ್ದಾರೆ. ಬಾಲಿವುಡ್​​ ಬಾದ್​ ಷಾ ಶಾರೂಖ್​​ 35 ಬ್ರ್ಯಾಂಡ್​ಗಳ ಅಂಬಾಸಿಡರ್​ ಆಗಿದ್ದಾರೆ. 

ಇದನ್ನೂ ಓದಿ:ED ವಿಚಾರಣೆಗೆ ಹಾಜರಾದ ಟೀಮ್ ಇಂಡಿಯಾದ ಮಾಜಿ ಪ್ಲೇಯರ್.. ಕಾರಣ ಏನು?

22 ಗಂಟೆ TVಯಲ್ಲಿ ತಲಾ ದರ್ಶನ

ಹೊರಬಿದ್ದಿರೋ ಹೊಸ ರಿಪೋರ್ಟ್​ನ ಪ್ರಕಾರ ದಿನಕ್ಕೆ 22 ಗಂಟೆಗಳ ಕಾಲ ಟಿವಿಯಲ್ಲಿ ಧೋನಿ ಕಾಣಿಸಿಕೊಳ್ತಿದ್ದಾರಂತೆ. ಧೋನಿ ಮಾಡಿರುವ 43 ಬ್ರ್ಯಾಂಡ್​ ವಿವಿಧ ಜಾಹೀರಾತುಗಳು ಭಾರತದ ಎಲ್ಲಾ ಚಾನೆಲ್​ಗಳಲ್ಲಿ ಪ್ರಸಾರವಾಗ್ತಿರೋದ್ರ ಒಟ್ಟಾರೆ ಲೆಕ್ಕಾಚಾರ ಇದಾಗಿದೆ. ಧೋನಿ ಒಂಥರಾ ಓಲ್ಡ್​ ವೈನ್​ ಇಂದ್ದಂತೆ. ವಯಸ್ಸಾದಂತೆ ಕಿಕ್​ ಜಾಸ್ತಿ. ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿರೋ ಬ್ರ್ಯಾಂಡ್​ಗಳ ಸಂಖ್ಯೆಯೇ ಇದನ್ನ ಹೇಳ್ತಿದೆ. 

ಕಿಂಗ್ ಆಫ್ ಬ್ರ್ಯಾಂಡ್ ಧೋನಿ​..! 

2023ರಲ್ಲಿ 32 ಬ್ರ್ಯಾಂಡ್​​ಗಳಿಗೆ ಧೋನಿ ಅಂಬಾಸಿಡರ್​ ಆಗಿದ್ರು. 2024ರಲ್ಲಿ ಅದು 39ಕ್ಕೆ ಹೆಚ್ಚಾಯ್ತು. ಇದೀಗ 2025ರಲ್ಲಿ ಬ್ರ್ಯಾಂಡ್​ಗಳ ಸಂಖ್ಯೆ 43ಕ್ಕೆ ಏರಿದೆ. ಧೋನಿಯನ್ನ ಜಾಹೀರಾತುದಾರರ ಡಾರ್ಲಿಂಗ್​ ಅಂತಾ ಸುಮ್ಮನೆ ಕರಿಯಲ್ಲ. ಧೋನಿ ಆ್ಯಡ್​ನಲ್ಲಿ ಕಾಣಿಸಿಕೊಂಡ್ರೆ ಸಾಕು ಅದು ಸೂಪರ್​ ಹಿಟ್​ ಪಕ್ಕಾ! ವಿಶ್ವ ಗೆದ್ದ ಸಾಮ್ರಾಟ ಧೋನಿಯ ಅಭಿಮಾನಿಗಳ ಬಳಗ ಹಾಗಿದೆ. ಧೋನಿ ಅಂದ್ರೆ ಫ್ಯಾನ್ಸ್​ ವಲಯದಲ್ಲಿ ಪ್ರೀತಿ, ಅಭಿಮಾನ ನೆಕ್ಸ್ಟ್​​ ಲೆವೆಲ್​ನಲ್ಲಿದೆ. ಹೀಗಾಗಿ ಧೋನಿ ಹಿಂದೆ ಹೋದ್ರೆ ಬ್ರ್ಯಾಂಡ್​ಗಳು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಮಾರ್ಕೆಟ್​​ನಲ್ಲಿ ಸಲೀಸಾಗಿ ತನ್ನ ಬ್ರ್ಯಾಂಡ್​ಗಳನ್ನ ಮಾರಾಟ ಮಾಡಬಹುದು. ಹಾಗಾಗೇ ಧೋನಿ ಅಂದ್ರೆ ಬ್ರ್ಯಾಂಡ್​​ಗಳು ಮುಗಿಬೀಳೋದು.

ಇದನ್ನೂ ಓದಿ:T20 ಕ್ಯಾಪ್ಟನ್​ಗೆ ಬಿಗ್ ಚಾಲೆಂಜ್​.. ಮುಂಬೈಕರ್​ ಸೂರ್ಯಗೆ ವಿಲನ್​ ಆಗ್ತಾರಾ ಗಿಲ್?

2019ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಫೀಲ್ಡ್​ನಲ್ಲಿ ಕಾಣಿಸಿಕೊಳ್ತಾ ಇರೋದು 3 ತಿಂಗಳು ಮಾತ್ರ. ಧೋನಿಗಿರೋ ಕ್ರೇಜ್​ ಕಿಂಚಿತ್ತೂ ಕಡಿಮೆಯಾಗಿಲ್ಲ. ಸಿಎಸ್​ಕೆನ ಹೋಮ್​​​ಗ್ರೌಂಡ್​ ಚೆನ್ನೈನ ಬಿಟ್ ​ಬಿಟಿ, ದೇಶದ ಉದ್ದಗಲದಲ್ಲಿ ಯಾವುದೇ ಮೈದಾನದಲ್ಲಿ ಸಿಎಸ್​ಕೆ ತಂಡ ಪಂದ್ಯವನ್ನಾಡಲಿ ಅಲ್ಲಿ ಕೇಳೋದು ಧೋನಿ..ಧೋನಿ ಎಂಬ ಕಹಳೆ ಮಾತ್ರ. 

ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಯಾವುದೇ ಸ್ಟೇಡಿಯಂನಲ್ಲಿ ಪಂದ್ಯಗಳನ್ನಾಡಲಿ ಆ ಸ್ಟೇಡಿಯಂ ಫುಲ್​ ಯೆಲ್ಲೋ ಮಯವಾಗ್ತಿದೆ. ಧೋನಿ, ಧೋನಿ ಎಂಬ ಕೂಗು ಮಾರ್ಧನಿಸುತ್ತೆ. ಧೋನಿ ಅನ್ನೋದು ಬರಿ ಹೆಸರಲ್ಲ. ಕ್ರಿಕೆಟ್​ ಪ್ರೇಮಿಗಳ ಎಮೋಷನ್​. ಈ ಪ್ರೀತಿಯೇ ಬ್ರ್ಯಾಂಡ್​ಗಳಿಗೆ ಬಂಡವಾಳ.

ಇದನ್ನೂ ಓದಿ:ಕ್ಯಾಪ್ಟನ್​ ಕೌರ್ ಹಿಂದಿಕ್ಕಿದ ಕನ್ನಡತಿ ಶ್ರೇಯಾಂಕ.. ಸ್ಮೃತಿ ಮಂದಾನ ಬಿಟ್ಟರೆ ಇವರೇ ಯುವರಾಣಿ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS Dhoni vs Shah Rukh Khan MS Dhoni defamation case MS Dhoni investment MS Dhoni car craze MS Dhoni
Advertisment