/newsfirstlive-kannada/media/media_files/2025/09/30/rajasthan-bride-2025-09-30-15-13-20.jpg)
ಫಸ್ಟ್​ ನೈಟ್​ (First Night) ದಿನ ಹೆಂಡತಿ ಜೊತೆಗೆ ಹಾಸಿಗೆ ಹಂಚಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಮದುಮಗನಿಗೆ ಆಘಾತ ಆಗಿದೆ. ಅದೇ ರಾತ್ರಿ ನವವಧು, ಗಂಡನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣದ ಜೊತೆ ಪರಾರಿ ಆಗಿದ್ದಾಳೆ. ವಿಷಯ ತಿಳಿದು ಎಲ್ಲರೂ ಆಘಾತಕ್ಕೆ ಒಳಗಾಗಿದ್ದು, ಪ್ರಕರಣ ದಾಖಲಾಗಿದೆ.
ಆಗಿದ್ದೇನು..?
ರಾಜಸ್ಥಾನದ ಅಜ್ಮೀರ್​ನ ಕಿಶನ್​​ಗಢ್​ನಲ್ಲಿ (Kishangarh) ಘಟನೆ ನಡೆದಿದೆ. ಕಿಶನ್​ಗಢ್​ನ ಯುವಕ ಆಗ್ರಾದ ಯುವತಿ ಜೊತೆ ಮದುವೆ ಆಗಿದ್ದ. ಮದುವೆಯಾದ ರಾತ್ರಿ ಫಸ್ಟ್​ನೈಟ್​ಗೆ ಕೊಠಡಿ ಸಿಂಗಾರಗೊಂಡಿತ್ತು. ಕೊಠಡಿ ಶೃಂಗಾರಗೊಂಡ ಬೆನ್ನಲ್ಲೇ, ಗಂಡನಿಗೆ ಶಾಕಿಂಗ್ ಹೇಳಿಕೆ ನೀಡಿದ್ದಾಳೆ.
ನಮ್ಮ ಕಡೆ ಈ ರೀತಿಯ ಫಸ್ಟ್ ನೈಟ್ ಸಂಪ್ರದಾಯವಿಲ್ಲ ಎಂದಿದ್ದಾಳೆ. ಇದನ್ನು ಮದುಮಗೆ ಮನೆಯವರಿಗೆ ತಿಳಿಸಿದ್ದಾನೆ. ಆಕೆ ಸಂಪ್ರದಾಯ ಇಲ್ಲ ಎಂದಿದ್ದಕ್ಕೆ ಸರಿ ಎಂದು ಸುಮ್ಮನಿದ್ದರು. ಅಷ್ಟರಲ್ಲೇ ರಾತ್ರಿ ಆಗಿದ್ದರಿಂದ ಎಲ್ಲರೂ ಮಲಗಿದ್ದರು. ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಮದುಮಗ ಬಾಯಾರಿಕೆಯಿಂದ ಎಚ್ಚರಗೊಂಡಿದ್ದಾನೆ.
ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ಹುಂಡಿಯ 14 ಕೋಟಿ ಹಣ ಕದ್ದ ಕ್ಲರ್ಕ್ ! ಜೈಲಿಗೆ ಹೋಗೋದರಿಂದ ಬಚಾವ್ ಆದ!!: ಈಗ ತನಿಖೆಯ ಬಿಸಿ
ಎದ್ದಾಗ ಮದುಮಗಳು ಕಾಣಲಿಲ್ಲ. ಇದರಿಂದ ಅನುಮಾನಗೊಂಡ ಆತ, ಎಲ್ಲರನ್ನೂ ಎಬ್ಬಿಸಿ ಹುಡುಕಾಡಿದ್ದಾನೆ. ಕೊನೆಗೆ ಆಕೆ ಅಲ್ಲಿಂದ ಪರರಾರಿ ಆಗಿರೋದು ತಿಳಿದಿದೆ. ಇನ್ನು ಆಕೆ ಮನೆಯಿಂದ ಪರಾರಿ ಆಗುವಾಗ ಸುಮ್ಮನೆ ಹೋಗಲಿಲ್ಲ. ಬೀರುವಿನಲ್ಲಿದ್ದ ಬಂಗಾರ ಮತ್ತು ಹಣವನ್ನೆಲ್ಲ ಕದ್ದು ಓಡಿದ್ದಾಳೆ.
ಇದರಿಂದ ಮತ್ತಷ್ಟು ಗಾಬರಿಯಾದ ಮದುಮಗ ಹಾಗೂ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡಿರೋ ಅನುಮಾನ ಇದೆ. ಈ ರೀತಿಯ ಪ್ರಕರಣಗಳು ಉತ್ತರ ಭಾರತದಲ್ಲಿ ನಡೆಯುತ್ತಿವೆ. ಇಲ್ಲಿ ಮದುವೆ ಮಾಡಿಸಲು ಬ್ರೋಕರ್ ಒಬ್ಬ ಬಂದಿತ್ತು. ಆತನಿಗೆ ಮದುಮಗ 2 ಲಕ್ಷ ರೂಪಾಯಿ ಹಣವನ್ನು ನೀಡಿದ್ದ. ಆತನೂ ಕೂಡ ಇದರಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ