/newsfirstlive-kannada/media/media_files/2025/12/02/vladimir-putin-aircraft-2-2025-12-02-11-24-29.jpg)
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಭಾರತಕ್ಕೆ ಭೇಟಿ ಕೊಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳಲು ಪುಟಿನ್ ಭಾರತಕ್ಕೆ ಆಗಮಿಸುತ್ತಿದ್ದು, ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.
ಪುಟಿನ್ ವಾಸ್ತವ್ಯಕ್ಕೆ ಸಿದ್ಧವಾಯ್ತು ದೆಹಲಿ ಹೋಟೆಲ್..!
ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡಲಿದ್ದಾರೆ. ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ನಂತ್ರ ಪುಟಿನ್ ಭಾರತಕ್ಕೆ ನೀಡ್ತಿರೋ ಮೊದಲ ಭೇಟಿ ಇದಾಗಿದೆ. ಇಂದು ನವದೆಹಲಿಗೆ ಆಗಮಿಸಲಿರುವ ಪುಟಿನ್ ಎರಡು ದಿನ ಭಾರತ ಪ್ರವಾಸದಲ್ಲಿ ಇರಲಿದ್ದಾರೆ. 2021ರಲ್ಲಿ ಪುಟಿನ್ ಕೊನೆಯದಾಗಿ ಭಾರತಕ್ಕೆ ಭೇಟಿ ಕೊಟ್ಟಿದ್ರು. ಈಗ ಅವರ ಭವ್ಯ ಸ್ವಾಗತಕ್ಕೆ ಭರದಿಂದ ಸಿದ್ಧತೆ ನಡೆದಿದ್ದು.. ಅವರ ವಾಸ್ತವ್ಯಕ್ಕೆ ದೆಹಲಿಯ ಮೌರ್ಯ ಹೋಟೆಲ್ ಸಜ್ಜಾಗಿದೆ.
ಇದನ್ನೂ ಓದಿ: 2ನೇ ಏಕದಿನದಲ್ಲಿ ಟೀಮ್​ ಇಂಡಿಯಾಗೆ ಸೋಲು.. ಕಳಪೆ ಫೀಲ್ಡಿಂಗ್​ಗೆ ಬೆಲೆ ತೆತ್ತ ತಂಡ..!
/filters:format(webp)/newsfirstlive-kannada/media/post_attachments/wp-content/uploads/2024/11/PUTIN-DOG-2.jpg)
‘ಇಂದ್ರಲೋಕ’ದಂತಿರೋ ಹೋಟೆಲ್..!
- ರಷ್ಯಾ ಅಧ್ಯಕ್ಷ ಪುಟಿನ್ ವಾಸ್ತವ್ಯಕ್ಕೆ ದೆಹಲಿ ಮೌರ್ಯ ಹೋಟೆಲ್ ಸಜ್ಜು
- ಮೌರ್ಯ ಹೋಟೆಲ್‌ನ ಪ್ರತಿಯೊಂದು ಕೊಠಡಿ ಕೂಡ ಕಾಯ್ದಿರಿಸಲಾಗಿದೆ
- ಹೋಟೆಲ್ ಅಧ್ಯಕ್ಷೀಯ ‘ಚಂದ್ರಗುಪ್ತ ಸೂಟ್’ನಲ್ಲಿ ಪುಟಿನ್ ವಾಸ್ತವ್ಯ
- ಭೋಜನವು ಹೋಟೆಲ್‌ನ ಪ್ರಸಿದ್ಧ "ದಮ್ ಪುಖ್ತ್" ರೆಸ್ಟೋರೆಂಟ್ ಇರಲಿದೆ
- ಹೋಟೆಲ್ ಆವರಣ ಮತ್ತು ಸುತ್ತಮುತ್ತ ಭದ್ರತಾ ಸಂಸ್ಥೆ ನಿಯೋಜನೆ
- ಭಾರತದ ರಾಷ್ಟ್ರೀಯ ಭದ್ರತಾ ದಳದ ಕಮಾಂಡೊಗಳು, ಸ್ನೈಪರ್, ಡ್ರೋನ್
- ಜಾಮರ್, ಎಐ ಆಧಾರಿತ ಪರಿಶೀಲನಾ ವ್ಯವಸ್ಥೆ ಸೇರಿ 5 ಹಂತದ ಭದ್ರತೆ
ನಾಳೆ ಪ್ರಧಾನಿ ಮೋದಿ ಮತ್ತು ಪುಟಿನ್ ನಡುವೆ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆ ನಡೆಯಲಿದೆ. ಆರ್ಥಿಕ, ರಕ್ಷಣಾ ಮತ್ತು ಇಂಧನ ಸಂಬಂಧಗಳ ಬಗ್ಗೆ ಇಬ್ಬರು ನಾಯಕರು ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಸುಜಲಾಂ ಭಾರತ್.. ಜಲ ಸಂರಕ್ಷಣೆಯತ್ತ ದಿಟ್ಟ ಹೆಜ್ಜೆಯಿಟ್ಟ ಕೇಂದ್ರ..!
ಮೋದಿ-ಪುಟಿನ್ ಮಾತುಕತೆ
ಇತರೆ ದೇಶಗಳ ಮೇಲೆ ಅಮೆರಿಕ ವಿಧಿಸಿರೋ ನಿರ್ಬಂಧಗಳಿಂದ ಭಾರತ-ರಷ್ಯಾ ವ್ಯಾಪಾರವನ್ನ ಪ್ರತ್ಯೇಕಿಸುವ ಕ್ರಮದ ಬಗ್ಗೆ ಚರ್ಚೆ ನಡೆಯಲಿದೆ. ಪರಮಾಣು ಶಕ್ತಿಗಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಪ್ರಸ್ತಾಪ, ರಷ್ಯಾದೊಂದಿಗೆ ರಕ್ಷಣಾ ಸಹಕಾರ, ಆರ್ಥಿಕ ಸಹಕಾರವನ್ನ ಪುನಶ್ಚೇತನಗೊಳಿಸುವುದು. ಯುರೇಷಿನ್ ಆರ್ಥಿಕ ಒಕ್ಕೂಟದಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಆರಂಭವಾಗಿರೋದ್ರಿಂದ, ವ್ಯಾಪಾರಕ್ಕೆ ಸುಂಕ, ಸುಂಕ ರಹಿತ ಅಡೆತಡೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಪ್ರಾದೇಶಿಕ ಸಮಸ್ಯೆ, ಸರ್ಕಾರಿ & ವಾಣಿಜ್ಯ ಒಪ್ಪಂಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.
ಒಟ್ನಲ್ಲಿ.. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸುತ್ತಿರೋದ್ರಿಂದ ಭಾರತ ಮತ್ತು ರಷ್ಯಾ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ.
ಇದನ್ನೂ ಓದಿ: ‘ಹೈಕಮಾಂಡ್ ಭೇಟಿ ಮಾಡಲ್ಲ’ ಎಂದ ಡಿಕೆಶಿ.. ನಿಗೂಢ ದೆಹಲಿ ದಂಡಯಾತ್ರೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us