Advertisment

2ನೇ ಏಕದಿನದಲ್ಲಿ ಟೀಮ್​ ಇಂಡಿಯಾಗೆ ಸೋಲು.. ಕಳಪೆ ಫೀಲ್ಡಿಂಗ್​ಗೆ ಬೆಲೆ ತೆತ್ತ ತಂಡ..!

ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಸೌತ್​ ಆಫ್ರಿಕಾ ಜಿದ್ದಿಗೆ ಬಿದ್ದು ಹೋರಾಡಿತು. ಕಳಪೆ ಫೀಲ್ಡಿಂಗ್, ದುಬಾರಿ ಬೌಲಿಂಗ್​ ಟೀಮ್​ ಇಂಡಿಯಾಗೆ ಹಿನ್ನಡೆಯಾಯ್ತು. ಸಾಲಿಡ್​​ ಫೈಟ್​ ಬ್ಯಾಕ್​ ನಡೆಸಿದ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾಗೆ ಸೋಲಿನ ಶಾಕ್ ನೀಡಿತು.

author-image
Ganesh Kerekuli
Team india (8)
Advertisment
  • ಭಾರತ-ಸೌತ್​ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯ
  • 4 ವಿಕೆಟ್​ಗಳ ಜಯ ಸಾಧಿಸಿದ ಸೌತ್​ ಆಫ್ರಿಕಾ
  • 1-1ರಲ್ಲಿ ಸರಣಿ ಸಮಭಲ ಸಾಧಿಸಿದ ಸೌತ್​ ಆಫ್ರಿಕಾ

ರಾಯ್​​ಪುರದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲೂ ಟಾಸ್​​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾಗೆ ಅದ್ಭುತ ಆರಂಭ ಸಿಗಲಿಲ್ಲ. 3 ಬೌಂಡರಿ ಬಾರಿಸಿ ಮಿಂಚಿದ ರೋಹಿತ್​ ಶರ್ಮಾ 14 ರನ್​ಗಳಿಸಿ ಔಟಾದ್ರು, ಯಶಸ್ವಿ ಜೈಸ್ವಾಲ್​ ಆಟ ಕೂಡ 22 ರನ್​ಗಳಿಗೆ ಅಂತ್ಯವಾಯ್ತು. 

Advertisment

ಕೊಹ್ಲಿ-ಋತುರಾಜ್​ ಜೊತೆಯಾಟ

ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಋತುರಾಜ್​ ಗಾಯಕ್ವಾಡ್-ವಿರಾಟ್​ ಕೊಹ್ಲಿ ಕುಸಿತ ಕಂಡ ತಂಡಕ್ಕೆ ಚೇತರಿಕೆ ನೀಡಿದ್ರು. ಸೌತ್​ ಆಫ್ರಿಕನ್​ ಬೌಲರ್​ಗಳನ್ನ ಕಾಡಿದ ಈ ಜೋಡಿ 3ನೇ ವಿಕೆಟ್​ಗೆ ಅದ್ಭುತ ಜೊತೆಯಾಟವಾಡಿತು. ಕೊಹ್ಲಿ, ಋತುರಾಜ್​ ಆಟಕ್ಕೆ ಸೌತ್​ ಆಫ್ರಿಕನ್​ ಬೌಲರ್​ಗಳು ಕಂಗಾಲ್​ ಆದ್ರು. 

ಇದನ್ನೂ ಓದಿ: ಕೊಹ್ಲಿ ಶತಕದ ಹಿಂದೆ ಕನ್ನಡಿಗ KL ರಾಹುಲ್ ಪಾತ್ರ.. ಅದು ಹೆಂಗೆ..?

Ruturaj gaikwad (1)

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿಂಗ್​ ಕೊಹ್ಲಿ ಸಿಕ್ಸರ್​ ಸಿಡಿಸಿ ಅಕೌಂಟ್​ ಓಪನ್​ ಮಾಡಿದ್ರು. ಕಾನ್ಫಿಡೆಂಟ್​ ಆರಂಭ ಪಡೆದ ವಿರಾಟ್​ ಕೊಹ್ಲಿ ಆಫ್ರಿಕನ್​ ಬೌಲರ್​​ಗಳನ್ನ ರಾಯ್​ಪುರದಲ್ಲೂ ಬೆಂಡೆತ್ತಿದ್ರು. ಸಾಲಿಡ್​ ಫಾರ್ಮ್​ ಮುಂದುವರೆಸಿದ ಕೊಹ್ಲಿ 47 ಎಸೆತಗಳಲ್ಲಿ ಹಾಫ್​ ಸೆಂಚುರಿ ಬಾರಿಸಿದ್ರು.

ಗಾಯಕ್ವಾಡ್ ಕ್ಲಾಸ್​ ಆಟ 

ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಋತುರಾಜ್​ ಗಾಯಕ್ವಾಡ್​ ಕೂಡ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ್ರು. ಕೊಹ್ಲಿ ಜೊತೆಗೆ ಕ್ಯಾಲ್ಕ್ಯಲೇಟೆಡ್​ ಇನ್ನಿಂಗ್ಸ್​ ಕಟ್ಟಿದ ಋತುರಾಜ್​ ಬೌಂಡರಿ, ಸಿಕ್ಸರ್​ ಸಿಡಿಸಿ ರಂಜಿಸಿದ್ರು. 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು. ಅರ್ಧಶತಕದ ಬಳಿಕ ಋತುರಾಜ್​ ಮತ್ತಷ್ಟು ಅಬ್ಬರದ ಆಟವಾಡಿದ್ರು. ಬೌಂಡರಿ, ಸಿಕ್ಸರ್​ಗಳಲ್ಲೇ ರನ್​ ಡೀಲ್​ ಮಾಡಿದ ಋತುರಾಜ್​​ ಜಸ್ಟ್​ 77 ಎಸೆತಗಳಲ್ಲಿ ಚೊಚ್ಚಲ ಒನ್​ ಡೇ ಶತಕ ಸಿಡಿಸಿದ್ರು.

Advertisment

ಕಿಂಗ್​ ವಿರಾಟ್​ ಕೊಹ್ಲಿ ರಾಯ್​ಪುರದಲ್ಲಿ ಪ್ರೈಮ್​ ಫಾರ್ಮ್​ ನೆನಪಿಸಿದ್ರು. ಲೀಲಾಜಾಲವಾಗಿ ರನ್​ಗಳಿಸಿದ ರನ್​ಮಷೀನ್​ ಸತತ 2ನೇ ಸೆಂಚುರಿ ಸಿಡಿಸಿದ್ರು. 90 ಎಸೆತಗಳಲ್ಲಿ 53ನೇ ಏಕದಿನ ಶತಕ ಪೂರೈಸಿ ಕೊಹ್ಲಿ ಸಂಭ್ರಮಿಸಿದ್ರು. ಕೊಹ್ಲಿ, ಋತರಾಜ್​ 195 ರನ್​ಗಳ ಜೊತೆಯಾಟವನ್ನ ಮಾರ್ಕೋ ಯಾನ್ಸೆನ್​ ಬ್ರೇಕ್​ ಮಾಡಿದ್ರು. ಋತುರಾಜ್​ 105 ರನ್​ಗಳಿಸಿ ನಿರ್ಗಮಿಸಿದ್ರು. ವಿರಾಟ್​ ಕೊಹ್ಲಿ ಆಟ 102 ರನ್​ಗಳಿಗೆ ಅಂತ್ಯವಾಯ್ತು. ಬಳಿಕ ಬ್ಯಾಟಿಂಗ್​ಗೆ ಬಂದ ವಾಷಿಂಗ್ಟನ್​ ಸುಂದರ್​ ರನೌಟ್​ ಆದ್ರು. 

ರಾಹುಲ್​ ಅಬ್ಬರ.. 

ನಾಯಕ ಕೆ.ಎಲ್​ ರಾಹುಲ್​ ಅಬ್ಬರದ ಅರ್ಧಶತಕ ಸಿಡಿಸಿದ್ರು. ಬಿರುಸಿನ ಆಟವಾಡಿದ ರಾಹುಲ್​ 6 ಬೌಂಡರಿ, 2 ಸಿಕ್ಸರ್​ ಸಿಡಿಸಿದ್ರು. 43 ಎಸೆತಗಳಲ್ಲಿ ರಾಹುಲ್​ ಅಜೇಯ 66 ರನ್​ಗಳಿಸಿದ್ರು. ರಾಹುಲ್​ಗೆ ಸಾಥ್​ ನೀಡಿದ ಜಡೇಜಾ ಅಜೇಯ 24 ರನ್​ಗಳ ಕಾಣಿಕೆ ನೀಡಿದ್ರು. ಅಂತಿಮವಾಗಿ 50 ಓವರ್​ಗಳ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 358 ರನ್​ಗಳ ಬೃಹತ್​ ಸ್ಕೋರ್​ ಕಲೆ ಹಾಕಿತು. 

ಇದನ್ನೂ ಓದಿ:ನಾಲ್ಕೂವರೆ ತಿಂಗಳು ಕೊಹ್ಲಿ ಜಾಲಿ ಜಾಲಿ, ಕಾಂಪಿಟೆಟೀವ್ ಕ್ರಿಕೆಟ್​​ ಆಡದಿದ್ದರೂ ಶತಕ ಬಾರಿಸಿದ್ದೇಗೆ..?

Advertisment

Virat kohli (1)

359 ರನ್​ಗಳ ಬಿಗ್​ ಟಾರ್ಗೆಟ್​ ಚೇಸಿಂಗ್​ಗಿಳಿದ ಸೌತ್​ ಆಫ್ರಿಕಾ ತಂಡಕ್ಕೆ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಅನುಭವಿ ಓಪನರ್​ ಕ್ವಿಂಟನ್​ ಡಿ ಕಾಕ್​ ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ರು. ಆರ್ಷ್​​ದೀಪ್​ ಬೌಲಿಂಗ್​ನಲ್ಲಿ ಸುಂದರ್​ಗೆ ಕ್ಯಾಚ್​ ನೀಡಿ ಡಿಕಾಕ್​ ಔಟಾದ್ರು. ಆರಂಭದಲ್ಲೇ ವಿಕೆಟ್​ ಕಳೆದುಕೊಂಡ ತಂಡಕ್ಕೆ ನಾಯಕ ಟೆಂಬಾ ಬವುಮಾ, ಏಡೆನ್ ಮರ್ಕರಮ್​ ಚೇತರಿಕೆ ನೀಡಿದ್ರು. 2ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದ್ರು. 48 ಎಸೆತ ಎದುರಿಸಿದ ಟೆಂಬಾ ಬವುಮಾ 1 ಸಿಕ್ಸರ್​, 3 ಬೌಂಡರಿ ಸಹಿತ 46 ರನ್​ಗಳಿಸಿದ್ರು. 21ನೇ ಓವರ್​ ಕೊನೆಯ ಎಸೆತದಲ್ಲಿ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಬವುಮಾಗೆ ಪೆವಿಲಿಯನ್​ ದಾರಿ ತೋರಿಸಿದ್ರು. 

ಕ್ಲಾಸ್​ ಆಟವಾಡಿದ ಏಡೆನ್​ ಮರ್ಕರಮ್​ ಇಂಡಿಯನ್​ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಿದ್ರು. ಅರ್ಧಶತಕದ ಪೂರೈಸಿದ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್​ ಕ್ಯಾಚ್​ ಡ್ರಾಪ್​ ಮಾಡಿ ಜೀವದಾನ ನೀಡಿದ್ರು. ಬಳಿಕ ಬಿರುಸಿನ ಬ್ಯಾಟಿಂಗ್​ ನಡೆಸಿದ ಮರ್ಕರಮ್​ ಜಸ್ಟ್​ 88 ಎಸೆತಗಳಲ್ಲೇ ಶತಕ ಸಿಡಿಸಿದ್ರು. ಶತಕದ ಬೆನ್ನಲ್ಲೇ ಮರ್ಕರಮ್​, ಹರ್ಷಿತ್​ ರಾಣಾಗೆ ವಿಕೆಟ್​ ಒಪ್ಪಿಸಿದ್ರು. ಬಳಿಕ ಮ್ಯಾಥ್ಯೂ ಬ್ರಿಟ್ಜ್​ಕೀ-ಡೆವಾಲ್ಡ್​ ಬ್ರೆವಿಸ್ 92 ರನ್​ಗಳ ಅದ್ಭುತ​ ಜೊತೆಯಾಟವಾಡಿದ್ರು. ಬ್ರಿಟ್ಜ್​​ಕೀ 49 ಎಸೆತಗಳಲ್ಲೇ ಹಾಫ್​ ಸೆಂಚುರಿ ಸಿಡಿಸಿದ್ರು.

ಇದನ್ನೂ ಓದಿ:ಕಿಂಗ್ ವಿರಾಟ್ ಕೊಹ್ಲಿ ಮತ್ತೊಂದು ಭರ್ಜರಿ ಶತಕ..! ಹೇಗಿತ್ತು ಶತಕ ವೈಭವ..?

Advertisment

ಇನ್ನೊಂದೆಡೆ 158ರ ಸ್ಟ್ರೈಕ್​​ರೇಟ್​ನಲ್ಲಿ ಅಬ್ಬರಿಸಿದ ಬ್ರೆವಿಸ್​ 34 ಎಸೆತಗಳಲ್ಲೇ 54 ರನ್​ ಸಿಡಿಸಿದ್ರು. ಹಾಫ್​ ಸೆಂಚುರಿ ಬೆನ್ನಲ್ಲೇ ಬ್ರೆವಿಸ್, ಕುಲ್​​ದೀಪ್​ ಯಾದವ್​ಗೆ ಬಲಿಯಾದ್ರು. ಬ್ರಿಟ್ಜ್​​ಕೀ ಆಟ ಕೂಡ 68 ರನ್​ಗಳಿಗೆ ಅಂತ್ಯವಾಯ್ತು. ಬಳಿಕ ಕಣಕ್ಕಿಳಿದ ಮಾರ್ಕೋ ಯಾನ್ಸೆನ್​ ಜಸ್ಟ್​ 2 ರನ್​ಗಳಿಸಿ ಔಟಾದ್ರು. ಉತ್ತಮ ಬ್ಯಾಟಿಂಗ್​ ನಡೆಸ್ತಾ ಇದ್ದ ಟೊನಿ ಝಿ ಜೋರ್ಜಿ ಇಂಜುರಿಗೆ ತುತ್ತಾಗಿ ನಿರ್ಗಮಿಸಿದ್ರು. ಆದ್ರೆ, ಇದ್ರಿಂದ ಸೌತ್​ ಆಫ್ರಿಕಾಗೆ ಏನು ಹಿನ್ನಡೆಯಾಗಲಿಲ್ಲ. 

ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಕೇಶವ್​ ಮಹಾರಾಜ್​, ಕಾರ್ಬಿನ್​ ಬೋಷ್​ ವಿಕೆಟ್ ಮಧ್ಯೆ ಓಡಿಯೇ ರನ್​ ಕೊಳ್ಳೆ ಹೊಡೆದ್ರು. ಒತ್ತಡದ ನಡುವೆ ಕೂಲ್​ & ಕಾಮ್​ ಆಟವಾಡಿದ ಈ ಜೋಡಿ ಸೌತ್​ ಆಫ್ರಿಕಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 4 ಬಾಲ್​ ಮೊದಲೇ ಬರೋಬ್ಬರಿ 362 ರನ್​ ಕಲೆ ಹಾಕಿದ ಸೌತ್​ ಆಫ್ರಿಕಾ 4 ವಿಕೆಟ್​ಗಳ ಜಯ ಸಾಧಿಸಿತು. ಇದ್ರೊಂದಿಗೆ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿತು. ವೈಜಾಗ್​ನಲ್ಲಿ ನಡೆಯೋ 3ನೇ ಏಕದಿನ ಪಂದ್ಯಕ್ಕೆ ಫೈನಲ್​ ಟಚ್​ ಸಿಗ್ತು.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಮತ್ತೆ ಶತಕಗಳ ಗತ ವೈಭವ.. ಋತುರಾಜ್ ಕಂಬ್ಯಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Team India Ind vs SA India vs South Africa
Advertisment
Advertisment
Advertisment