Advertisment

ಕೊಹ್ಲಿ ಶತಕದ ಹಿಂದೆ ಕನ್ನಡಿಗ KL ರಾಹುಲ್ ಪಾತ್ರ.. ಅದು ಹೆಂಗೆ..?

ಕೊಹ್ಲಿ 2027 ಏಕದಿನ ವಿಶ್ವಕಪ್ ಆಡ್ತಾರಾ? ODIಗೆ ನಿವೃತ್ತಿ ಹೇಳ್ತಾರಾ? ಕ್ರಿಕೆಟ್​ನಿಂದಲೇ ದೂರವಾಗೋ ಪ್ಲಾನ್ ಮಾಡ್ತಿದ್ದಾರಾ? ಈ ಎಲ್ಲಾ ಪ್ರಶ್ನೆಗಳು ಅಭಿಮಾನಿಗಳ ಕಾಡ್ತಿತ್ತು. ವಿರಾಟ್ ಆ ಒಂದೇ ಒಂದು ಇನ್ನಿಂಗ್ಸ್​ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಈ ಇನ್ನಿಂಗ್ಸ್​ಗೆ ಕ್ಯಾಪ್ಟನ್ ರಾಹುಲ್ ಕಾರಣ.

author-image
Ganesh Kerekuli
Virat kohli
Advertisment
  • ಬಾಂಗ್ಲಾ ಬೌಲರ್​ಗಳಿಗೆ ವಿರಾಟ ದರ್ಶನ..!
  • ದುಬೈನಲ್ಲಿ ಆಪ್ಘನ್ ವಿರುದ್ಧ ಕೊಹ್ಲಿ ದರ್ಬಾರ್..!
  • ರಾಯ್​​ಪುರ್, ವೈಜಾಗ್​​​ನಲ್ಲೂ ಕಿಂಗ್ ಅಬ್ಬರ..?

ರಾಂಚಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್​​ಗೆ ವಿಶ್ವವೇ ಸಲಾಂ ಹೊಡೆದಿದೆ. ಕೊಹ್ಲಿಯ ಆ ಕವರ್​ ಡ್ರೈವ್ಸ್, ಸೂಪರ್ ಸಿಕ್ಸಸ್​​, ನೋಡೋದಕ್ಕೆ ಎರಡು ಕಣ್ಣು ಸಾಲದು. ಕೊಹ್ಲಿಯ ರನ್ನಿಂಗ್ ಬಿಟ್ವೀನ್ ದ ವಿಕೆಟ್ಸ್​, ಯುವಕರನ್ನೂ ನಾಚುವಂತಿತ್ತು. ಕೊಹ್ಲಿಯ ಆ ಔಟ್​ಸ್ಟ್ಯಾಂಡಿಂಗ್ ಇನ್ನಿಂಗ್ಸ್​ ಹಿಂದೆ, ಹತ್ತಾರು ಲೆಕ್ಕಾಚಾರ ಇದೆ. ರಾಂಚಿಯಲ್ಲಿ ವಿರಾಟ ವೀರಾವೇಶಕ್ಕೆ, ಕ್ಯಾಪ್ಟನ್ ಕೆ.ಎಲ್.ರಾಹುಲ್​​​​​​ಗೆ ಕ್ರೆಡಿಟ್ ಕೊಡಲೇಬೇಕು.    

Advertisment

ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ವಿರಾಟ್​​​​​​ ಕೊಹ್ಲಿ, ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡಿದ್ದಾರೆ. ಅದು ಏಕದಿನ ಇರಲಿ.. ಟಿ-20 ಇರಲಿ.. ರಾಹುಲ್ ತಂಡದ ಸಾರಥ್ಯ ವಹಿಸಿಕೊಂಡಾಗಲೆಲ್ಲಾ ಕೊಹ್ಲಿ, ಹಿಟ್ ಫರ್ಫಾಮೆನ್ಸ್ ನೀಡಿದ್ದಾರೆ. ಕೊಹ್ಲಿಗೆ ಆಪ್ತಮಿತ್ರ ಕೆ.ಎಲ್.ರಾಹುಲ್, ಅದೃಷ್ಟದ ನಾಯಕನಾಗಿದ್ದಾರೆ. ಇದು ಒಂದಲ್ಲ..ಎರಡಲ್ಲ.. ಪದೇ ಪದೇ ಪ್ರೂವ್ ಆಗಿದೆ.

ಇದನ್ನೂ ಓದಿ: ಭಾರತದ ODI ಕ್ರಿಕೆಟ್ ತಂಡದಲ್ಲಿ ಬಿರುಕು.. ಮೂವರ ಮಧ್ಯೆ ಮೌನ ಯುದ್ಧ..!  

KL Rahul (2)
KL Rahul Photograph: (BCCI)

ಕೊಹ್ಲಿ ವೀರಾವೇಶ..!

ರಾಂಚಿಯಲ್ಲಿ ಱಂಬೋ ರೀತಿ ಬ್ಯಾಟಿಂಗ್ ನಡೆಸಿದ ವಿರಾಟ್ ಆಫ್ರಿಕನ್ ಬೌಲರ್​ಗಳ ಮೇಲೆ ಸವಾರಿ ನಡೆಸಿದ್ರು. ವಿರಾಟ್ ವಿರಾವೇಶಕ್ಕೆ ಬೆಚ್ಚಿಬಿದ್ದ ಹರಿಣಗಳು, ಜೆಎಸ್​ಸಿಎ ಸ್ಟೇಡಿಯಮ್​ನಲ್ಲಿ ಸೈಲೆಂಟ್ ಆಗ್ಬಿಟ್ರು. 11 ಬೌಂಡರಿ, 7 ಭರ್ಜರಿ ಸಿಕ್ಸರ್​ ಸಿಡಿಸಿದ ಕಿಂಗ್ ಕೊಹ್ಲಿ, ಆಫ್ರಿಕನ್ ಬೌಲರ್​ಗಳನ್ನ ಮನಬಂದಂತೆ ದಂಡಿಸಿದ್ರು.

Advertisment

ಡಿಸೆಂಬರ್ 10, 2022. ಬಾಂಗ್ಲಾದ ಚಿತ್ತಗಾಂಗ್​ ಏಕದಿನ ಪಂದ್ಯದಲ್ಲಿ, ಕೊಹ್ಲಿ ಅಬ್ಬರಕ್ಕೆ ಬಾಂಗ್ಲಾ ಟೈಗರ್ಸ್ ಬೆಚ್ಚಿಬಿದ್ರು. ಕೇವಲ 91 ಎಸೆತಗಳಲ್ಲಿ 113 ರನ್​​ ಚಚ್ಚಿದ ವಿರಾಟ್, ಬಾಂಗ್ಲಾ ಬೌಲರ್​ಗಳ ಬೆವರಿಳಿಸಿದ್ರು. ತವರಿನಲ್ಲಿ ಕೊಹ್ಲಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ವಿಫಲವಾದ ಟೈಗರ್ಸ್, ಹೀನಾಯ ಸೋಲು ಅನುಭವಿಸಿದ್ರು.

ದುಬೈನಲ್ಲಿ ಆಪ್ಘನ್ ವಿರುದ್ಧ ಕೊಹ್ಲಿ ದರ್ಬಾರ್

ಸೆಪ್ಟೆಂಬರ್ 8, 2022. ದುಬೈನಲ್ಲಿ ನಡೆದ ಏಷ್ಯಾಕಪ್ T20 ಪಂದ್ಯದಲ್ಲಿ, ಕಿಂಗ್ ವಿರಾಟ್ ದರ್ಬಾರ್ ನಡೆಸಿದ್ರು. ಆಫ್ಘಾನಿಸ್ತಾನ್ ಬೌಲರ್​ಗಳನ್ನ ಬೆಂಡೆತ್ತಿದ್ದ ಕೊಹ್ಲಿ, ಭರ್ಜರಿ ಶತಕ ಸಿಡಿಸಿ ಮಿಂಚಿದ್ರು. 61 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ ಸಿಡಿಸಿದ ವಿರಾಟ್, ಅಜೇಯ 122 ರನ್​​ ಸಿಡಿಸಿದ್ರು. ಆ ಪಂದ್ಯದಲ್ಲಿ ಕೊಹ್ಲಿ ಆಟಕ್ಕೆ ಆಫ್ಘನ್ ಬೌಲರ್​ಗಳನ್ನ ಕೊಹ್ಲಿ ಅಡ್ರೆಸ್ ಇಲ್ಲದಂತೆ ಮಾಡಿಬಿಟ್ರು. 

ಇದನ್ನೂ ಓದಿ:ಬ್ರೇಕ್​ಫಾಸ್ಟ್ ಮೀಟಿಂಗ್ ಬೆನ್ನಲ್ಲೇ ಅಲರ್ಟ್​.. ಜಾರಕಿಹೊಳಿ, ಪರಮೇಶ್ವರ್ ಸಿಕ್ರೇಟ್ ಮೀಟಿಂಗ್..!

Advertisment

ರಾಹುಲ್ ನಾಯಕತ್ವದಲ್ಲಿ ಕೊಹ್ಲಿ

ಒಟ್ಟಾರೆ ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಕೊಹ್ಲಿ 5 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 73ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್​ಗಳಿಸಿರುವ ವಿರಾಟ್, 2 ಶತಕ ಮತ್ತು 2 ಅರ್ಧಶತಗಳನ್ನ ಸಿಡಿಸಿದ್ದಾರೆ. ಹಾಗೆಯೇ ರಾಹುಲ್ ನಾಯಕತ್ವದಲ್ಲಿ ಆಡಿದ ಏಕೈಕ ಟಿ-20 ಪಂದ್ಯದಲ್ಲಿ ಅಜೇಯ 122 ರನ್​​ ಬಾರಿಸಿದ್ದಾರೆ. ಕೊಹ್ಲಿ ಸೂಪರ್ಬ್​​​​​ ಫಾರ್ಮ್​ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದಾರೆ. 37 ವರ್ಷವಾದ್ರೂ ಆನ್​ಫೀಲ್ಡ್​ನಲ್ಲಿ ಕಿಂಗ್ ಕೊಹ್ಲಿಯ ಇಂಟೆಂಸಿಟಿ ಸ್ವಲ್ಪವೂ ಕಡಿಮೆಯಾಗಿಲ್ಲ. 

ರಾಂಚಿ​​ ಏಕದಿನ ಪಂದ್ಯದ ಶತಕ ವೀರ ವಿರಾಟ್ ಕೊಹ್ಲಿ ಗ್ರೇಟ್ ಫಾರ್ಮ್​​ನಲ್ಲಿ ಇದ್ದಂತೆ ಕಾಣ್ತಿದ್ದಾರೆ. ಸಿಡ್ನಿಯಲ್ಲಿ ಕಾಂಗರೂಗಳನ್ನ ಕಂಗಾಲ್ ಮಾಡಿದ್ದ ವಿರಾಟ್ ಇದೀಗ ಆಫ್ರಿಕನ್ನರಿಗೂ ವಿಲನ್ ಆಗಿ ಕಾಡ್ತಿದ್ದಾರೆ. ಕೆಎಲ್ ನಾಯಕತ್ವದಲ್ಲಿ ಕೊಹ್ಲಿಯ ಆರ್ಭಟ ಹೀಗೆ ಮುಂದುವರೆಯಲಿ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli KL Rahul
Advertisment
Advertisment
Advertisment