/newsfirstlive-kannada/media/media_files/2025/12/03/team-india-7-2025-12-03-09-52-22.jpg)
ಭಾರತ-ಸೌತ್​ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯಕ್ಕೆ ಕೌಂಟ್​ಡೌನ್​ ಆರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ರಾಯ್​​ಪುರದಲ್ಲಿ ಮಹತ್ವದ ಕದನ ಆರಂಭವಾಗಲಿದೆ. ಮೊದಲ ಪಂದ್ಯ ಗೆದ್ದಿರೋ ಟೀಮ್​ ಇಂಡಿಯಾ ಇಂದೇ ಸರಣಿ ಗೆದ್ದು ಬೀಗೋ ತವಕದಲ್ಲಿದೆ. ಇದ್ರ ನಡುವೆ ಟೀಮ್​ ಇಂಡಿಯಾ ಕ್ಯಾಂಪ್​ನಿಂದ ಸ್ಪೋಟಕ ಸುದ್ದಿ ಹೊರಬಿದ್ದಿದೆ. ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಆಘಾತದ ವಿಚಾರ ರಿವೀಲ್​ ಆಗಿದೆ.
ಟೀಮ್​ ಇಂಡಿಯಾ ಏಕದಿನ ತಂಡದಲ್ಲಿ ಬಿರುಕು
ಟೀಮ್​ ಇಂಡಿಯಾದ ಏಕದಿನ ತಂಡದಲ್ಲಿ ಬಿರುಕು ಸೃಷ್ಟಿಯಾಗಿದೆ. ಒಗ್ಗಟ್ಟಿನ ಮಂತ್ರ ಜಪಿಸ್ತಾ ಇದ್ದ ಟೀಮ್​ ಇಂಡಿಯಾದಲ್ಲಿ ಆಂತರಿಕ ಯುದ್ಧ ಆರಂಭವಾಗಿದೆ. ಹೆಡ್​ ಕೋಚ್​ ಗೌತಮ್​ ಗಂಭೀರ್​ ಸರ್ವಾಧಿಕಾರವೇ ಈ ಸಮಸ್ಯೆಗೆ ಮೂಲ ಕಾರಣ. ಅಂದ್ಹಾಗೆ ಗಂಭೀರ್​ ಎದುರು ಸಿಡಿದೆದ್ದಿರೋದು ಯಾರು ಗೊತ್ತಾ? ಟೀಮ್​ ಇಂಡಿಯಾದ ಸೀನಿಯರ್​ ಆಟಗಾರರಾದ ವಿರಾಟ್​ ಕೊಹ್ಲಿ & ರೋಹಿತ್​ ಶರ್ಮಾ!
ಇದನ್ನೂ ಓದಿ: ಸರಣಿ ಗೆಲುವಿನ ಮೇಲೆ ಟೀಮ್​ ಇಂಡಿಯಾ ಕಣ್ಣು.. ಆದರೂ ಚಿಂತೆಗೀಡು ಮಾಡಿದೆ ಇಬ್ಬರ ಫಾರ್ಮ್​..!
/filters:format(webp)/newsfirstlive-kannada/media/media_files/2025/12/03/kl-rahul-3-2025-12-03-08-32-02.jpg)
ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ.. ಇಬ್ಬರೂ ಸೀನಿಯರ್ಸ್​ ಪ್ಲೇಯರ್ಸ್​​ ಹೆಡ್​ ಕೋಚ್​ ಗೌತಮ್​ ಗಂಭೀರ್​ ಮೇಲೆ ಸಮರ ಸಾರಿದ್ದಾರಂತೆ. ರೋಹಿತ್​ ಶರ್ಮಾ ಆದ್ರೂ ಗಂಭೀರ್​ ಜೊತೆಗೆ ಮಾತುಕತೆಯನ್ನಾದ್ರೂ ನಡೆಸ್ತಿದ್ದಾರೆ. ವಿರಾಟ್​ ಕೊಹ್ಲಿ ಗಂಭೀರ್​ ಜೊತೆಗೆ ಒನ್​ ಟು ಒನ್​ ಮಾತುಕತೆನ್ನೂ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಆರಂಭವಾಗಿರೋ ಈ ಮೌನ ಯುದ್ಧ ಇದೀಗ ಬಿಸಿಸಿಐನ ತಲೆ ಕೆಡಿಸಿದೆ.
2025ರ ಐಪಿಎಲ್​ ನಡುವೆಯೇ ಟೆಸ್ಟ್​ ಫಾರ್ಮೆಟ್​ಗೆ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ನಿವೃತ್ತಿ ಘೋಷಿಸಿದ್ದು ನಿಮಗೆ ಗೊತ್ತೇಯಿದೆ. ಅಸಲಿಗೆ ಸ್ವಇಚ್ಚೆಯಿಂದ ಘೋಷಿಸಿದ ನಿವೃತ್ತಿ ಅದಲ್ಲ. ಗಂಭೀರ್ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಇಬ್ಬರೂ ಟೆಸ್ಟ್​ಗೆ ಗುಡ್​ ಬೈ ಹೇಳಿದ್ರು. ಅದಾದ ಬಳಿಕ ಒನ್​ ಡೇ ಫಾರ್ಮೆಟ್​ ಇಬ್ಬರನ್ನ ಹೊರಗಿಡಲು ಹಲವು ಪ್ರಯತ್ನಗಳು ನಡೆದಿದ್ದು ರಹಸ್ಯವಾಗೇನು ಉಳಿದಿಲ್ಲ. ತಮ್ಮನ್ನ ನಡೆಸಿಕೊಂಡ ರೀತಿಗೆ ಬೇಸರಗೊಂಡಿರೋ ರೋಹಿತ್​-ಕೊಹ್ಲಿ ಹೆಡ್​ಕೋಚ್​ ಜೊತೆಗೆ ಮಾತುಕತೆಯನ್ನ ನಿಲ್ಲಿಸಿದ್ದಾರಂತೆ.
ಪ್ರತ್ಯೇಕ ನೆಟ್ಸ್​​ನಲ್ಲಿ ರೋಹಿತ್​-ಕೊಹ್ಲಿ ಅಭ್ಯಾಸ
ಸೌತ್​ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಸಪರೇಡ್​ ಆಗಿ ಅಭ್ಯಾಸ ನಡೆಸ್ತಿದ್ದಾರೆ. ರಾಂಚಿಗೆ ಗಂಭೀರ್​ ಬಂದಿಳಿಯೋದ್ರೊಳಗೆ ರೋಹಿತ್​-ಕೊಹ್ಲಿ ತಮ್ಮ ಅಭ್ಯಾಸವನ್ನ ಮುಗಿಸಿದ್ರು. ಅದಾದ ಬಳಿಕ ನಡೆದ ಪ್ರಾಕ್ಟಿಸ್​ ಸೆಷನ್​ನಲ್ಲಿ ರೊ-ಕೊ ಭಾಗಿಯಾಗಿದ್ರಾದ್ರೂ, ಕೋಚ್​ ಗಂಭೀರ್​ರಿಂದ ಅಂತರ ಕಾಯ್ದುಕೊಂಡಿದ್ರು. ಹೆಡ್​ಕೋಚ್​ ಜೊತೆಗೆ ಮಾತುಕತೆಯನ್ನ ನಡೆಸದೆ ಇಬ್ಬರು ತಮ್ಮ ಪಾಡಿಗೆ ತಾವು ಅಭ್ಯಾಸ ನಡೆಸಿದ್ರು.
ಸೌತ್​ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸೆಲೆಕ್ಷನ್​ ಕಮಿಟಿಯ ಮೆಂಬರ್​​ ಪ್ರಗ್ಯಾನ್​ ಓಜಾ ಟೀಮ್​ ಇಂಡಿಯಾ ಜೊತೆಗೆ ಬೀಡುಬಿಟ್ಟಿದ್ದಾರೆ. ರಾಂಚಿಯಲ್ಲಿ ಕಾಣಿಸಿಕೊಂಡಿದ್ದ ಓಜಾ ಇದೀಗ ರಾಯ್​ಪುರದಲ್ಲೂ ತಂಡದೊಂದಿಗೆ ಇದ್ದಾರೆ. ಇಂಟರೆಸ್ಟಿಂಗ್​ ವಿಚಾರ ಏನಪ್ಪಾ ಅಂದ್ರೆ, ರೋಹಿತ್​, ಕೊಹ್ಲಿ ಹಾಗೂ ಗಂಭೀರ್ ನಡುವಿನ ಸಮಸ್ಯೆಯನ್ನ ಬಗೆಹರಿಸೋಕೆ ಪ್ರಗ್ಯಾನ್​ ಓಜಾನ ಬಿಸಿಸಿಐ ನೇಮಿಸಿದಯಂತೆ. ಪರಸ್ಪರ ಮಾತುಕತೆಯನ್ನ ಆಡದಿರೋ ಇವರ ನಡುವೆ ಮೀಡಿಯೇಟರ್​ ಆಗಿ ಓಜಾ ಕಾರ್ಯ ನಿರ್ವಹಿಸ್ತಾ ಇದ್ದಾರಂತೆ.
ಸೀನಿಯರ್ಸ್​ ಹಾಗೂ ಗಂಭೀರ್​ ಜೊತೆಗಿನ ಭಾಂದವ್ಯ ಸರಿಯಿಲ್ಲ ಎಂಬ ಸುದ್ದಿಯ ಕಳೆದ ಕೆಲ ದಿನಗಳಿಂದ ಹರಿದಾಡಿತ್ತು. ಇದೀಗ ನೋಡಿದ್ರೆ, ಕೊಹ್ಲಿ-ರೋಹಿತ್,​ ಗಂಭೀರ್​ ಜೊತೆಗೆ ಮಾತುಕತೆಯನ್ನೆ ನಿಲ್ಲಿಸಿದ್ದಾರೆ ಎಂಬ ಶಾಕಿಂಗ್​ ಸುದ್ದಿ ಹೊರಬಿದ್ದಿದೆ. ಈ ಸಮಸ್ಯೆಗೆ ಆದಷ್ಟು ಬೇಗ ಬಿಸಿಸಿಐ ಮದ್ದು ಹಚ್ಚಬೇಕಿದೆ. ಬಿಕ್ಕಟ್ಟು ದೊಡ್ಡ ಮಟ್ಟಕ್ಕೆ ಸೃಷ್ಠಿಯಾದ್ರೆ ನಷ್ಟ ಭಾರತೀಯ ಕ್ರಿಕೆಟ್​ಗೇ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us