Advertisment

ಈ ಬೆಡಗಿಗೆ ಸೋತೇ ಹೋದ ಅಯ್ಯರ್​.. ಸಿಕ್ರೇಟ್​ ರಿಲೇಷನ್​​​ಶಿಪ್​​ನಲ್ಲಿ ಬಿಗ್​ ಸ್ಟಾರ್ಸ್​..!

ಟೀಮ್​ ಇಂಡಿಯಾ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಶ್ರೇಯಸ್​​ ಅಯ್ಯರ್​ ಬಾಲಿವುಡ್​ ಬೆಡಗಿಗೆ ಕ್ಲೀನ್​ಬೋಲ್ಡ್​ ಆದ್ರಾ? ನಟಿಮಣಿಯೊಂದಿಗೆ ಡೇಟಿಂಗ್​ ನಡೆಸ್ತಿದ್ದಾರಾ? ಹೀಗೊಂದು ಚರ್ಚೆ ನಡೀತಿದೆ. ಮೃನಾಲ್​ ಠಾಕೂರ್​-ಶ್ರೇಯಸ್​ ಅಯ್ಯರ್​ ಡೇಟಿಂಗ್ ರೂಮರ್ಸ್​ ಸಂಚಲನವನ್ನ ಸೃಷ್ಟಿಸಿದೆ.

author-image
Ganesh Kerekuli
mrunal thakur and Iyer
Advertisment
  • ಬಾಲಿವುಡ್ ನಟಿಯೊಂದಿಗೆ ಮುಂಬೈಕರ್​ ಡೇಟಿಂಗ್..?
  • ಶ್ರೇಯಸ್​ ಜೊತೆ ಮೃನಾಲ್​ ಹೆಸರು ಸದ್ದು ಮಾಡ್ತಿರೋದೇಕೆ..?
  • ಧನುಷ್​​ ಜೊತೆಗೂ ಸುದ್ದಿಯಾಗಿತ್ತು ಮೃನಾಲ್​​ ಹೆಸರು.!

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್​ ಇಂಜುರಿಗೆ ತುತ್ತಾಗಿ ಕ್ರಿಕೆಟ್ ಫೀಲ್ಡ್​ನಿಂದ ದೂರಾಗಿದ್ದಾರೆ. ವಿಶ್ರಾಂತಿಗೆ ಜಾರಿರೋ ಶ್ರೇಯಸ್​ ರಿಲ್ಯಾಕ್ಸ್​ ಮೂಡ್​ನಲ್ಲಿ ಬಿಡುವಿನ ಟೈಮ್​ನ ಎಂಜಾಯ್​ ಮಾಡ್ತಿದ್ದಾರೆ. ಇದ್ರ ನಡುವೆ ಸಡನ್​ ಆಗಿ ಸೋಷಿಯಲ್​​ ಮೀಡಿಯಾದಲ್ಲಿ ಶ್ರೇಯಸ್​ ಹೆಸರು ಸಖತ್​ ಸೌಂಡ್​ ಮಾಡ್ತಿದೆ. ಟೀಮ್​ ಇಂಡಿಯಾದ ಮೋಸ್ಟ್​ ಎಲಿಜೆಬಲ್​ ಬ್ಯಾಚಲರ್​ ಶ್ರೇಯಸ್​​​ ಅಯ್ಯರ್​ರ ಡೇಟಿಂಗ್​ ಕಹಾನಿ ಹಲ್​ಚಲ್​ ಎಬ್ಬಿಸಿದೆ. 

Advertisment

ಇದನ್ನೂ ಓದಿ: ಗಂಭೀರ್, ಅಗರ್ಕರ್​ಗೆ ಬಿಸಿಸಿಐ ಕ್ಲಾಸ್, ಮೀಟಿಂಗ್​ನಲ್ಲಿ ಭಾರೀ ಬೆಳವಣಿಗೆ..

mrunal thakur and Iyer (3)

ಭಾರತೀಯ ಕ್ರಿಕೆಟ್ ಹಾಗೂ ಬಾಲಿವುಡ್​​ ನಡುವಿನ ಸಂಬಂಧ ಇಂದು, ನಿನ್ನೆಯದ್ದಲ್ಲ. ಈ ಎರಡರದ್ದು ಬೇರೆ ಬೇರೆ ಲೋಕವೇ ಆದ್ರೂ ಬಿಡಿಸಲಾಗದ ನಂಟಿದೆ. ಮನ್ಸೂರ್​ ಅಲಿ ಖಾನ್​ ಪಟೌಡಿಯಿಂದ ಹಿಡಿದು ಕೆ.ಎಲ್​ ರಾಹುಲ್​ವರೆಗೆ ಕ್ರಿಕೆಟರ್ಸ್​, ಬಾಲಿವುಡ್​ ಆ್ಯಕ್ಟರ್ಸ್​ ನಡುವೆ ಬೆಸುಗೆ ಬೆಸೆದ ಹಲವು ಲವ್​ ಸ್ಟೋರಿಗಳಿವೆ. ಇದ್ರಲ್ಲಿ ಕೆಲವು ಅರ್ಧಕ್ಕೆ ಮುರಿದು ಬಿದ್ರೆ, ಹಲವು ಸಕ್ಸಸ್​ ಕಂಡಿವೆ. ಇನ್ನು ರೂಮರ್ಸ್​ಗಳಾಗೆ ಉಳಿದ ಕೆಲವು ಕತೆಗಳೂ ಇವೆ. ಬಾಲಿವುಡ್ ನಟಿಯರು ಹಾಗೂ ಕ್ರಿಕೆಟರ್​​​ಗಳ ನಡುವಿನ ಡೇಟಿಂಗ್​​​​​​​​​​​​​​, ಮೀಟಿಂಗ್​​, ಲವ್​ಸ್ಟೋರಿಗಳು ಸದಾ ಚರ್ಚೆಯಲ್ಲಿರೋದಂತೂ ಸತ್ಯ. ಇದೀಗ ಅಂತದ್ದೇ ಚರ್ಚೆಗೆ ಆಹಾರವಾಗಿದ್ದಾರೆ ಶ್ರೇಯಸ್​ ಅಯ್ಯರ್.

ಸಿಕ್ರೇಟ್​ ರಿಲೇಷನ್​​​ಶಿಪ್​​ನಲ್ಲಿ ಶ್ರೇಯಸ್​ ಅಯ್ಯರ್?

ಇಂಜುರಿಗೆ ತುತ್ತಾಗಿ ಸದ್ಯ ಟೀಮ್ ಇಂಡಿಯಾದಿಂದ ಹೊರಬಿದ್ದಿರೋ ಶ್ರೇಯಸ್​ ಅಯ್ಯರ್​, ರಿಕವರಿ ಮೂಡ್​ನಲ್ಲಿದ್ದಾರೆ. ಮೈದಾನದಿಂದ ಹೊರಗಿದ್ರೂ ಸೋಶಿಯಲ್​ ಮಿಡಿಯಾದಲ್ಲಿ ಮಾತ್ರ ಶ್ರೇಯಸ್​ ಹಾಟ್ ಟಾಪಿಕ್ ಆಗಿದ್ದಾರೆ. ಅಯ್ಯರ್​​ ಡೇಟಿಂಗ್ ಸುದ್ದಿ ಹಲ್​​ಚಲ್​ ಎಬ್ಬಿಸಿದೆ. ಬಾಲಿವುಡ್​​ ಸ್ಟಾರ್​ ನಟಿಯೊಂದಿಗೆ ಶ್ರೇಯಸ್​ ಅಯ್ಯರ್​, ಡೇಟಿಂಗ್ ನಡೆಸ್ತಿದ್ದಾರೆ ಎಂಬ ರೂಮರ್ಸ್​ ಕೇಳಿ ಬಂದಿದೆ. ಅಂದ್ಹಾಗೆ ಅಯ್ಯರ್ ಜೊತೆಗೆ ತಳುಕು ಹಾಕಿಕೊಂಡಿರುವ ನಟಿ ಮಣಿ ಬೇರ್ಯಾರು ಅಲ್ಲ. ಬಾಲಿವುಡ್​ ಬ್ಯೂಟಿ ಮೃನಾಲ್​ ಠಾಕೂರ್​.!

Advertisment

ಇದನ್ನೂ ಓದಿ: ಬೆಂಗಳೂರು ಜೈಲಿನಲ್ಲಿ ಊಟ, ತಿಂಡಿ ಬಿಟ್ಟು ಕೈದಿಗಳ ಪ್ರತಿಭಟನೆ : ಕೈದಿಗಳ ಬೇಡಿಕೆ ಏನು ಗೊತ್ತಾ?

mrunal thakur and Iyer (2)

ನಟಿ ಮೃನಾಲ್ ಠಾಕೂರ್​ ಹಾಗೂ ಶ್ರೇಯಸ್​​ ಅಯ್ಯರ್​ ಡೇಟಿಂಗ್​ನ ಸುದ್ದಿ ಸದ್ಯ ಬಾಲಿವುಡ್​ ಹಾಗೂ ಕ್ರಿಕೆಟ್​ ಅಂಗಳದಲ್ಲಿ ಸಖತ್​ ಸದ್ದು ಮಾಡ್ತಿದೆ. ಕಳೆದ ಕೆಲ ತಿಂಗಳಿಂದ ಇಬ್ಬರೂ ಗಪ್​ಚುಪ್​ ಡೇಟಿಂಗ್​ ನಡೆಸ್ತಿದ್ದಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡ್ತಿದ್ದಾರೆ. ಇಂಜುರಿಯಿಂದ ಚೇತರಿಸಿಕೊಳ್ತಿರೋ ಶ್ರೇಯಸ್​ ಅಯ್ಯರ್​ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅತ್ತ ಮೃನಾಲ್ ಠಾಕೂರ್​ ಕೂಡ ವಿದೇಶ ಪ್ರವಾಸದಲ್ಲಿದ್ದಾರೆ ಎನ್ನಲಾಗ್ತಿದೆ. ಡೇಟಿಂಗ್​ ರೂಮರ್ಸ್​ನ ಈ ಫಾರಿನ್​ ಟೂರ್​ ಮತ್ತಷ್ಟು ಸುದ್ದಿಯಾಗುವಂತೆ ಮಾಡಿದೆ.   

ಈ ಹಿಂದೆ ಸೋಷಿಯಲ್​ ಮೀಡಿಯಾಗಳಲ್ಲಿ ಶ್ರೇಯಸ್​ ಹಾಗೂ ಮೃನಾಲ್​ ಫಾಲೋ ಮಾಡ್ತಾ ಇರಲಿಲ್ಲ. ಆದ್ರೆ, ಕಳೆದ ಕೆಲ ತಿಂಗಳಿಂದ ಇನ್ಸ್​​ಸ್ಟಾಗ್ರಾಂನಲ್ಲಿ ಪರಸ್ಪರ ಫಾಲೋ ಮಾಡ್ತಿದ್ದಾರೆ. ಇದು ಕೂಡ ಡೇಟಿಂಗ್​ ರೂಮರ್ಸ್​ಗೆ ಪುಷ್ಠಿಯನ್ನ ನೀಡಿದೆ. 

Advertisment

ಇದನ್ನೂ ಓದಿ:ಗಂಭೀರ್, ಅಗರ್ಕರ್​ಗೆ ಬಿಸಿಸಿಐ ಕ್ಲಾಸ್, ಮೀಟಿಂಗ್​ನಲ್ಲಿ ಭಾರೀ ಬೆಳವಣಿಗೆ..

mrunal thakur and Iyer (1)

ಕುಂಕುಮ್​ ಭಾಗ್ಯ ಅನ್ನೋ ಸೀರಿಯಲ್​ ನೊಂದಿಗೆ ಬಣ್ಣದ ಲೋಕಕ್ಕೆ ಡೆಬ್ಯೂ ಮಾಡಿದ ಮೃನಾಲ್, ಬಾಲಿವುಡ್​ ಬೇಡಿಕೆಯ ನಟಿಯಲ್ಲಿ ಒಬ್ಬರಾಗಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿದ ಸುಪರ್​​ 30, ಬಾಟ್ಲಾ ಹೌಸ್​​ ಸಕ್ಸಸ್​ ತಂದುಕೊಟ್ರೆ, ಸೀತಾ ರಾಮ್​ ಚಿತ್ರದೊಂದಿಗೆ ಪ್ಯಾನ್​​ ಇಂಡಿಯಾ ಸ್ಟಾರ್​​ ಪಟ್ಟ ಸಿಕ್ಕಿದೆ. ತೆಲುಗಿನ ಹೈ ನಾನಾ ಚಿತ್ರ ಮೃನಾಲ್​​ ಠಾಕೂರ್​ ಕರಿಯರ್​ನ ಸೂಪರ್​ ಹಿಟ್​ ಚಿತ್ರವಾಗಿದೆ. 

ಧನುಷ್​​ ಜೊತೆಗೂ ಸದ್ದು ಮಾಡಿತ್ತು ಮೃನಾಲ್​​ ಹೆಸರು

ಶ್ರೇಯಸ್​​ ಅಯ್ಯರ್​ ಜೊತೆಗೆ ಥಳುಕು ಹಾಕಿಕೊಂಡಿರೋ ಮೃನಾಲ್​ ಠಾಕೂರ್​ ಹೆಸರು ಕೆಲ ದಿನಗಳ ಹಿಂದೆ ಸೌತ್​ ಸೂಪರ್​ಸ್ಟಾರ್​​ ಧನುಷ್​ ಜೊತೆಗೆ ಸುತ್ತಾಡಿತ್ತು. ಧನುಷ್​​ ಹಾಗೂ ಮೃನಾಲ್​ ಸೋಷಿಯಲ್​ ಮೀಡಿಯಾಗಳಿಗೆ ಪರಸ್ಪರ ಕಮೆಂಟ್​ ಮಾಡಿಕೊಂಡಿದ್ರು. ಸನ್​ ಆಫ್​ ಸರ್ಧಾರ್​ 2 ಚಿತ್ರದ ಪ್ರೀಮಿಯರ್​ ಶೋನಲ್ಲೂ ಇಬ್ಬರು ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಇಬ್ಬರೂ ಹಗ್​ ಮಾಡಿಕೊಂಡ ದೃಶ್ಯ ವೈರಲ್​ ಆದ ಬಳಿಕ ಇಬ್ಬರ ನಡುವಿನ ಡೇಟಿಂಗ್​ ರೂಮರ್ಸ್ ಜೋರಾಗಿ ಸುದ್ದಿಯಾಗಿತ್ತು.

Advertisment

mrunal thakur

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಟ್ಟಿನಲ್ಲಿ ಕಳೆದ ಕೆಲ ವಾರಗಳಿಂದ ಡೇಟಿಂಗ್​ನ ಗುಸುಗುಸು ಜೋರಾಗಿ ಸದ್ದು ಮಾಡ್ತಿದ್ರೂ ಮೃನಾಲ್​, ಶ್ರೇಯಸ್​ ಇಬ್ಬರೂ ಸೈಲೆಂಟ್​​ ಆಗಿದ್ದಾರೆ. ಇದನ್ನ ಮೌನ ಸಮ್ಮತಿ ಲಕ್ಷಣಂ ಅನ್ನಬೇಕೋ? ನಗ್ಲೇಟ್​ ಮಾಡ್ತಿದ್ದಾರೆ ಅನ್ನಬೇಕೋ.? ಅನ್ನೋದೆ ಎಲ್ಲರಿಗೂ ಕನ್ಪ್ಯೂಶನ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shreyas Iyer mrunal thakur
Advertisment
Advertisment
Advertisment