Advertisment

ಸರಣಿ ಗೆಲುವಿನ ಮೇಲೆ ಟೀಮ್​ ಇಂಡಿಯಾ ಕಣ್ಣು.. ಆದರೂ ಚಿಂತೆಗೀಡು ಮಾಡಿದೆ ಇಬ್ಬರ ಫಾರ್ಮ್​..!

ಇಂಡೋ-ಆಫ್ರಿಕಾ 2ನೇ ಏಕದಿನದ ಸಮರಕ್ಕೆ ವೇದಿಕೆ ಸಜ್ಜಾಗಿದೆ. ರಾಂಚಿಯಲ್ಲಿ ರಣಾರ್ಭಟ ನಡೆಸಿದ ಟೀಮ್​ ಇಂಡಿಯಾ ರಾಯ್​​ಪುರದಲ್ಲೂ ರಗಢ್​ ಪರ್ಫಾಮೆನ್ಸ್​ ನೀಡಲು ಸಜ್ಜಾಗಿದೆ. ಒಂದು ಪಂದ್ಯ ಮೊದಲೇ ಸರಣಿ ಗೆದ್ದು ಬೀಗೋ ತವಕದಲ್ಲಿದೆ. ಅತ್ತ ಪ್ರವಾಸಿ ಸೌತ್​ ಆಫ್ರಿಕಾ ಕಮ್​ಬ್ಯಾಕ್​ ಮಾಡಲು ಕಾದು ಕುಳಿತಿದೆ.

author-image
Ganesh Kerekuli
KL Rahul (2)

KL Rahul Photograph: (BCCI)

Advertisment
  • ಇಂದು ಭಾರತ-ಸೌತ್​ ಆಫ್ರಿಕಾ 2ನೇ ಏಕದಿನ ಪಂದ್ಯ
  • ರಾಯ್​​ಪುರದಲ್ಲಿ ನಡೆಯಲಿರೋ ಏಕದಿನ ಪಂದ್ಯ
  • ಫಾರ್ಮ್​ಗೆ ಮರಳ್ತಾರಾ ಜೈಸ್ವಾಲ್​-ಋತುರಾಜ್​..?

ಇಂಡೋ-ಆಫ್ರಿಕಾ 2ನೇ ಏಕದಿನ ಪಂದ್ಯಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಮಹತ್ವದ ಕದನಕ್ಕೆ ರಾಯ್​​ಪುರದ ಶಾಹೀದ್​​ ವೀರ್​ ನಾರಾಯಣ್​​ ಸಿಂಗ್​​ ಸ್ಟೇಡಿಯಂ ಸಜ್ಜಾಗಿದೆ. ರಾಂಚಿ ರಣಾಂಗಣದಲ್ಲಿ ಜಿದ್ದಿಗೆ ಬಿದ್ದು ಹೋರಾಡಿದ ಉಭಯ ತಂಡಗಳು, ಇಂದಿನ ಪಂದ್ಯದಲ್ಲೂ ಜಿದ್ದಾಜಿದ್ದಿನ ಹೋರಾಟ ನಡೆಸಲು ಸಜ್ಜಾಗಿವೆ. ಭರ್ಜರಿ ಎಂಟರ್​ಟೈನ್​ಮೆಂಟ್​ನ ನಿರೀಕ್ಷೆಯಲ್ಲಿ ಕ್ರಿಕೆಟ್​ ಅಭಿಮಾನಿಗಳಿದ್ದಾರೆ. 

Advertisment

ಸರಣಿ ಗೆಲುವಿನ ಮೇಲೆ ಕಣ್ಣು..!

ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್​ ಟೀಮ್​ ಇಂಡಿಯಾ ಡಾಮಿನೆಂಟಿಂಗ್​ ಪರ್ಫಾಮೆನ್ಸ್​ ನೀಡ್ತು. ಇಬ್ಬನಿಯ ಕಾಟದಿಂದ ಬೌಲಿಂಗ್​ ವೇಳೆ ಹಿನ್ನಡೆ ಅನುಭವಿಸಿದ್ರೂ, ಅಂತಿಮವಾಗಿ ಗೆಲುವು ಸಾಧಿಸಿತು. 17 ರನ್​ಗಳ ಜಯ ಸಾಧಿಸಿದ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲೂ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಒಂದು ಪಂದ್ಯ ಮೊದಲೇ ಸರಣಿ ಗೆಲ್ಲೋ ತವಕದಲ್ಲಿದೆ. 

ಇದನ್ನೂ ಓದಿ:ಅಫ್ರಿದಿ ದಾಖಲೆ ಪುಡಿ ಪುಡಿ.. T20 ಕ್ರಿಕೆಟ್​ನಲ್ಲೂ ಹಿಟ್​ಮ್ಯಾನ್ ಸೂಪರ್​ಹಿಟ್..!

KL Rahul (3)

ತಿಂಗಳ ಅಂತರದ ಬಳಿಕ ಕಮ್​ಬ್ಯಾಕ್​ ಮಾಡಿದ ಟೀಮ್​ ಇಂಡಿಯಾ ಜೋಡೆತ್ತುಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ರಾಂಚಿಯಲ್ಲಿ ರಗಢ್​ ಪರ್ಫಾಮೆನ್ಸ್​ ನೀಡಿದ್ರು. ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿಸಿ ರನ್​ ಹೊಳೆ ಹರಿಸಿದ ದಿಗ್ಗಜರು ಫ್ಯಾನ್ಸ್​ಗೆ ಭರ್ಜರಿ ಎಂಟರ್​​ಟೈನ್​ಮೆಂಟ್​ ನೀಡಿದ್ರು. ಇಂದಿನ ಪಂದ್ಯದಲ್ಲಿ ಸಾಲಿಡ್​ ಫಾರ್ಮ್​​ನಲ್ಲಿರೋ ಶತಕವೀರ ವಿರಾಟ್​ ಕೊಹ್ಲಿ, ಸಿಕ್ಸರ್​ ಕಿಂಗ್​ ರೋಹಿತ್​ ಶರ್ಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಸ್ಟೇಡಿಯಂ ಅಂತೂ ಫುಲ್​ ಜಾಮ್​ಪ್ಯಾಕ್ಡ್​ ಆಗೋದ್ರಲ್ಲಿ ಡೌಟೇ ಬೇಡ.

Advertisment

ಗಿಲ್​, ಶ್ರೇಯಸ್​ ಅಯ್ಯರ್​ ಅಲಭ್ಯತೆಯಲ್ಲಿ ಯಶಸ್ವಿ ಜೈಸ್ವಾಲ್​, ಋತುರಾಜ್​​ ಗಾಯಕ್ವಾಡ್​ ಪ್ಲೇಯಿಂಗ್​ ಇಲೆವೆನ್​ಗೆ ಎಂಟ್ರಿ ಕೊಟ್ಟಿದ್ರು. ಜೈಸ್ವಾಲ್​ 18 ರನ್​ಗಳಿಸಿ ನಿರ್ಗಮಿಸಿದ್ರೆ, ಗಾಯಕ್ವಾಡ್​​ 8 ರನ್​ಗಳಿಸಿ ಔಟಾದ್ರು. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಇವರಿಬ್ಬರು ಇಂದು ಕಮ್​ಬ್ಯಾಕ್​ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಋತರಾಜ್​ಗೆ ಸ್ಥಾನ ಸಿಗುತ್ತಾ ಅನ್ನೋದೇ ದೊಡ್ಡ ಪ್ರಶ್ನೆ. ರಾಂಚಿಯಲ್ಲಿ ಬೆಂಚ್​ ಬಿಸಿ ಮಾಡಿದ್ದ ರಿಷಭ್​​ ಪಂತ್​ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. 

ಫಸ್ಟ್​ ಒಡಿಐನಲ್ಲಿ ಬ್ಯಾಟಿಂಗ್​ ವಿಭಾಗ ಬೊಂಬಾಟ್​ ಪ್ರದರ್ಶನ ನೀಡಿತು. ಬೌಲಿಂಗ್​ ವಿಭಾಗ ನಿರೀಕ್ಷೆಗೆ ತಕ್ಕ ಪರ್ಫಾಮೆನ್ಸ್​ ನೀಡಲಿಲ್ಲ. ಕೇವಲ 11 ರನ್​ಗಳಿಸುವಷ್ಟರಲ್ಲೇ ಸೌತ್​ ಆಫ್ರಿಕಾದ ಟಾಪ್​ ಆರ್ಡರ್​ನ ಮೂವರು​ ಬ್ಯಾಟರ್ಸ್​ನ ಔಟ್​ ಮಾಡಿದ್ರೂ ಕೂಡ 332 ರನ್​ ಬಿಟ್ಟು ಕೊಟ್ಟಿದ್ರು. ಸೌತ್​​ ಆಫ್ರಿಕಾದ ಮಿಡಲ್​ ಆರ್ಡರ್​ ಹಾಗೂ ಲೋವರ್​ ಆರ್ಡರ್​ ಬ್ಯಾಟರ್ಸ್​ ಇಂಡಿಯನ್​ ಬೌಲರ್​ಗಳ ವಿರುದ್ಧ ಮೇಲುಗೈ ಸಾಧಿಸಿದ್ರು. ಇಂದಿನ ಪಂದ್ಯದಲ್ಲಿ ಬೌಲಿಂಗ್​ ಯುನಿಟ್​ ಕಮ್​ಬ್ಯಾಕ್​ ಮಾಡಬೇಕಿದೆ.

ಇದನ್ನೂ ಓದಿ:ಈ ಬೆಡಗಿಗೆ ಸೋತೇ ಹೋದ ಅಯ್ಯರ್​.. ಸಿಕ್ರೇಟ್​ ರಿಲೇಷನ್​​​ಶಿಪ್​​ನಲ್ಲಿ ಬಿಗ್​ ಸ್ಟಾರ್ಸ್​..!

Advertisment

Team India (2)
Photograph: (BCCI)

ಒನ್​ ಡೇ ಓ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾಗೆ ಅದೃಷ್ಟ ಕೈಹಿಡೀತಾನೇ ಇಲ್ಲ. ಏಕದಿನ ಮಾದರಿಯಲ್ಲಿ ಸತತ 19 ಬಾರಿ ಟೀಮ್​ ಇಂಡಿಯಾ ಟಾಸ್​ ಸೋಲುಂಡಿದೆ. 2023ರ ಏಕದಿನ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಟಾಸ್​ ಗೆದ್ದಿದ್ದೇ ಕೊನೆ. ಅದಾದ ಬಳಿಕ ಅದೃಷ್ಠವೇ ಕೈ ಹಿಡಿದಿಲ್ಲ. ಇಂದಿನ ಪಂದ್ಯದಲ್ಲೂ ಡ್ಯೂ ಫ್ಯಾಕ್ಟರ್​ ಮೇಜರ್​ ರೋಲ್​ ಪ್ಲೇ ಮಾಡಲಿದೆ. ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಳ್ಳೋ ತಂಡಕ್ಕೆ ಅಡ್ವಾಂಟೇಜ್​ ಹೆಚ್ಚಿದೆ. ಇಂದಾದ್ರೂ ರಾಹುಲ್​ಗೆ ಟಾಸ್​ ಗೆಲ್ಲೋ ಅದೃಷ್ಟ ಖುಲಾಯಿಸುತ್ತಾ ಅನ್ನೋದು ಎಲ್ಲರ ಕುತೂಹಲವಾಗಿದೆ. 

ಮೊದಲ ಪಂದ್ಯ ಗೆದ್ದಿರೋ ಟೀಮ್​ ಇಂಡಿಯಾ ಆತ್ಮವಿಶ್ವಾಸದ ಅಲೆಯಲ್ಲಿದೆ. ಹಾಗಂತ ಸೌತ್​ ಆಫ್ರಿಕಾವನ್ನ ಕಡೆಗಣಿಸುವಂತಿಲ್ಲ. ಮೊದಲ ಏಕದಿನದಲ್ಲಿ ಸ್ವಲ್ಪ ಯಾಮಾರಿದ್ರೂ ಸೌತ್​ ಆಫ್ರಿಕಾ ಗೆದ್ದೇ ಬಿಡ್ತಿತ್ತು. ನಾಯಕ ಟೆಂಬಾ ಬವುಮಾ ಬೇರೆ ಇಂದಿನ ಪಂದ್ಯಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ. ಹೀಗಾಗಿ ಇಂದು ರಾಹುಲ್​ ಪಡೆ ಎಚ್ಚರಿಕೆಯ ಹೆಜ್ಜೆಯನ್ನ ಇಡಬೇಕಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KL Rahul Team India Ind vs SA India vs South Africa
Advertisment
Advertisment
Advertisment